»   » ವ್ಹಾವ್! ಪವರ್ ಸ್ಟಾರ್ ಮನೆಯಲ್ಲಿ ಕಾಲಿವುಡ್ ಸ್ಟಾರ್ಸ್ ಸೆಲ್ಫಿ

ವ್ಹಾವ್! ಪವರ್ ಸ್ಟಾರ್ ಮನೆಯಲ್ಲಿ ಕಾಲಿವುಡ್ ಸ್ಟಾರ್ಸ್ ಸೆಲ್ಫಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಖತ್ ಬ್ಯುಸಿ ಶೆಡ್ಯೂಲ್ ಹಾಗೂ ಟಾಪ್ ನಲ್ಲಿರೋ ನಟ ಯಾರು ಅಂದರೆ ಅದು ಪುನೀತ್ ರಾಜ್ ಕುಮಾರ್ ಅಂತ ಹೇಳಬಹುದು. ಈಗಾಗಲೇ ಎರಡು ಬಿಗ್ ಬಜೆಟ್ ನ ಚಿತ್ರಗಳಾದ 'ದೊಡ್ಮನೆ ಹುಡುಗ' ಹಾಗೂ 'ಚಕ್ರವ್ಯೂಹ' ಚಿತ್ರದ ಶೂಟಿಂಗ್ ನಲ್ಲಿ ಪವರ್ ಸ್ಟಾರ್ ಬ್ಯುಸಿಯಾಗಿದ್ದಾರೆ.

ಅಂದಹಾಗೆ 'ದೊಡ್ಮನೆ ಹುಡುಗ' ಚಿತ್ರದೊಂದಿಗೆ ಅಪ್ಪು ಅವರ 25ನೇ ಚಿತ್ರ 'ಚಕ್ರವ್ಯೂಹ' ಕೂಡ ಚಿತ್ರೀಕರಣದ ಹಂತದಲ್ಲಿದ್ದು, ಗಾಂಧಿನಗರದಲ್ಲಿ ಸಖತ್ ಸುದ್ದಿಯಲ್ಲಿದೆ.

ಇದೀಗ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದಿಂದ ಬಂದಿರೋ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಕಾಲಿವುಡ್ ಸ್ಟಾರ್ ನಟರಾದ ಆರ್ಯ, ಸಿಂಹ ಮತ್ತು ಕಾರ್ತಿಕ್ ಸುಬ್ಬರಾಜು ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದರು.

Chakravyuha's Kollywood Connection: Actor Arya Bonding With Puneeth Rajkumar

ವಿಷ್ಯಾ ಏನಪ್ಪಾ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಚಿತಾ ರಾಮ್ ಒಂದಾಗಿ ಕಾಣಿಸಿಕೊಂಡಿರುವ 'ಚಕ್ರವ್ಯೂಹ' ಚಿತ್ರಕ್ಕೂ ಕಾಲಿವುಡ್ ಗೂ ಸ್ವಲ್ಪ ಮಟ್ಟಿಗೆ ಸಂಬಂದವಿದೆ. ತಮಿಳು ಸಿನಿಮಾ 'ಎನ್ನೈ ಅರಿಂದಾಲ್' ನಟ ಅರುಣ್ ವಿಜಯ್ ಅವರು ಪುನೀತ್ ಚಕ್ರವ್ಯೂಹದಲ್ಲಿ ವಿಲನ್ ರೋಲ್ ನಲ್ಲಿ ಮಿಂಚಿರುವುದರಿಂದ ಕಾಲಿವುಡ್ ಸ್ಟಾರ್ ನಟರು ಬೆಂಗಳೂರಿಗೆ ಭೇಟಿ ನೀಡಿದ್ದರು.

ಅಲ್ಲದೇ ಪುನೀತ್ 'ಚಕ್ರವ್ಯೂಹ' ಚಿತ್ರದ ನಿರ್ದೇಶಕ ಎಮ್. ಸರವಣನ್ ಕೂಡ ತಮಿಳಿನವರಾಗಿದ್ದು, ತಮಿಳು 'ಎಂಗೇಯುಮ್ ಎಪ್ಪೋದುಮ್' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದೀಗ ತಮಿಳು ಸ್ಟಾರ್ ನಟರಾದ ಆರ್ಯ, ಸಿಂಹ ಹಾಗೂ ಕಾರ್ತಿಕ್ ಸುಬ್ಬರಾಜು ಅವರು ಪುನೀತ್ ಅವರ ಮನೆಗೆ ಕ್ಯಾಶುವಲ್ ವಿಸಿಟ್ ಮಾಡಿದ್ದು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Chakravyuha's Kollywood Connection: Actor Arya Bonding With Puneeth Rajkumar

ಇನ್ನು 'ಜಾಕಿ' ಹಾಗೂ 'ಅಣ್ಣಬಾಂಡ್' ಚಿತ್ರದ ನಂತರ ನಿರ್ದೇಶಕ ದುನಿಯಾ ಸೂರಿ ಹಾಗು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮತ್ತೊಮ್ಮೆ 'ದೊಡ್ಮನೆ ಹುಡುಗ' ಚಿತ್ರದ ಮೂಲಕ ಒಂದಾಗಿದ್ದು, ಆಕ್ಷನ್-ಕಮ್ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಸಿನಿಮಾ ಸದ್ಯದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ.

English summary
The lastest news is Kollywood celebs actor Arya, Simha and Karthik Subbaraj has visited Puneeth Rajkumar's residence at Sadhashivnagara, Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada