twitter
    For Quick Alerts
    ALLOW NOTIFICATIONS  
    For Daily Alerts

    'ಚಲನಚಿತ್ರ ಅಕಾಡೆಮಿ ಪ್ರಶಸ್ತಿ': ಯಾರ್ಯಾರಿಗೆ, ಯಾವ ಕ್ಷೇತ್ರಕ್ಕೆ?

    By Bharath Kumar
    |

    2015-16ನೇ ಸಾಲಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ 15 ಜನ ಸಾಧಕರಿಗೆ ಈ ಬಾರಿ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.[ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಸೇರಿದಂತೆ 15 ಜನರಿಗೆ 'ಅಕಾಡೆಮಿ ಪ್ರಶಸ್ತಿ]

    ನಟ ಶ್ರೀನಿವಾಸ ಮೂರ್ತಿ, ದೊಡ್ಡಣ್ಣ, ಹಾಸ್ಯ ನಟ ಎಂ.ಎಸ್. ಉಮೇಶ್, ಬಿವಿ ರಾಧ, ಸೇರಿದಂತೆ ವಿವಿಧ ಕ್ಷೇತ್ರದ 15 ಕಲಾವಿದರಿಗೆ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. 2015-16ನೇ ಸಾಲಿನಲ್ಲಿ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪಡೆದವರ ಪಟ್ಟಿ ಮತ್ತು ಅವರ ಕಿರು ಪರಿಚಯ ಇಲ್ಲಿದೆ.

    'ಆರ್.ನಾಗೇಂದ್ರ ರಾವ್ ಪ್ರಶಸ್ತಿ'-ಶ್ರೀನಿವಾಸ ಮೂರ್ತಿ

    'ಆರ್.ನಾಗೇಂದ್ರ ರಾವ್ ಪ್ರಶಸ್ತಿ'-ಶ್ರೀನಿವಾಸ ಮೂರ್ತಿ

    ಕನಾರ್ಟಕ ಚಲನಚಿತ್ರ ಅಕಾಡೆಮಿ ವತಿಯಿಂದ, ಆರ್.ನಾಗೇಂದ್ರ ರಾವ್ ಅವರ ಹೆಸರಲ್ಲಿ ನೀಡಲಾಗುವ 'ಅಭಿನಯ ನಟ' ಪ್ರಶಸ್ತಿಗೆ, ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರನ್ನ ಆಯ್ಕೆ ಮಾಡಲಾಗಿದೆ. ಡಾ.ಸಿದ್ದಲಿಂಗಯ್ಯ ಅವರ 'ಹೇಮಾವತಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪರಿಚಯವಾದ ಶ್ರೀನಿವಾಸ ಮೂರ್ತಿ, 'ಕವಿರತ್ನ ಕಾಳಿದಾಸ', 'ಕೆರೆಳಿದ ಸಿಂಹ', 'ವಸಂತ ಗೀತೆ', 'ಹೊಸ ಬೆಳಕು', 'ಭಕ್ತ ಸಿರಿಯಾಳ', ಸೇರಿದಂತೆ 250 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದಷ್ಟೆ ಅಲ್ಲದೆ, ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.

    'ಎಂ.ವಿ.ರಾಜಮ್ಮ ಪ್ರಶಸ್ತಿ'-ಆದವಾನಿ ಲಕ್ಷ್ಮೀದೇವಿ

    'ಎಂ.ವಿ.ರಾಜಮ್ಮ ಪ್ರಶಸ್ತಿ'-ಆದವಾನಿ ಲಕ್ಷ್ಮೀದೇವಿ

    60-70ರ ದಶಕದ ಖ್ಯಾತ ಪೋಷಕ ನಟಿ ಆದವಾನಿ ಲಕ್ಷ್ಮೀದೇವಿ. ಮೂಲತಃ ಗುಬ್ಬಿ ಕಂಪನಿ, ಕಟೀಲು ಕಂಪನಿಯ ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ಲಕ್ಷ್ಮೀದೇವಿ, 1957 ರಲ್ಲಿ 'ಭಕ್ತ ವಿಜಯ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ 'ಶುಕ್ರದೆಸೆ' ಚಿತ್ರದಲ್ಲಿ ನಾಯಕಿಯಾಗಿ ಆವಕಾಶ ಪಡೆದ ಈ ನಟಿ, 'ದಶಾವತಾರ', 'ಕಲಿತರೂ ಹೆಣ್ಣೇ', 'ಶ್ರೀ ರಾಮಾಂಜನೇಯ ಯುದ್ಧ', 'ವೀರ ಸಂಕಲ್ಪ', ಸೇರಿದಂತೆ ಹಲವರು ಚಿತ್ರಗಳಲ್ಲಿ ಅಭಿನಯಿಸಿದರು. 'ಗಂದಧ ಗುಡಿ' ಚಿತ್ರದ ಮಮತಾಮಯಿ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಗಳಿಸಿದ್ದರು. ಈಗ ಎಂ.ವಿ.ರಾಜಮ್ಮ ಅವರ ಹೆಸರಲ್ಲಿ ನೀಡುವ ಅಕಾಡೆಮಿ ಪ್ರಶಸ್ತಿಗೆ ಲಕ್ಷ್ಮೀದೇವಿ ಆಯ್ಕೆಯಾಗಿದ್ದಾರೆ.

    'ಪಂಡರೀಬಾಯಿ ಪ್ರಶಸ್ತಿ'-ಬಿ.ವಿ.ರಾಧಾ

    'ಪಂಡರೀಬಾಯಿ ಪ್ರಶಸ್ತಿ'-ಬಿ.ವಿ.ರಾಧಾ

    ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಬಿ.ವಿ ರಾಧ ಅವರು, ಇದುವರೆಗೂ 175ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ನವಕೋಟಿ ನಾರಾಯಣ' ಚಿತ್ರದಿಂದ ಆರಂಭವಾದ ಇವರ ಸಿನಿ ಪಯಣದಲ್ಲಿ, ನಾಯಕಿಯಾಗಿ, ಎರಡನೇ ನಾಯಕಿಯಾಗಿ, ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 'ದೇವರು ಕೊಟ್ಟ ತಂಗಿ', 'ಬೆಂಗಳೂರು ಮೈಲ್', 'ಅನೀರಿಕ್ಷಿತ', 'ಯಾವ ಜನ್ಮದ ಮೈತ್ರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ನಟಿಯಾಗಿ ಮಾತ್ರವಲ್ಲದೇ, ನಿರ್ಮಾಪಕಿಯಾಗಿಯೂ ತೊಡಗಿಸಿಕೊಂಡಿದ್ದ ಬಿ.ವಿ ರಾಧ ಅವರು, ಹಿರಿಯ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಅವರು ಪತ್ನಿ. ಈ ಸಾಲಿನ ಪಂಡರೀಬಾಯಿ ಪ್ರಶಸ್ತಿಗೆ ಬಿ.ವಿ ರಾಧ ಅವರು ಭಾಜನರಾಗಿದ್ದಾರೆ.

    'ಬಾಲಕೃಷ್ಣ ಪ್ರಶಸ್ತಿ'-ಎಂ.ಎಸ್ ಉಮೇಶ್

    'ಬಾಲಕೃಷ್ಣ ಪ್ರಶಸ್ತಿ'-ಎಂ.ಎಸ್ ಉಮೇಶ್

    1960 ರಲ್ಲಿ ಮೂಡಿಬಂದ 'ಮಕ್ಕಳ ರಾಜ್ಯ' ಚಿತ್ರದ ಮೂಲಕ ಬಾಲನಟನಾಗಿ ಎಂಟ್ರಿ ಕೊಟ್ಟ ಎಂ.ಎಸ್ ಉಮೇಶ್, ಹಾಸ್ಯ ನಟನಾಗಿ 220ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಮುನಿತಾಯಿ' ಚಿತ್ರದ ಪೋಷಕ ನಟನೆಗಾಗಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ನೀಡಿದೆ. ಈಗ ಅಕಾಡೆಮಿ ಹಾಸ್ಯ ನಟ ಬಾಲಕೃಷ್ಣ ಅವರ ಹೆಸರಲ್ಲಿ ನೀಡುವ ಹಾಸ್ಯ ನಟ ಪ್ರಶಸ್ತಿಯನ್ನ ನೀಡಿ ಗೌರವಿಸುತ್ತಿದೆ.

    'ತೂಗುದೀಪ ಶ್ರೀನಿವಾಸ್ ಪ್ರಶಸ್ತಿ'-ದೊಡ್ಡಣ್ಣ

    'ತೂಗುದೀಪ ಶ್ರೀನಿವಾಸ್ ಪ್ರಶಸ್ತಿ'-ದೊಡ್ಡಣ್ಣ

    ತೂಗುದೀಪ ಶ್ರೀನಿವಾಸ್ ಅವರ ನೆನಪಿನಲ್ಲಿ ನೀಡುವ ಖಳ ನಟ ಪ್ರಶಸ್ತಿಯನ್ನ ಈ ಬಾರಿ ನಟ ದೊಡ್ಡಣ್ಣ ಅವರಿಗೆ ನೀಡಲಾಗುತ್ತಿದೆ. ಸುಮಾರು 200 ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ದೊಡ್ಡಣ್ಣ ಅವರ ಮೊದಲ ಚಿತ್ರ ''ಕೂಡಿ ಬಾಳಿದರೇ ಸ್ವರ್ಗ ಸುಖ''. ಖಳನಟ, ಹಾಸ್ಯ ನಟನಾಗಿ ವಿಶೇಷ ಗಮನ ಸೆಳೆದಿರುವ ದೊಡ್ಡಣ್ಣ, 'ಬೆಳ್ಳಿ ಮೋಡಗಳು', 'ರಾಣಿ ಮಹಾರಣಿ', 'ಹಲೋ ಯಮ', 'ಸಿ.ಬಿ.ಐ ಶಂಕರ್', 'ರಣಚಂಡಿ', 'ಪ್ರಜಾಶಕ್ತಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. 'ಟುವ್ವಿ ಟುವ್ವಿ ಟುವ್ವಿ' ಚಿತ್ರದ ಅಭಿನಯಕ್ಕಾಗಿ 1998-99ನೇ ಸಾಲಿನಲ್ಲಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಯನ್ನ ಪಡೆದಿದ್ದರು.

    ಬಿ.ಆರ್.ಪಂತುಲು ಪ್ರಶಸ್ತಿ-ಕೆ.ವಿ ರಾಜು

    ಬಿ.ಆರ್.ಪಂತುಲು ಪ್ರಶಸ್ತಿ-ಕೆ.ವಿ ರಾಜು

    ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ ಹಾಗೂ ಚಿತ್ರಸಾಹಿತಿ ಕೆ.ವಿ ರಾಜು. 'ಬಂಧಮುಕ್ತ', 'ಸಂಗ್ರಾಮ', 'ಅಭಿಜಿತ್', 'ಯುದ್ಧಕಾಂಡ', 'ಇಂದ್ರಜಿತ್', 'ಸುಂದರಕಾಂಡ', 'ಬೆಳ್ಳಿಮೋಡಗಳು', 'ಬೆಳ್ಳಿಕಾಲುಂಗುರ', 'ಹುಲಿಯಾ' ಹೀಗೆ ಇವರ ನಿರ್ದೇಶನದಲ್ಲಿ ಬಂದ ಬಹುತೇಕ ಎಲ್ಲ ಸಿನಿಮಾವೂ ಸೂಪರ್ ಹಿಟ್ ಚಿತ್ರಗಳೇ. 50ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಹೀಗಾಗಿ, ಅಕಾಡೆಮಿ ವತಿಯಿಂದ ಬಿಆರ್ ಪಂತುಲು ಪ್ರಶಸ್ತಿ ಸಿಕ್ಕಿದೆ.

    'ಶಂಕರ್ ಸಿಂಗ್ ಪ್ರಶಸ್ತಿ'-ಸಿ.ಜಯರಾಂ

    'ಶಂಕರ್ ಸಿಂಗ್ ಪ್ರಶಸ್ತಿ'-ಸಿ.ಜಯರಾಂ

    ಸದಭಿರುಚಿಯ ಚಿತ್ರಗಳಿಗೆ ಹಸೆರು ವಾಸಿಯಾದವರು ನಿರ್ಮಾಪಕ ಸಿ.ಜಯರಾಂ. 'ಪಾವನಾಗಂಗಾ', 'ಅನುಪಮಾ', 'ನಾ ನಿನ್ನ ಬಿಡಲಾರೆ', 'ರಾಮಾಪುರದ ರಾವಣ' ಮುಂತಾದ ಚಿತ್ರಗಳನ್ನ ನಿರ್ಮಿಸಿದ ಖ್ಯಾತಿ ಇವರದ್ದು. ರಾಜ್ ಕುಮಾರ್ ಅಭಿನಿಯಿಸಿದ್ದ 'ಕಾಮನಬಿಲ್ಲು' ಚಿತ್ರಕ್ಕೂ ಬಂಡವಾಳ ಹಾಕಿದ್ದರು.

    'ಜಿವಿ ಅಯ್ಯರ್ ಪ್ರಶಸ್ತಿ'-ಬಿ.ಕೆ.ಸುಮಿತ್ರಾ

    'ಜಿವಿ ಅಯ್ಯರ್ ಪ್ರಶಸ್ತಿ'-ಬಿ.ಕೆ.ಸುಮಿತ್ರಾ

    ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ಜಿವಿ ಅಯ್ಯರ್ ಪ್ರಶಸ್ತಿ ಬಿ.ಕೆ ಸುಮಿತ್ರಾ ಅವರ ಮುಡಿಗೇರಿಸಿಕೊಂಡಿದ್ದಾರೆ. ''ಮಧುರ ಮಧುರುವೀ ಮಂಜುಳ ಗಾನ'' ಹಾಡಿನ ಮೂಲಕ ಪ್ರಸಿದ್ದರಾದ ಸುಮಿತ್ರಾ ಅವರು, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಗಾಯಕಿಯಾಗಿದ್ದಾರೆ. ಇವರು 'ಕನ್ನಡದ ಕೋಗಿಲೆ' ಎಂದೇ ಹೆಸರು ವಾಸಿ. ಜಿವಿ ಅಯ್ಯರ್ ಪ್ರಶಸ್ತಿಯನ್ನ ಈ ಬಾರಿ ಗಾಯಕಿ ಬಿ.ಕೆ.ಸುಮಿತ್ರಾ ಅವರು ಪಡೆಯುತ್ತಿದ್ದಾರೆ.

    'ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ'-ಡಾ.ಬಿ.ಎಲ್ ವೇಣು

    'ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ'-ಡಾ.ಬಿ.ಎಲ್ ವೇಣು

    ಡಾ.ಬಿ.ಎಲ್ ವೇಣು ಚಿತ್ರಕಥಾ, ಸಂಭಾಷಣೆ, ಕಾದಂಬರಿಕಾರರಾಗಿದ್ದರು. 25 ಕಾದಂಬರಿ, 5 ಕಥಾ ಸಂಕಲನ, 4ನಾಟಕಗಳನ್ನ ರಚಿಸಿರುವ ಬಿ.ಎಲ್ ವೇಣು ಅವರು ಮೊದಲು ಸಂಭಾಷಣೆ ರಚಿಸಿದ ಚಿತ್ರ 'ದೊಡ್ಮನೆ ಎಸ್ಟೇಟ್', 'ಪರಾಜಿತ್', 'ಅಜೇಯ', 'ಪ್ರೀತಿ ವಾತ್ಸಲ್ಯ', 'ಪ್ರೇಮಜಾಲ', 'ರಾಮಾರಾಜ್ಯದಲ್ಲಿ ರಾಕ್ಷಸರು' ಚಿತ್ರಗಳು ಅದೇ ಹೆಸರಿನಲ್ಲಿ ವೇಣು ಅವರು ರಚಿಸಿದ್ದ ಕಾಧಂಬರಿ ಆಧಾರಿತ ಚಿತ್ರಗಳು. 'ಒಲವಿನ ಉಡುಗೊರೆ', 'ಮೂರು ಜನ್ಮ', 'ಜನನಾಯಕ', 'ವೀರಪ್ಪ ನಾಯಕ' ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. 1983-84ರಲ್ಲಿ 'ಅಪರಂಜಿ' ಚಿತ್ರಕ್ಕಾಗಿ ಅತ್ಯುತ್ತಮ, ಸಂಭಾಷಣೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.

    'ಎಸ್. ರಂಗ ಪ್ರಶಸ್ತಿ'-ಎಸ್.ವಿ.ಶ್ರೀಕಾಂತ್

    'ಎಸ್. ರಂಗ ಪ್ರಶಸ್ತಿ'-ಎಸ್.ವಿ.ಶ್ರೀಕಾಂತ್

    ಕನನಡ ಚಿತ್ರರಂಗದ ಪ್ರತಿಭಾಶಾಲಿ ಛಾಯಗ್ರಾಹಕ ಎಸ್.ವಿ ಶ್ರೀಕಾಂತ್. ಜೀವನ ತರಂಗ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಛಾಯಾಗ್ರಾಹಕರಾದ ಶ್ರೀಕಾಂತ್, 'ಮಾರ್ಗದರ್ಶಿ', 'ಗೆಜ್ಜೆಪೂಜೆ', 'ಉಪಾಸನೆ' ಮೊದಲಾದ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಈ ಮೂರು ಚಿತ್ರಗಳಿಗೂ ಶ್ರೀಕಾಂತ್ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ.

    'ಎಂ.ಪಿ ಶಂಕರ್ ಪ್ರಶಸ್ತಿ'- ದೇವಿ

    'ಎಂ.ಪಿ ಶಂಕರ್ ಪ್ರಶಸ್ತಿ'- ದೇವಿ

    ಭರತನಾಟ್ಯ, ಕುಚುಪುಡಿ, ಕಥಕ್ಕಳಿ, ಮಣಿಪುರಿ ನೃತ್ಯಗಳಲ್ಲಿ ಪರಿಶ್ರಮ ಹೊಂದಿದ್ದ ದೇವಿ, ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನೃತ್ಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ರಾಜ್ ಕುಮಾರ್ 25 ಚಿತ್ರಗಳಿಗೆ ಸಹ ನೃತ್ಯ ನಿರ್ದೇಶಕಿಯಾಗಿದ್ದಾರೆ. ಸ್ವತಂತ್ರ ನಿರ್ದೇಶಕಿಯಾಗದೆ, ತಮ್ಮ ಉಡುಪಿ ಜಯಾರಂ ಅವರು ಸಹಾಯಕಿಯಾಗಿಯೇ ಗುರುತಿಸಿಕೊಂಡಿದ್ದರು.

    'ಶಂಕರ್ ನಾಗ್ ಪ್ರಶಸ್ತಿ' -ಎನ್.ಎಲ್.ರಾಮಣ್ಣ

    'ಶಂಕರ್ ನಾಗ್ ಪ್ರಶಸ್ತಿ' -ಎನ್.ಎಲ್.ರಾಮಣ್ಣ

    ಚಲನಚಿತ್ರ ನಿರ್ಮಾಣ ನಿರ್ವಾಹಕಾರಗಿ ಕಳೆದ 5 ದಶಕಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ ರಾಮಣ್ಣ. 1964 ರಲ್ಲಿ ಶಿವಗಂಗಾ ಮಹಾಥ್ಮೆ ಚಿತ್ರದ ಮೂಲಕ ನಿರ್ಮಾಣ ನಿರ್ವಾಹಕರಾದ ರಾಮಣ್ಣ, ಇದುವೆರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

    'ಕೆ.ಎನ್.ಟೈಲರ್ ಪ್ರಶಸ್ತಿ'-ರಾಮ್ ಶೆಟ್ಟಿ

    'ಕೆ.ಎನ್.ಟೈಲರ್ ಪ್ರಶಸ್ತಿ'-ರಾಮ್ ಶೆಟ್ಟಿ

    ಮೂಲತಃ ಮಂಗಳೂರಿನವರದಾ ರಾಮ ಶೆಟ್ಟಿ ಅವರು 750ಕ್ಕು ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿದ್ದಾರೆ. ಕನ್ನಡ, ಹಿಂದಿ, ಸೇರಿದಂತೆ ಮಾತೃಭಾಷೆ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣಕಾರರಾಗಿ ದುಡಿದಿದ್ದಾರೆ.

    ವೀರಾಸ್ವಾಮಿ ಪ್ರಶಸ್ತಿ ಮತ್ತು ಬಿ ಜಯಮ್ಮ ಪ್ರಶಸ್ತಿ

    ವೀರಾಸ್ವಾಮಿ ಪ್ರಶಸ್ತಿ ಮತ್ತು ಬಿ ಜಯಮ್ಮ ಪ್ರಶಸ್ತಿ

    ಶ್ರೀ ಸಿದ್ದಲಿಂಗೇಶ್ವರ ಎಂಟರ್ ಪ್ರೈಸಸ್ ಮಾಲೀಕರು ಕುಮಾರ್ ಶೆಟ್ಟರಿಗೆ, ಬಿ ಜಯಮ್ಮ ಪ್ರಶಸ್ತಿ ಲಭಿಸಿದೆ. ಕನ್ನಡ ಮತ್ತು ಮುಂಬೈನ ದೊಡ್ಡ ಚಿತ್ರಗಳನ್ನ ವಿತರಿಸುತ್ತಾ ಬಂದಿರುವ ಪಾಲ್ ಎಸ್ ಚಂದಾನಿ ವೀರಾಸ್ವಾಮಿ ಪ್ರಶಸ್ತಿ ನೀಡಲಾಗುತ್ತಿದೆ.

    English summary
    The Karnataka Chalanachitra Academy has announced its annual awards for Kannada film Personalities. Here is a brief profile of the winners.
    Wednesday, March 1, 2017, 11:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X