'ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಎಂದ ದರ್ಶನ್

Recommended Video

ಡಿ ಬಾಸ್ ವಿಶ್ ನೋಡಿ ವಿಷ್ಣು ದಾದಾ ಅಭಿಮಾನಿಗಳು ಖುಷ್. | Darshan | FILMIBEAT KANNADA

ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಯಜಮಾನನಿಲ್ಲದ ಹಬ್ಬವನ್ನು ಅವರ ನೆನಪಿನಲ್ಲಿಯೆ ಆಚರಿಸಲಾಗುತ್ತಿದೆ. ದಾದಾನಿಗೆ ನಾಡಿನಾದ್ಯಂತ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.

ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ಸ್ ಸಹ ಶುಭಕೋರುತ್ತಿದ್ದಾರೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಷ್ಣುದಾದಾನ ನೆನಪು ಮಾಡಿಕೊಂಡಿದ್ದಾರೆ. ವಿಷ್ಣುವರ್ಧನ್ ಸಿನಿಮಾದ ಹಾಡಿನ ಸಾಲನ್ನೆ ಹಾಕುವ ಮೂಲಕ 'ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಎಂದು ಹೇಳಿದ್ದಾರೆ.

"ಕನ್ನಡಿಗರ ಯಜಮಾನ, ನಮ್ಮೆಲ್ಲರ ನಲ್ಮೆಯ 'ಅಭಿನಯ ಭಾರ್ಗವ' ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರ ಜನ್ಮದಿನೋತ್ಸವ ಇಂದು. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ. ಹುಟ್ಟು ಹಬ್ಬದ ಶುಭಾಶಯಗಳು ವಿಷ್ಣುದಾದಾ" ಎಂದು ಟ್ವೀಟ್ ಮಾಡಿದ್ದಾರೆ.

Challenging Star Darshan Birthday Wishes To Veteran Actor Vishnuvardhan

ವಿಷ್ಣುವರ್ಧನ್ ಅಭಿನಯದ ಈ ಬಂಧನ ಸಿನಿಮಾದಲ್ಲಿ ನಟ ದರ್ಶನ್ ಕೂಡ ಕಾಣಿಸಿಕೊಂಡಿದ್ದರು. ದಾದಾನ ಸಾಕು ಮಗನ ಪಾತ್ರದಲ್ಲಿ ದರ್ಶನ್ ಮಿಂಚಿದ್ದರು. ಅದೆ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ದರ್ಶನ್.

English summary
Kannada actor challenging star Darshan birthday wishes to Veteran actor Vishnuvardhan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X