For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಸಿನಿ ಬದುಕಿಗೆ 25 ವರ್ಷ: ವಿವಾದ, ಗಲಾಟೆ, ಗದ್ದಲದ ನಡುವೆ ಅಭಿಮಾನಿಗಳ ಸಂಭ್ರಮಾಚರಣೆ

  |

  ಒಂದ್ಕಡೆ ನಟ ದರ್ಶನ್‌ ಫ್ಯಾನ್ಸ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಗಲಾಟೆ ನಡೀತಿದೆ. ಮತ್ತೊಂದ್ಕಡೆ ನಿರ್ಮಾಪಕರಿಗೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೆಲ್ಲದರ ನಡುವೆ ಇವತ್ತು(ಆಗಸ್ಟ್ 11) ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.

  ಆಗಸ್ಟ್ 11. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಬದುಕಿನಲ್ಲಿ ಮರೆಯಲಾರದ ದಿನ. ದರ್ಶನ್ ತೂಗುದೀಪ ನಟನೆಯ ಮೊದಲ ಸಿನಿಮಾ 'ಮಹಾಭಾರತ' ರಿಲೀಸ್ ಆಗಿದ್ದ ದಿನ. 1997 ಆಗಸ್ಟ್ 11ರಂದು ಎಸ್‌. ನಾರಾಯಣ್ ನಿರ್ದೇಶನದ 'ಮಹಾಭಾರತ' ಚಿತ್ರ ರಿಲೀಸ್ ಆಗಿತ್ತು. ಅಂದರೆ ಇವತ್ತಿಗೆ ಸರಿಯಾಗಿ ನಟ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಖ್ಯಾತನ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದರೂ ಚಿತ್ರರಂಗದಲ್ಲಿ ದರ್ಶನ್ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಮೊದಲಿಗೆ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ದರ್ಶನ್‌ ನಂತರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದರು. 'ಮೆಜೆಸ್ಟಿಕ್' ಸಿನಿಮಾ ಮೂಲಕ ಪೂರ್ಣಪ್ರಮಾಣದಲ್ಲಿ ನಾಯಕ ನಟನಾಗಿ ಚಿತ್ರರಂಗದಲ್ಲಿ ಛಾಪು ಮೂಡಿಸಿದರು.

  ಮತ್ತೊಂದು ಆಡಿಯೋ ಬಾಂಬ್: ಪದೇ ಪದೇ ದರ್ಶನ್‌ಗೆ ಆಡಿಯೋ ಕಂಟಕ!ಮತ್ತೊಂದು ಆಡಿಯೋ ಬಾಂಬ್: ಪದೇ ಪದೇ ದರ್ಶನ್‌ಗೆ ಆಡಿಯೋ ಕಂಟಕ!

  ದರ್ಶನ್ ಅಭಿಮಾನಿಗಳು ಈ ದಿನವನ್ನು ವಿಶೇಷವಾಗಿ ಸಂಭ್ರಮಿಸುವುದಕ್ಕಾಗಿ ಹೊಸ ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ ಕಾಮನ್ ಡಿಪಿ ಸಖತ್ ಸದ್ದು ಮಾಡ್ತಿದ್ದು, ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ನಟ ದರ್ಶನ್ ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಸಾವಿನ ಕುರಿತು ನೀಡಿದ್ದ ಹೇಳಿಕೆ ಇಬ್ಬರ ಫ್ಯಾನ್ಸ್‌ ವಾರ್‌ಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಸಿನಿಮಾ ನಿರ್ಮಾಪಕ ಭರತ್, ನಟ ದರ್ಶನ್ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೆಲ್ಲದರ ನಡುವೆ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂಭ್ರಮವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.

   ಅವಮಾನ ಎದುರಿಸಿ ಗೆದ್ದ ದಾಸ

  ಅವಮಾನ ಎದುರಿಸಿ ಗೆದ್ದ ದಾಸ

  ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ದರ್ಶನ್ ಸಾಕಷ್ಟು ಅವಮಾನ, ಅಪಮಾನಗಳನ್ನು ಎದುರಿಸಿ, ನಂತರ ಬಣ್ಣ ಹಚ್ಚಲು ಪ್ರಾರಂಭಿಸಿದರು. ಕಿರುತೆರೆ ಧಾರಾವಾಹಿಯಲ್ಲೂ ನಟಿಸಿದ್ದರು. 'ಮೆಜೆಸ್ಟಿಕ್' ಸಿನಿಮಾ ಸಕ್ಸಸ್ ನಂತರ ಹಿಂತಿರುಗಿ ನೋಡಲೇ ಇಲ್ಲ. ಬಿದ್ದಾಗಲೆಲ್ಲಾ ಚಾಲೆಂಜಿಂಗ್ ಸ್ಟಾರ್ ಮತ್ತೆ ಮತ್ತೆ ಎದ್ದು ಬಂದಿದ್ದಾರೆ. ಇಂದು ಅಪಾರ ಅಭಿಮಾನಿ ಬಳಗ ನಟ ದರ್ಶನ್‌ಗಿದ್ದು ಸೂಪರ್ ಸ್ಟಾರ್ ಆಗಿ ಮರೆಯುತ್ತಿದ್ದಾರೆ.

   50ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

  50ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ

  ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಈಗಾಗಲೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಿ ಚಾಲೆಂಜಿಂಗ್ ಸ್ಟಾರ್ ಬಿರುದು ಪಡೆದುಕೊಂಡಿದ್ದಾರೆ. ದರ್ಶನ್ ನಟನೆಯ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿವೆ. ನಿರ್ಮಾಪಕರ ಪಾಲಿನ ಲಕ್ಕಿ ಛಾರ್ಮ್ ಆಗಿ ದರ್ಶನ್ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ಮಾತ್ರವಲ್ಲದೇ ಐತಿಹಾಸಿಕ, ಪೌರಾಣಿಕ ಸಿನಿಮಾಗಳಲ್ಲೂ ನಟಿಸಿ ಯಶಸ್ವಿಯಾಗಿದ್ದಾರೆ.

   ಹಲವು ಹಿಟ್ ಸಿನಿಮಾ ನೀಡಿದ 'ಸಾರಥಿ'

  ಹಲವು ಹಿಟ್ ಸಿನಿಮಾ ನೀಡಿದ 'ಸಾರಥಿ'

  ಒಂದು ಕಾಲದಲ್ಲಿ ದರ್ಶನ್ ಹಸು ಕಟ್ಟಿ ಹಾಲು ಮಾರಿ ಜೀವನ ನಡೆಸಿದ ದಿನಗಳು ಇದೆ. ನೀನಾಸಂನಲ್ಲಿ ಅಭಿನಯದ ಪಟ್ಟುಗಳನ್ನು ಕಲಿತು ಬಂದ ದರ್ಶನ್ ನಟನಾಗಿ ಗೆದ್ದರು. ಇಂದು ಸೂಪರ್ ಸ್ಟಾರ್ ಆಗಿದ್ದಾರೆ. 'ಕರಿಯ', 'ದಾಸ', 'ಶಾಸ್ತ್ರಿ', 'ಕಲಾಸಿಪಾಳ್ಯ', 'ಮಂಡ್ಯ', 'ಗಜ', 'ನವಗ್ರಹ', 'ಸಾರಥಿ', 'ಸಂಗೊಳ್ಳಿ ರಾಯಣ್ಣ', 'ಬುಲ್‌ಬುಲ್', 'ಕುರುಕ್ಷೇತ್ರ', 'ಯಜಮಾನ' ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ದರ್ಶನ್ ನೀಡಿದ್ದಾರೆ. ನಟರಾಗಿ ಮಾತ್ರವಲ್ಲದೇ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

   ಸೆರೆವಾಸವನ್ನು ಅನುಭವಿಸಿದ್ದ ದರ್ಶನ್

  ಸೆರೆವಾಸವನ್ನು ಅನುಭವಿಸಿದ್ದ ದರ್ಶನ್

  2011ರಲ್ಲಿ ನಟ ದರ್ಶನ್ ಸೆರೆವಾಸವನ್ನು ಅನುಭವಿಸುವಂತಾಯಿತು. ಪತಿ ಚಿತ್ರಹಿಂಸೆ ನೀಡುತ್ತಾರೆಂದು ಸ್ವತಃ ಪತ್ನಿ ವಿಜಯಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ, ದರ್ಶನ್ ಸೆರೆವಾಸ ಅನುಭವಿಸಬೇಕಾಯಿತು. ಜೈಲಿನಿಂದ ಬಿಡುಗಡೆಯಾದ ಬಳಿಕ ದರ್ಶನ್ 'ನನ್ನಿಂದ ತಪ್ಪಾಯಿತು' ಎಂದು ಬಹಿರಂಗವಾಗಿ ಕ್ಷಮೆಯನ್ನು ಯಾಚಿಸಿದ್ದರು. ಸಿನಿಜೀವನ ಮಾತ್ರವಲ್ಲ ನಿಜ ಜೀವನದಲ್ಲೂ ದರ್ಶನ್ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಸಾಕಷ್ಟು ವಿವಾದಗಳಿಂದಲೂ ಸುದ್ದಿಯಾಗಿದ್ದಾರೆ.

   ಅಭಿಮಾನಿಗಳ ಶುಭಾಶಯ

  ಅಭಿಮಾನಿಗಳ ಶುಭಾಶಯ

  ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ನಟ ದರ್ಶನ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಿನ್ಸ್ ಸಚಿನ್ ಎಂಬುವವರು ಡಿಸೈನ್ ಮಾಡಿರುವ ಕಾಮನ್ ಡಿಪಿ ಸಖತ್ ವೈರಲ್ ಆಗಿದೆ. 25 Years Bossisam ಹೆಸರಿನಲ್ಲಿ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ದತೆ ನಡೆಸಿದ್ದಾರೆ. ನಿನ್ನೆಯಿಂದಲೇ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ನಡೀತಿದೆ. ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾಗಳ ಪಾತ್ರಗಳ ಫೋಟೊಗಳನ್ನು ಸೇರಿಸಿ, ಕಾಮನ್ ಡಿಪಿ ಡಿಸೈನ್ ಮಾಡಿದ್ದಾರೆ. ಅಭಿಮಾನಿಗಳ ಫೇಸ್‌ ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಸ್ಟೇಟಸ್‌ಗಳಲ್ಲಿ CDP ರಾರಾಜಿಸುತ್ತಿದೆ.

  Recommended Video

  ಚಿಲ್ಲಿ ಚಿಕೆನ್ ಬಿಟ್ಟು ಬೇರೇನೂ ಮಾಡಲ್ಲ | Akshatha Rajath | Filmibeat Kannada *Interview
  English summary
  Challenging Star Darshan Celebrates 25 Years In The Film Industry. Know More.
  Thursday, August 11, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X