ದರ್ಶನ್ 7ನೇ ಚಿತ್ರ ಮೆಜೆಸ್ಟಿಕ್‌ಗೆ 21 ವರ್ಷ; ನಾಯಕನಾಗಿ ಮೊದಲ ಬಾಲ್‌ನಲ್ಲೇ ಸಿಕ್ಸರ್ ಚಚ್ಚಿದ್ದ ದಚ್ಚು

ಇಂದು ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಕನ್ನಡ ಚಿತ್ರರಂಗದಲ್ಲಿ ಮೆರೆಯುತ್ತಿರುವ ನಟ ದರ್ಶನ್ ಸಿನಿ ಕೆರಿಯರ್ ಎಷ್ಟು ಕಷ್ಟದಿಂದ ಕೂಡಿತ್ತು ಎಂಬುದು ಪ್ರತಿಯೊಬ್ಬ ಸಿನಿ ರಸಿಕರಿಗೂ ತಿಳಿದಿದೆ. ಚಿತ್ರರಂಗದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾದರೂ ಸಹ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಸುಲಭವಾಗಿ ತಿಳಿದಿಲ್ಲ. ತಂದೆ ನಿಧನ ಹೊಂದಿದ ಬಳಿಕ ನಾಯಕನಾಗಿ ಪರಂಪರೆಯನ್ನು ಮುಂದುವರಿಸಬೇಕು ಎಂದು ಸಿನಿಮಾ ಕ್ಷೇತ್ರಕ್ಕೆ ಧುಮುಕಿದ ದರ್ಶನ್ ಮೊದಲಿಗೆ ತಮ್ಮ ಜರ್ನಿಯನ್ನು ಆರಂಭಿಸಿದ್ದು ಲೈಟ್ ಬಾಯ್ ಆಗಿ.

ಬಳಿಕ ಸಣ್ಣಪುಟ್ಟ ಪಾತ್ರಗಳಲ್ಲಿ ಬಣ್ಣ ಹಚ್ಚುವ ಮೂಲಕ ನಟನೆಯ ಪಯಣವನ್ನು ಆರಂಭಿಸಿದ ದರ್ಸನ್ 1997ರ ಮಹಾಭಾರತ ಚಿತ್ರದಲ್ಲಿ ನಟಿಸಿದರು. ಬಳಿಕ ದೇವರ ಮಗ, ವಲ್ಲರಸು, ಎಲ್ಲರ ಮನೆ ದೋಸೇನೂ, ಮಿಸ್ಟರ್ ಹರಿಶ್ಚಂದ್ರ ಹಾಗೂ ಭೂತಯ್ಯನ ಮಕ್ಕಳು ಚಿತ್ರಗಳಲ್ಲೂ ಸಹ ದರ್ಶನ್ ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು.

 Challenging Star Darshan debut movie Majestic completes 21 years

ಹೀಗೆ ಹಂತಹಂತವಾಗಿ ಮೇಲೇರಲು ಯತ್ನಿಸುತ್ತಿದ್ದ ನಟ ದರ್ಶನ್ ಅವರಿಗೆ ನಾಯಕನಾಗಲು ವೇದಿಕೆಯಾದದ್ದು ಮೆಜೆಸ್ಟಿಕ್ ಚಿತ್ರ. 2002ರ ಫೆಬ್ರವರಿ 8ರಂದು ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಇಂದು 21 ವರ್ಷಗಳು ತುಂಬಿದ್ದು, ತಮ್ಮ ನೆಚ್ಚಿನ ನಟ ಹೀರೊ ಆಗಿ ಬಣ್ಣ ಹಚ್ಚಿದ ಮೊದಲ ಚಿತ್ರದ ವಾರ್ಷಿಕೋತ್ಸವವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಚರಿಸುತ್ತಿದ್ದಾರೆ.

ರೌಡಿಸಂ ಹಾಗೂ ಲವ್ ಸ್ಟೋರಿ ಕಥೆಯನ್ನು ಹೊಂದಿದ್ದ ಈ ಚಿತ್ರಕ್ಕೆ ಪಿ ಎನ್ ಸತ್ಯ ನಿರ್ದೇಶನವಿತ್ತು ಹಾಗೂ ಬಾ ಮಾ ಹರೀಶ್ ಬಂಡವಾಳ ಹೂಡಿದ್ದರು. ದರ್ಶನ್ ದಾಸ ಪಾತ್ರದಲ್ಲಿ ಮಿಂಚಿದರೆ, ನಾಯಕಿಯಾಗಿ ಸ್ಪರ್ಶ ಅಭಿನಯಿಸಿದ್ದರು. ಇನ್ನು ದರ್ಶನ್ ನಾಯಕನಾಗಿ ನಟಿಸಿದ್ದ ಈ ಮೊದಲ ಚಿತ್ರವೇ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಚಿತ್ರಮಂದಿರಗಳಲ್ಲಿ ನೂರು ದಿನಗಳನ್ನು ಪೂರೈಸಿದ್ದ ಮೆಜೆಸ್ಟಿಕ್ ಮೂಲಕ ದರ್ಶನ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಆರಂಭ ಪಡೆದುಕೊಂಡು ಫಸ್ಟ್ ಬಾಲ್ ಸಿಕ್ಸರ್ ಚಚ್ಚಿದ್ದರು ಹಾಗೂ ಹಲವು ಆಫರ್‌ಗಳನ್ನು ಪಡೆದುಕೊಂಡಿದ್ದರು.

More from Filmibeat

English summary
Challenging Star Darshan debut movie Majestic completes 21 years. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X