ಸೆಲ್ಫಿ ಕ್ರೇಜ್‌ನಲ್ಲಿ 'ಆಟೋಗ್ರಾಫ್' ಮರೆಯುತ್ತಿದ್ದಾರಾ ಫ್ಯಾನ್ಸ್? 'ಸಹಿ'ಯಲ್ಲೂ ದರ್ಶನ್ ಕನ್ನಡ 'ಕ್ರಾಂತಿ'!

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಡರೆ ಅಭಿಮಾನಿಗಳಿಗೆ ಅದೇನೋ ಪ್ರೀತಿ. ದರ್ಶನ್‌ಗಾಗಿ ಅಭಿಮಾನಿಗಳು ಏನು ಬೇಕಾದರೂ ಮಾಡುತ್ತಾರೆ. ಕಷ್ಟದಲ್ಲಿದಾಗ, ಸುಖದಲ್ಲಿದ್ದಾಗ ಅಭಿಮಾನಿಗಳು ಜೊತೆಯಲ್ಲಿಯೇ ನಿಲ್ಲುತ್ತಾರೆ. ಅದಕ್ಕೆ ಡಿ ಬಾಸ್ ಹುಟ್ಟುಹಬ್ಬಕ್ಕೆ ಅದೇನೆ ಕೆಲಸವಿದ್ದರೂ ಬಿಟ್ಟು ಅವರ ಮನೆ ಮುಂದೆ ಹಾಜರಿ ಹಾಕಿ ಬಿಡುತ್ತಾರೆ.

ಇಂದು (ಫೆಬ್ರವರಿ 16) ದರ್ಶನ್ 46ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ ಅವರ ಮನೆ ಮುಂದೆ ಸೇರಿರುವ ಅಭಿಮಾನಿಗಳನ್ನು ನೋಡಿದ್ರೆ, ಅವರಿಗಿರೋ ಕ್ರೇಜ್ ಏನು ಅಂತ ಗೊತ್ತಾಗುತ್ತೆ. ಆದರೆ, ಇತ್ತೀಚೆಗೆ ಅಭಿಮಾನಿಗಳು ಒಂದು ಸಂಪ್ರದಾಯವನ್ನು ಮರೆತಿದ್ದಾರೆನೋ ಅಂತ ಅನಿಸೋಕೆ ಶುರುವಾಗಿದೆ.

ಇದೇ ನಾಲ್ಕೈದು ವರ್ಷಗಳ ಹಿಂದೆ ತಮ್ಮ ನೆಚ್ಚಿನ ನಟ ದರ್ಶನ್ ಎದುರಿಗೆ ಬಂದರೆ ಸಾಕು, ತಮ್ಮ ಕಾರಿನ ಮೇಲೋ, ಆಟೋ ಮೇಲೋ, ಇಲ್ಲ ಕೈ ಮೇಲೋ ಅವರದ್ದೊಂದು 'ಆಟೋಗ್ರಾಫ್' ಹಾಕಿಸಿಕೊಳ್ಳುತ್ತಿದ್ದರು. ಆದ್ರೀಗ ಸೆಲ್ಫಿ ಕ್ರೇಜ್‌ ಮಧ್ಯೆ ಆಟೋಗ್ರಾಫ್ ಅನ್ನೇ ಮರೆತು ಬಿಟ್ಟಿದ್ದಾರೆ ಅಂತ ಅನಿಸುತ್ತಿದೆ. ಅಸಲಿಗೆ ದರ್ಶನ್ 'ಆಟೋಗ್ರಾಫ್' ಹೇಗಿದೆ? ಅವರ ಸಹಿ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ನೋಡಿ.

 'ಆಟೋಗ್ರಾಫ್'ಗಿಂತ 'ಸೆಲ್ಫಿ' ಮೇಲೆ ಒಲವು

'ಆಟೋಗ್ರಾಫ್'ಗಿಂತ 'ಸೆಲ್ಫಿ' ಮೇಲೆ ಒಲವು

ಒಂದು ಕಾಲದಲ್ಲಿ ಅಭಿಮಾನಿಗಳ ಮಧ್ಯೆ ದರ್ಶನ್ ಏನಾದರೂ ಸಿಕ್ಕಿಬಿದ್ದರೆ, ಅಭಿಮಾನಿಗಳು ಆಟೋಗ್ರಾಫ್‌ಗಾಗಿ ಮುಗಿಬೀಳುತ್ತಿದ್ದರು. ಇತ್ತ ದರ್ಶನ್ ಕೂಡ 'ಆಟೋಗ್ರಾಫ್' ಕೊಟ್ಟು ಸುಸ್ತಾಗಿಬಿಡುತ್ತಿದ್ದರು. ಅದ್ಯಾವಾಗ, ಮೊಬೈಲ್, ಸೆಲ್ಫಿ ಕ್ರೇಜ್ ಹೆಚ್ಚಾಯ್ತೋ ಅಲ್ಲಿಂದ 'ಆಟೋಗ್ರಾಫ್' ತೆಗೆದುಕೊಳ್ಳುವುದನ್ನೇ ಮರೆತುಬಿಟ್ಟಿದ್ದಾರೆ. ಆದರೆ, ದರ್ಶನ್ ಅಭಿಮಾನಿಗಳಿಗೆ ನೀಡುವ ಆಟೋಗ್ರಾಫ್ ಹೇಗಿದೆ ಗೊತ್ತಾ? ಅವರು ಸಹಿ ಮಾಡೋ ಶೈಲಿ ಹೇಗಿದೆ ನೋಡಿದ್ದೀರಾ?

 ಕನ್ನಡದಲ್ಲೇ 'ಆಟೋಗ್ರಾಫ್'

ಕನ್ನಡದಲ್ಲೇ 'ಆಟೋಗ್ರಾಫ್'

ದರ್ಶನ್ ತಮ್ಮ ಸೆಲೆಬ್ರೆಟಿಗಳಿಗೆ ಅದೆಷ್ಟೋ ಬಾರಿ ಆಟೋಗ್ರಾಫ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಅಭಿಮಾನಿಗಳೂ ಮರೆತಿದ್ದಾರೆ. ಸೆಲೆಬ್ರೆಟಿಗಳಿಂದ ದರ್ಶನ್ ಕೂಡ ಆಟೋಗ್ರಾಫ್ ಕೊಡುವುದನ್ನು ಮರೆತಿದ್ದಾರೆ. ಆದರೆ, ಈ ಹಿಂದೆ ನೀಡಿರುವ ದರ್ಶನ್ 'ಆಟೋಗ್ರಾಫ್‌' ಸಖತ್ತಾಗಿದೆ. ದರ್ಶನ್ ಯಾವಾಗಲೂ ಅಚ್ಚ ಕನ್ನಡದಲ್ಲಿಯೇ ಸಹಿ ಹಾಕುತ್ತಾರೆ. ಹಾಗಂತ ಕೇವಲ ಕನ್ನಡದಲ್ಲಷ್ಟೇ ಅಲ್ಲ. ಸ್ಟೈಲಿಶ್ ಆಗಿಯೂ ಇದೆ.

 ಆಟೋ, ಕಾರಿನ ಮೇಲೂ ಆಟೋಗ್ರಾಫ್

ಆಟೋ, ಕಾರಿನ ಮೇಲೂ ಆಟೋಗ್ರಾಫ್

ಅಭಿಮಾನಿಗಳು ದರ್ಶನ್ ಬಳಿ ಸುಮ್‌ಸುಮ್ಮನೆ ಬರೋದಿಲ್ಲ. ತಮ್ಮ ಆಟೋದಲ್ಲೋ, ಬೈಕ್‌ನಲ್ಲೋ ಇಲ್ಲಾ ಕಾರಿನಲ್ಲೋ ಬರುತ್ತಾರೆ. ಬಂದಾಗಲೆಲ್ಲಾ ತಮ್ಮ ಕಾರಿನ ಮೇಲೆ, ಆಟೋ ಮೇಲೆ ದರ್ಶನ್ ಹಸ್ತಾಕ್ಷರವನ್ನು ಹಾಕಿಸಿಕೊಳ್ಳುತ್ತಿದ್ದರು. ಅಂತಹ ಎಷ್ಟೋ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತೆ. ಆದ್ರೀಗ ಅದೇ ಸಂಸ್ಕೃತಿ ಸೆಲ್ಫಿಯಾಗಿ ಬದಲಾಗಿದೆ.

 ಬರ್ತ್‌ಡೇಯಂದೇ ಹೊಸ ಸಿನಿಮಾ ಅನೌನ್ಸ್

ಬರ್ತ್‌ಡೇಯಂದೇ ಹೊಸ ಸಿನಿಮಾ ಅನೌನ್ಸ್

'ಕ್ರಾಂತಿ' ಬಳಿಕ 'ಕಾಟೇರ' ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಮುಂದೆ ಯಾವ ಸಿನಿಮಾ ಮಾಡುತ್ತಾರೆ? ದರ್ಶನ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ? ಅನ್ನೋ ಕುತೂಹಲಕ್ಕೆ ಬರ್ತ್‌ಡೇಯಂದೇ ತೆರೆಬಿದ್ದಿದೆ. ಒಬ್ಬರಲ್ಲ, ಇಬ್ಬರಲ್ಲ ಆರು ಮಂದಿ ನಿರ್ಮಾಪಕರು ದರ್ಶನ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆದ್ರೀಗ ಇವರಲ್ಲಿ ಯಾರ ಸಿನಿಮಾ ಮೊದಲು ಸೆಟ್ಟೇರುತ್ತೆ ಅನ್ನೋ ಕುತೂಹಲವಿದೆ.

More from Filmibeat

English summary
Challenging Star Darshan And His Autograph And Signature Style, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X