ಡಿ ಬಾಸ್ ಜನ್ಮದಿನ: ಕೇಕ್ ಕಟ್ ಮಾಡದೆ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್.!
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಇಂದು ಸಂಭ್ರಮದ ಹಬ್ಬ. ಯಾಕಂದ್ರೆ, ಇವತ್ತು 'ದಾಸ' ದರ್ಶನ್ ಹುಟ್ಟಿದ ಹಬ್ಬ.
ಅಭಿಮಾನಿಗಳ ಪ್ರೀತಿಯ 'ಡಿ-ಬಾಸ್' ದರ್ಶನ್ ಇಂದು 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರು, ಅಭಿಮಾನಿಗಳು ಮತ್ತು ಸ್ನೇಹಿತರ ಜೊತೆಗೆ ದರ್ಶನ್ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ದರ್ಶನ್ ಜನ್ಮದಿನಕ್ಕೆ ಶುಭ ಕೋರಲು ನಿನ್ನೆ ಸಂಜೆಯಿಂದಲೇ ಅವರ ಮನೆ ಮುಂದೆ ಜನಸಾಗರ ಹರಿದುಬಂದಿತ್ತು. ಮಧ್ಯರಾತ್ರಿ 12 ಗಂಟೆ ಸರಿಯಾಗಿ ಅಭಿಮಾನಿಗಳಿಗೆ ದರ್ಶನ ನೀಡಿದ ದರ್ಶನ್ ಕೇಕ್ ಕಟ್ ಮಾಡದೆ ಬರ್ತಡೇ ಸೆಲೆಬ್ರೇಟ್ ಮಾಡಿದರು.

''ಅಭಿಮಾನಿಗಳು ಕೇಕ್, ಹಾರ, ಪಟಾಕಿ ತರುವ ಬದಲು ಅಕ್ಕಿ, ಬೇಳೆ ಸೇರಿದಂತೆ ದವಸ ಧಾನ್ಯಗಳನ್ನು ತನ್ನಿ.. ಅದನ್ನ ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು'' ಎಂದು ತಿಂಗಳ ಹಿಂದೆಯೇ ಫ್ಯಾನ್ಸ್ ಗೆ ದರ್ಶನ್ ಮನವಿ ಮಾಡಿದ್ದರು. ಅದರಂತೆ, ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಕೈಲಾದಷ್ಟು ದವಸ-ಧಾನ್ಯಗಳನ್ನು ತಂದಿದ್ದರು. ಅದನ್ನೆಲ್ಲ ಸ್ವೀಕರಿಸಿ, ಅಭಿಮಾನಿಗಳ ಜೊತೆಗೆ ಶೇಕ್ ಹ್ಯಾಂಡ್ ಮಾಡಿ ಸರಳವಾಗಿ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ನಟ ಆದಿತ್ಯ, ವಿನೋದ್ ಪ್ರಭಾಕರ್ ಸೇರಿದಂತೆ ಹಲವು ನಟರು ದರ್ಶನ್ ನಿವಾಸಕ್ಕೆ ಆಗಮಿಸಿ ದರ್ಶನ್ ಗೆ ಬರ್ತಡೇ ವಿಶಸ್ ತಿಳಿಸಿದರು.
ಅಂದ್ಹಾಗೆ, ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ 'ರಾಬರ್ಟ್' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ 'ರಾಬರ್ಟ್' ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ.


Click it and Unblock the Notifications











