'ಚಕ್ರವರ್ತಿ' ಬಗ್ಗೆ ಇದ್ದ ಡೌಟ್ ಕ್ಲಿಯರ್!
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಮತ್ತು ಸುದೀಪ್ ಅಭಿನಯದ 'ಹೆಬ್ಬುಲಿ' ಮತ್ತ ಚಿತ್ರಗಳ ಯಶಸ್ವಿ ಪ್ರದರ್ಶನದ ಮಧ್ಯೆ ದರ್ಶನ್ 'ಚಕ್ರವರ್ತಿ' ಮೆಜೆಸ್ಟಿಕ್ ನ ಯಾವ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತೆ ಎಂಬ ಕುತೂಹಲ ಕಾಡಿತ್ತು. ಆದ್ರೆ, ಆ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.[ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ']
ಗಾಂಧಿನಗರದಲ್ಲಿ 'ಚಕ್ರವರ್ತಿ'ಗೆ ಮೇನ್ ಥಿಯೇಟರ್ ಸಿಕ್ಕಿದ್ದು, ಈಗಾಗಲೇ ಚಿತ್ರಮಂದಿರಗಳ ಪಟ್ಟಿ ಕೂಡ ಬಿಡುಗಡೆಯಾಗಿದೆ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಚಕ್ರವರ್ತಿಯ ಅಬ್ಬರಕ್ಕೆ ದಿನಗಣನೆ ಶುರುವಾಗಿದೆ. ಮುಂದೆ ಓದಿ.....

'ಚಕ್ರವರ್ತಿ'ಗೆ ಸಂತೋಷ್ ಮೇನ್ ಥಿಯೇಟರ್
ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಬಿಡುಗಡೆಯಾಗಲಿದೆ.[ದಿನಕರ್ 'ಕೇಡಿ' ಆಗಲು ಕಾರಣ 'ಆ' ಒಬ್ಬ ವ್ಯಕ್ತಿ! ಯಾರದು?]

ಈ ವಾರ 'ಹೆಬ್ಬುಲಿ' ಎತ್ತಂಗಡಿ
ಪ್ರಸ್ತುತ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ 'ಹೆಬ್ಬುಲಿ' ಈ ವಾರ ಎತ್ತಂಗಡಿಯಾಗುತ್ತಿದೆ. ಸದ್ಯ, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ಸುದೀಪ್ ಸಿನಿಮಾ 50 ದಿನಗಳನ್ನ ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.['ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ' ಎಂಟ್ರಿ! 'ಸಂತೋಷ್' ಯಾರಿಗೆ?]

ಥಿಯೇಟರ್ ಲಿಸ್ಟ್ ಅನೌನ್ಸ್!
ಈಗಾಗಲೇ 'ಚಕ್ರವರ್ತಿ' ಚಿತ್ರದ ಥಿಯೇಟರ್ ಲಿಸ್ಟ್ ಅನೌನ್ಸ್ ಆಗಿದ್ದು,
ಮೆಜೆಸ್ಟಿಕ್ ನ ಸಂತೋಷ್, ಮಾಗಡಿ ರಸ್ತೆಯ ಪ್ರಸನ್ನ, ಉಮಾ, ಸಿದ್ದೇಶ್ವರ, ಕಾಮಾಕ್ಯ, ವೀರಭದ್ರೇಶ್ವರ, ಶ್ರೀನಿವಾಸ, ವೈಷ್ಣವಿ ಚಿತ್ರಮಂದಿರಗಳು ಸೇರಿದಂತೆ ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಕ್ರವರ್ತಿ ಅಬ್ಬರಿಸಿಲಿದೆ.['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']

ಏಪ್ರಿಲ್ 14ರಂದು 'ಚಕ್ರವರ್ತಿ' ಅಬ್ಬರ
'ಚಕ್ರವರ್ತಿ' ಇದೇ ತಿಂಗಳು 14ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ಸಿದ್ದಾಂತ್ ನಿರ್ಮಾಣ ಮಾಡಿದ್ದಾರೆ. ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಚಾರುಲತಾ, ದೀಪಾ ಸನ್ನಿಧಿ, ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.


Click it and Unblock the Notifications











