ಕಿರುತೆರೆ ಎಂಟ್ರಿ ಬಗ್ಗೆ ಸ್ಪಷ್ಟನೆ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Recommended Video

ಕಿರುತೆರೆ ಎಂಟ್ರಿ ಬಗ್ಗೆ ದರ್ಶನ್ ಹೇಳಿದ್ದೇನು? | FILMIBEAT KANNADA | DARSHAN THOGUDEEPA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತು ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ಮೊದಲ ಬಾರಿಗೆ ದರ್ಶನ್ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಸುದ್ದಿಯಾದ ಕಾರಣ ಅಭಿಮಾನಿಗಳಲ್ಲಿಯೂ ಸಾಕಷ್ಟು ಗೊಂದಲ ಮೂಡಿತ್ತು. ಜೊತೆಗೆ ದರ್ಶನ್ ಯಾವ ಶೋ ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ದೊಡ್ಡ ಮಟ್ಟಿಗೆ ಚರ್ಚೆ ನಡೆಯುತ್ತಿದ್ದರು ದರ್ಶನ್ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಹಾಗಾಗಿ ದರ್ಶನ್ ಟಿವಿಯಲ್ಲಿ ಚೊಚ್ಚಲ ಶೋ ನಡೆಸಿಕೊಡಲು ಸಿದ್ಧರಾಗಿದ್ದಾರೆ ಎಂದು ಎಲ್ಲರು ಅಂದುಕೊಂಡಿದ್ದಾರೆ. ಈ ಬಗ್ಗೆ ದರ್ಶನ್ ಇತ್ತೀಚಿಗೆ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಟಿವಿಯಲ್ಲಿ ಮಿಂಚುತ್ತಾರಾ ಅಥವಾ ಸ್ಯಾಂಡಲ್ ವುಡ್ ನಲ್ಲಿ ಬಾಸ್ ಆಗಿ ಆಳ್ವಿಕೆ ಮಾಡ್ತಾರಾ? ಈ ಬಗ್ಗೆ ದರ್ಶನ್ ಹೇಳಿದ್ದೇನು? ಮುಂದೆ ಓದಿ..

ಚರ್ಚೆಯಾಗುತ್ತಿದೆ ದರ್ಶನ್ ಕಿರುತೆರೆ ಎಂಟ್ರಿ

ಚರ್ಚೆಯಾಗುತ್ತಿದೆ ದರ್ಶನ್ ಕಿರುತೆರೆ ಎಂಟ್ರಿ

ದರ್ಶನ್ ಸಿನಿಮಾ ಬಿಟ್ಟರೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಇದುವರೆಗೂ ದರ್ಶನ್ ಯಾವ ಕಿರುತೆರೆಯ ಶೋಗಳನ್ನು ನಡೆಸಿಕೊಟ್ಟಿಲ್ಲ. ಆದರೆ ದಿಢೀರನೆ ದರ್ಶನ್ ಎಂಟ್ರಿ ಕೊಡುತ್ತಿದ್ದಾರೆ, ಹಾಲಿವುಡ್ ಶೋವೊಂದನ್ನು ಕನ್ನಡದಲ್ಲಿ ನಡೆಸಿಕೊಡಲಿದ್ದಾರೆ, ಯಾವ ಚಾನೆಲ್, ಯವ ಶೋ ಹೀಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಡಿ ಬಾಸ್ ಕಿರುತೆರೆಯ ಎಂಟ್ರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದರೀಗ ಇದಲ್ಲದ್ದಕ್ಕು ದರ್ಶನ್ ಪುಲ್ ಸ್ಟಾಪ್ ಇಟ್ಟಿದ್ದಾರೆ.

ದರ್ಶನ್ ಹೇಳಿದ್ದೇನು?

ದರ್ಶನ್ ಹೇಳಿದ್ದೇನು?

ಡಿ ಬಾಸ್ ದರ್ಶನ್ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಕಿರುತೆರೆ ಎಂಟ್ರಿಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಕೇಳಿದಕ್ಕೆ ದರ್ಶನ್ ನಗುತ್ತ "ನನಗೆ ಎರಡು ಕಡೆ ಅಭಿನಯಿಸಲು ಬರಲ್ಲ" ಎಂದು ಹೇಳಿದ್ದಾರೆ. ಜೊತೆಗೆ "ನಾನೀಗ ಸದ್ಯ ಬೆಳ್ಳಿ ತೆರೆಮೇಲೆ ಅಭಿನಯಿಸುವುದನ್ನು ಎಂಜಾಯ್ ಮಾಡುತ್ತಿದ್ದೀನಿ. ನಾನು ಕಿರುತೆರೆಗೆ ಬರುವ ಬಗ್ಗೆ ಯೋಚನೆ ಕೂಡ ಮಾಡಿಲ್ಲ" ಎಂದು ಹೇಳುವ ಮೂಲಕ ಕಿರುತೆರೆ ಎಂಟ್ರಿ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಒಡೆಯ ರಿಲೀಸ್ ಆಗುತ್ತಿದೆ, ಚಿತ್ರೀಕರಣದಲ್ಲಿ ರಾಬರ್ಟ್

ಒಡೆಯ ರಿಲೀಸ್ ಆಗುತ್ತಿದೆ, ಚಿತ್ರೀಕರಣದಲ್ಲಿ ರಾಬರ್ಟ್

'ಒಡೆಯ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೆ ತಿಂಗಳು 12ಕ್ಕೆ ಒಡೆಯ ತೆರೆಗೆ ಬರಲು ಸಿದ್ಧವಾಗಿದೆ. ಇನ್ನು ರಾಬರ್ಟ್ ಸಿನಿಮಾದ ಚಿತ್ರೀಕರಣ ಕೂಡ ನಡೆಯುತ್ತಿದೆ. ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾಗೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ದರ್ಶನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಬರ್ಟ್ ಚಿತ್ರದ ಫಸ್ಟ್ ಲುಕ್ ಬಿಟ್ಟರೆ ಇದುವರೆಗೂ ಚಿತ್ರದ ಬಗ್ಗೆ ಯಾವುದೆ ಅಪ್ ಡೇಟ್ ಅಭಿಮಾನಿಗಳಿಗೆ ಸಿಕ್ಕಿಲ್ಲ.

ಸೆಟ್ಟೇರಿದೆ 'ಗಂಡುಗಲಿ ಮದಕರಿ ನಾಯಕ'

ಸೆಟ್ಟೇರಿದೆ 'ಗಂಡುಗಲಿ ಮದಕರಿ ನಾಯಕ'

ದರ್ಶನ್ ಅಭಿನಯದ ಎರಡನೆ ಐತಿಹಾಸಿಕ ಸಿನಿಮಾ 'ಗಂಡುಗಲಿ ಮದಕರಿ ನಾಯಕ' ಈಗಾಗಲೆ ಸೆಟ್ಟೇರಿದೆ. ಚಿತ್ರದುರ್ಗದಲ್ಲಿ ಮುಹೂರ್ತ ಮಾಡಿಕೊಂಡಿರುವ ಇದೆ ತಿಂಗಳು 6ಕ್ಕೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಕನ್ನಡ ಚಿತ್ರಾಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ಜೊತೆಗೆ ಕನ್ನಡ ಚಿತ್ರರಂಗದಲ್ಲಿಯೆ ಈ ಸಿನಿಮಾ ಮೈಲಿಗಲ್ಲು ಆಗಲಿದೆ ಎನ್ನುವ ನಂಬಿಕೆ ಚಿತ್ರಾಭಿಮಾನಿಗಳಲ್ಲಿ ಇದೆ. ಅಲ್ಲದೆ ದರ್ಶನ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಇದರ ನಡುವೆಯೂ ದರ್ಶನ್ ಕಿರುತೆರೆಗೆ ಬರುವುದು ಅನುಮಾನ.

More from Filmibeat

English summary
'I don't think I can do on television' Kannada actor Darshan said. For the past few days, there has been talk of Darshan making a television entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X