For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತರೊಂದಿಗೆ ಥೈಲ್ಯಾಂಡ್‌ನಲ್ಲಿ ದರ್ಶನ್ ಮೋಜು-ಮಸ್ತಿ!

  |

  ತಮ್ಮ ಬ್ಯುಸಿ ಶೆಡ್ಯೂಲ್‌ನಿಂದ ಬ್ರೇಕ್ ಸಿಕ್ಕರೆ ಸಾಕು ತಾರೆಯರು ಫ್ಲೈಟ್ ಏರಿ ದೇಶ ಸುತ್ತೋಕೆ ಹೊರಟು ಬಿಡುತ್ತಾರೆ. ಬಹುತೇಕ ಎಲ್ಲಾ ಸ್ಟಾರ್‌ಗಳು ಬ್ರೇಕ್‌ಗಾಗಿ ಕಾಯ್ತಾನೇ ಇರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹಾಗೇ. ಶೂಟಿಂಗ್‌ನಿಂದ ಬ್ರೇಕ್ ಸಿಕ್ಕರೆ ಗಾಯಬ್ ಆಗಿಬಿಡುತ್ತಾರೆ.

  ಪ್ರತಿಬಾರಿ ಕ್ಯಾಮರಾ ಹಿಡಿದು ಕಾಡು ಮೇಡು ಅಂತ ಸುತ್ತುತ್ತಾರೆ. ಇಲ್ಲಾ ಅಂದರೆ, ಪ್ರಾಣಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವುದಕ್ಕೆ ಅಭಯಾರಣ್ಯಗಳಿಗೆ ನುಗ್ಗುತ್ತಾರೆ. ಅದೂ ಇಲ್ಲಾ ಅಂದರೆ, ತಮ್ಮ ತೋಟದಲ್ಲಿ ಫುಲ್ ರಿಲ್ಯಾಕ್ಸ್ ಆಗುತ್ತಾರೆ. ಆದರೆ, ಈ ಬಾರಿ ಸ್ನೇಹಿತರೊಂದಿಗೆ ಸಮಯ ಕಳೆಯೋಕೆ ನಿರ್ಧರಿಸಿದ್ದಾರೆ.

  'ಮಿಲನ' Vs 'ಅನಾಥರು': 15 ವರ್ಷಗಳ ಹಿಂದೆ ಬಾಕ್ಸಾಫೀಸ್‌ ಕದನದಲ್ಲಿ ಗೆದ್ದಿದ್ದು ಯಾರು?'ಮಿಲನ' Vs 'ಅನಾಥರು': 15 ವರ್ಷಗಳ ಹಿಂದೆ ಬಾಕ್ಸಾಫೀಸ್‌ ಕದನದಲ್ಲಿ ಗೆದ್ದಿದ್ದು ಯಾರು?

  ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ದರ್ಶನ್ ಭಾಗಿಯಾಗಿದ್ದರು. ಅದೆಲ್ಲಾ ಮುಗೀತು ಅನ್ನುವಾಗಲೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗಲೇ ದರ್ಶನ್ ಥೈಲ್ಯಾಂಡ್‌ಗೆ ಹೋಗುತ್ತಿದ್ದಾರೆ ಅನ್ನೋದು ಗೊತ್ತಾಗಿತ್ತು. ಸದ್ಯಕ್ಕೀಗ ಥೈಲ್ಯಾಂಡ್‌ನಲ್ಲಿ ಸ್ನೇಹಿತರೊಂದಿಗೆ ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ.

   'D56' ಒಂದು ಶೆಡ್ಯೂಡ್ ಶೂಟಿಂಗ್ ಫಿನಿಶ್

  'D56' ಒಂದು ಶೆಡ್ಯೂಡ್ ಶೂಟಿಂಗ್ ಫಿನಿಶ್

  ಕೆಲವೇ ದಿನಗಳ ಹಿಂದೆ 'D56' ಸಿನಿಮಾ ಸೆಟ್ಟೇರಿತ್ತು. ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಸಿನಿಮಾ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇನ್ನೊಂದು ಶೆಡ್ಯೂಲ್ ಶುರುವಾಗುವುದಕ್ಕೂ ಮುನ್ನ ಬಿಡುವು ಸಿಕ್ಕಿದೆ. ಅಲ್ಲದೆ 'ಕ್ರಾಂತಿ' ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಬೇಕಿದೆ. 'ಕ್ರಾಂತಿ' ಪ್ರಚಾರ ಮುಗಿಯುತ್ತಿದ್ದಂತೆ 'D56' ಸಿನಿಮಾ ಶೂಟಿಂಗ್ ಶುರುವಾಗಲಿದೆ. ಹೀಗಾಗಿ ಈಗ ಸಿಕ್ಕಿರೋ ಬಿಡುವನ್ನೇ ರಿಲ್ಯಾಕ್ಸ್ ಮಾಡುವುದಕ್ಕೆ ಸಜ್ಜಾಗಿದ್ದಾರೆ.

  ಸಲ್ಲು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಕ್ಕೂ ದರ್ಶನ್ ನಟಿಸಿದ್ದ ಆ ಚಿತ್ರಕ್ಕೂ ಇದೆ ಲಿಂಕ್!ಸಲ್ಲು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಕ್ಕೂ ದರ್ಶನ್ ನಟಿಸಿದ್ದ ಆ ಚಿತ್ರಕ್ಕೂ ಇದೆ ಲಿಂಕ್!

   ಥೈಲ್ಯಾಂಡ್‌ನಲ್ಲಿ ಮಸ್ತಿ

  ಥೈಲ್ಯಾಂಡ್‌ನಲ್ಲಿ ಮಸ್ತಿ

  ದರ್ಶನ್ ಥೈಲ್ಯಾಂಡ್‌ನಲ್ಲಿ ಮಸ್ತಾಗಿ ಮಸ್ತಿ ಮಾಡುತ್ತಿದ್ದಾರೆ. ಸುಮಾರು ಐದು ಮಂದಿ ಸ್ನೇಹಿತರೊಂದಿಗೆ ಥೈಲ್ಯಾಂಡ್‌ನ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೊಗಳು ವೈರಲ್ ಆಗಿದ್ದು, ಆತ್ಮೀಯ ಗೆಳೆಯರು ದರ್ಶನ್ ಅವರೊಂದಿಗೆ ಭಾಗಿಯಾಗಿದ್ದಾರೆ. ಥೈಲ್ಯಾಂಡ್‌ನ ಬೀಚ್, ಹೋಟೆಲ್‌ಗಳಲ್ಲೆಲ್ಲಾ ಅಲೆದಾಡಿದ್ದು, ದರ್ಶನ್ ಕಂಪ್ಲೀಟ್ ರಿಲ್ಯಾಕ್ಸ್ ಮೂಡಿನಲ್ಲಿ ಕಾಣಿಸಿಕೊಂಡಿದ್ದಾರೆ.

   ಕೀನ್ಯಾಗೆ ಹೋಗಿದ್ದ ದರ್ಶನ್

  ಕೀನ್ಯಾಗೆ ಹೋಗಿದ್ದ ದರ್ಶನ್

  ಕಾಡು ಪ್ರಾಣಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯೋದು ಅಂದರೆ, ದರ್ಶನ್‌ಗೆ ಬಲು ಇಷ್ಟ. ಹೀಗಾಗಿ ಕೆಲವು ವರ್ಷಗಳ ಹಿಂದಷ್ಟೇ ಸ್ನೇಹಿತರ ಜೊತೆ ವೈಲ್ಡ್‌ ಲೈಫ್‌ ಫೋಟೊಗ್ರಫಿಗಾಗಿ ಕೀನ್ಯಾಗೆ ಹೋಗಿದ್ದರು. ಇದರೊಂದಿಗೆ ಉತ್ತರ ಭಾರತದ ಉತ್ತರಾಖಂಡ್‌ನಲ್ಲೂ ಸುತ್ತಾಡಿ ಬಂದಿದ್ದರು. ಆಗಲೂ ದರ್ಶನ್‌ಗೆ ಸ್ನೇಹಿತರು ಸಾಥ್ ನೀಡಿದ್ದರು. ಆಗಲೂ ಹೀಗ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

  ಆ ಊರಿನ ಘಟನೆಯೇ ಸ್ಫೂರ್ತಿ: 'D56' ಸಿನಿಮಾ ಸ್ಟೋರಿ ಅದೇನಾ?ಆ ಊರಿನ ಘಟನೆಯೇ ಸ್ಫೂರ್ತಿ: 'D56' ಸಿನಿಮಾ ಸ್ಟೋರಿ ಅದೇನಾ?

   'ಕ್ರಾಂತಿ' ಖದರ್ ಹೇಗಿದೆ?

  'ಕ್ರಾಂತಿ' ಖದರ್ ಹೇಗಿದೆ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಸಿನಿಮಾ 'ಕ್ರಾಂತಿ' ಬಿಡುಗಡೆಗೆ ಸಜ್ಜಾಗಿದೆ. ಇದೇ ವೇಳೆ ವಿ. ಹರಿಕೃಷ್ಣ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ಬಳಿಕ ಡಿಂಪಲ್ ಕ್ವೀನ್ ರಚಿತಾ ರಾಮ್ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ಗೆ ಹೀರೊಯಿನ್ ಆಗಿದ್ದಾರೆ. ಮೂಲಗಳ ಪ್ರಕಾರ, 'ಕ್ರಾಂತಿ' ಸಿನಿಮಾ ಕನ್ನಡ ರಾಜ್ಯೋತ್ಸವಕ್ಕೆ ಗ್ರ್ಯಾಂಡ್ ಆಗಿ ಬಿಡುಗಡೆಯಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಇನ್ನೂ ಚಿತ್ರತಂಡ ಅಧಿಕೃತವಾಗಿ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ.

  English summary
  Challenging Star Darshan Enjoying Holidays in Thailand With His Friends, Know More.
  Saturday, September 17, 2022, 10:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X