ದರ್ಶನ್-ಮಿಲನ ಪ್ರಕಾಶ್ ಚಿತ್ರ ಮುಂದಿನ ವರ್ಷ ಆರಂಭ
Recommended Video
ಮತ್ತೊಮ್ಮೆ ಒಂದಾಗುತ್ತಿದ್ದಾರೆ ದರ್ಶನ ಹಾಗು ಮಿಲನ ಪ್ರಕಾಶ್ | Darshan | FILMIBEAT KANNADA
'ತಾರಕ್' ಸಿನಿಮಾದ ನಂತರ ಮತ್ತೆ ದರ್ಶನ್ ಹಾಗೂ ನಿರ್ದೇಶಕ ಮಿಲನ ಪ್ರಕಾಶ್ ಕಾಂಬಿನೇಶನ್ ನಲ್ಲಿ ಸಿನಿಮಾ ಬರುತ್ತಿದೆ ಎನ್ನುವ ಸುದ್ದಿ ಈ ಹಿಂದೆ ಕೇಳಿ ಬಂದಿತ್ತು. ಇದೀಗ ಈ ಚಿತ್ರ ಅಧಿಕೃತವಾಗಿದೆ.
ಮುಂದಿನ ವರ್ಷ ಈ ಸಿನಿಮಾ ಪ್ರಾರಂಭ ಆಗಲಿದೆ. ಮಿಲನ ಪ್ರಕಾಶ್ ಕಥೆ ದರ್ಶನ್ ರಿಗೆ ಇಷ್ಟವಾಗಿದ್ದು, ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಾರಿ ಸಾಹಸಮಯ ಸಿನಿಮಾ ಮಾಡಲು ಮಿಲನ ಪ್ರಕಾಶ್ ಮುಂದಾಗಿದ್ದಾರೆ.
ದರ್ಶನ್ ಸದ್ಯ, 'ಕುರುಕ್ಷೇತ್ರ' ಸಿನಿಮಾವನ್ನು ಮುಗಿಸಿ 'ಒಡೆಯ' ಸಿನಿಮಾ ಮಾಡುತ್ತಿದ್ದಾರೆ. 'ರಾಬರ್ಟ್' ಚಿತ್ರದ ಕೆಲಸಗಳು ಕೂಡ ನಡೆಯುತ್ತಿದೆ. ಅದರ ನಂತರ 'ಗಂಡುಗಲಿ ಮದಕರಿನಾಯಕ' ಚಿತ್ರ ಪ್ರಾರಂಭ ಆಗಲಿದೆ. ಈ ಚಿತ್ರಗಳ ಬಳಿಕ ಮಿಲನ್ ಪ್ರಕಾಶ್ ಸಿನಿಮಾ ಶುರು ಆಗಲಿದೆ.

ಕಾಮಿಡಿ ಹಾಗೂ ಫ್ಯಾಮಿಲಿ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಮಿಲನ ಪ್ರಕಾಶ್ 'ಶ್ರೀ' ಚಿತ್ರದಲ್ಲಿ ಪಕ್ಕಾ ಆಕ್ಷನ್ ಮಾಡಿದ್ದರು. ಆ ಬಳಿಕ ಅವರ ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಸಾಮಾನ್ಯವಾಗಿತ್ತು.
English summary
Challenging star Darshan and Milana Prakash movie will start next year. Darshan and Prakash reunite after 'Tarak'.


Click it and Unblock the Notifications