Don't Miss!
- News Lok Sabha Election 2024: ಬೆಂಗಳೂರಿನಲ್ಲಿ ಈ ದಿನಗಳಂದು ಮದ್ಯ ಮಾರಾಟ ಸಂಪೂರ್ಣ ನಿಷೇಧ-ಯಾವ್ಯಾವಾಗ ಹಾಗೂ ಕಾರಣವೇನು?
- Technology ಸದ್ಯ ನೀವೇನಾದರೂ ಹೊಸ ರೆಡ್ಮಿ ಫೋನ್ ಖರೀದಿಸ್ತೀರಾ?..ಹಾಗಿದ್ರೆ, ಇಲ್ಲಿ ಗಮನಿಸಿ!
- Lifestyle ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- Finance Binance: ಫೈನ್ ಕಟ್ಟಿ ಭಾರತಕ್ಕೆ ಮರಳಿ ಬರಲಿದೆ ಕ್ರಿಫ್ಟೋಕರೆನ್ಸಿ ವಿನಿಮಯ ಕೇಂದ್ರ!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಾರ್ಮ್ ಹೌಸ್ ನಲ್ಲಿ ಡಿ ಬಾಸ್ ಸಂಕ್ರಾಂತಿ; ಕಿಚ್ಚು ಹಾಯಿಸಿ ಸಂಭ್ರಮಿಸಿದ ದರ್ಶನ್ ಬಳಗ
ಸಂಕ್ರಾಂತಿ ಹಬ್ಬ ಎಳ್ಳು-ಬೆಲ್ಲದಂತೆ ಕಿಚ್ಚನ ಹಬ್ಬವೂ ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೋಟದ ಮನೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ತೋಟದ ಮನೆಯಲ್ಲಿರುವ ದರ್ಶನ್ ಮುದ್ದಿನ ಪ್ರಾಣಿಗಳಿಗೆ ಸಿಂಗರಿಸಿ, ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ.
Recommended Video
ಈ ವರ್ಷ ಸಹ ಮೈಸೂರಿನ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ತೋಟದ ಮನೆಯಲ್ಲಿರುವ ಹಸು, ಕುದುರೆಗಳಿಗೆ ವಿಶೇಷವಾಗಿ ಸಿಂಗರಿಸಿ, ಅವುಗಳಿಗೆ ಪೂಜೆ ಮಾಡಿದ್ದಾರೆ. ಎಲ್ಲಾ ಪ್ರಾಣಿಗಳಿಗೂ ಸ್ವತಃ ದರ್ಶನ್ ಅವರೇ ಕೈತುತ್ತು ತಿನಿಸಿದ್ದಾರೆ.
ಬಿಳಿ ಕುದುರೆ ಕಿಚ್ಚು ಹಾಯಿಸಿದ ದರ್ಶನ್
ಪ್ರಾಣಿಗಳಿಗೆ ಆರತಿ ಮಾಡಿ, ಸಂಕ್ರಾಂತಿ ಹಬ್ಬದ ವಿಶೇಷ ಕಿಚ್ಚು ಹಾಯಿಸಿದ್ದಾರೆ. ದರ್ಶನ್ ಸ್ನೇಹಿತರು ಮತ್ತು ತೋಟದ ಮನೆಲ್ಲಿರುವವರೆಲ್ಲ ದರ್ಶನ್ ಜೊತೆೆ ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ದರ್ಶನ್ ತನ್ನ ನೆಚ್ಚಿನ ಬಿಳಿ ಕುದುರೆಯನ್ನು ಕಿಚ್ಚು ಹಾಯಿಸಿ ಸಂತಸ ಪಟ್ಟಿದ್ದಾರೆ.
ಹಸು ಮತ್ತು ಎತ್ತುಗಳಿಗೆ ವಿಶೇಷವಾದ ಸಿಂಗಾರ
ಹಸು ಮತ್ತು ಎತ್ತುಗಳಗೆ ವಿಶೇಷವಾಗಿ ಸಿಂಗಾರ ಮಾಡಿರುವುದು ಗಮನ ಸೆಳೆಯುತ್ತಿತ್ತು. ಎತ್ತುಗಳ ಮೇಲೆ ಡಿ ಬಾಸ್, ರಾಬರ್ಟ್ ಎಂದು ಬರೆದು ದರ್ಶನ್ ಸ್ನೆಹಿತರು ಸಂತಸ ಪಟ್ಟಿದ್ದಾರೆ. ದರ್ಶನ್ ತೋಟದ ಮನೆಯ ಸಂಕ್ರಾಂತಿ ಸಂಭ್ರಮದ ವಿಡಿಯೋವನ್ನು ಡಿ ಬಾಸ್ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಚ್ 11 ರಾಬರ್ಟ್ ರಿಲೀಸ್
ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಮಾರ್ಚ್ 11ರಂದು ರಿಲೀಸ್ ಆಗುತ್ತಿದೆ. ವರ್ಷದಿಂದ ಕಾಯುತ್ತಿರುವ ಅಭಿಮಾನಿಗಳು ಮಾರ್ಚ್ 11ರಂದು ರಾಬರ್ಟ್ ಅನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಲಾಕ್ ಡೌನ್ ಬಳಿಕ ದರ್ಶನ್ ಯಾವುದೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿಲ್ಲ.
ಕುತೂಹಲ ಮೂಡಿಸಿದೆ ದರ್ಶನ್ ಮುಂದಿನ ಸಿನಿಮಾ
ಲಾಕ್ ಡೌನ್ ಸಮಯದಲ್ಲಿ ಬಹುತೇಕ ತೋಟದ ಮನೆಯಲ್ಲೇ ದರ್ಶನ್ ಸಮಯ ಕಳೆದಿದ್ದಾರೆ. ಮುದ್ದಿನ ಪ್ರಾಣಿ ಪಕ್ಷಿಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿರುವ ದರ್ಶನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಸಹ ಅಭಿಮಾನಿಗಳಲ್ಲಿ ಇದೆ. ಈಗಾಗಲೇ ಸಾಲು ಸಾಲು ಸಿನಿಮಾಗಳು ದರ್ಶನ್ ಬಳಿ ಇದೆ. ಯಾವ ಸಿನಿಮಾ ಪ್ರಾರಂಭಿಸುತ್ತಾರೆ ಎಂದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.