'ಟಗರು ಪಲ್ಯ' ಸವಿಯಲು ಬಂದ ಚಾಲೆಂಜಿಂಗ್ ಸ್ಟಾರ್.. ಡಾಲಿ ಧನಂಜಯ್ ಸಿನಿಮಾಗೆ ಡಿಬಾಸ್ ಸಾಥ್

By ಫಿಲ್ಮಿಬೀಟ್ ಡೆಸ್ಕ್

ಡಾಲಿ ಧನಂಜಯ್ ನಟಿಸುವುದರಲ್ಲಿ ಎಷ್ಟು ಬ್ಯುಸಿನೋ.. ಅಷ್ಟೇ ಸಿನಿಮಾ ನಿರ್ಮಾಣದಲ್ಲಿಯೂ ಬ್ಯುಸಿಯಾಗಿದ್ದಾರೆ. ತಮ್ಮದೇ ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಮೂರು ಸಿನಿಮಾ ನಿರ್ಮಾಣ ಆಗಿದೆ. ಅದುವೇ 'ಟಗರು ಪಲ್ಯ'. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿದು ಬಿಡುಗಡೆಗೂ ಸಜ್ಜಾಗಿದೆ.

ನಾಗಭೂಷಣ್ ಈ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನೊಂದು ಕಡೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನ ಈ ಸಿನಿಮಾ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡುವುದಂತೂ ನಿಜ.

tagaru-palya-dhananjay-darshan-display

'ಟಗರು ಪಲ್ಯ' ಸಿನಿಮಾ ಇದೇ ಅಕ್ಟೋಬರ್ 27ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈ ಸಿನಿಮಾಗೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡುತ್ತಿರುವುದು ಬಲ ಬಂದಂತೆ ಆಗಿದೆ.

'ಟಗರು ಪಲ್ಯ'ಕ್ಕೆ ದರ್ಶನ್ ಸಾಥ್

'ಟಗರು ಪಲ್ಯ' ಸಿನಿಮಾದ ಟೀಸರ್ ಸ್ಯಾಂಡಲ್‌ವುಡ್‌ನಲ್ಲಿ ಹೊರ ಭರವಸೆಯನ್ನು ಮೂಡಿಸಿವೆ. ಈಗಾಗಲೇ ಎರಡು ಹಾಡುಗಳು ರಿಲೀಸ್ ಆಗಿದ್ದು, ಸಿನಿಮಾ ಪ್ರೇಮಿಗಳಿಗೆ ಇಷ್ಟ ಆಗಿದೆ. ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ ಅನ್ನುವಾಗಲೇ ಸಿನಿಮಾ ಟ್ರೈಲರ್ ಅನ್ನು ರಿಲೀಸ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ.

ಅಕ್ಟೋಬರ್ 18ರಂದು 'ಟಗರು ಪಲ್ಯ' ಸಿನಿಮಾದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಂಚ್ ಮಾಡುತ್ತಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರಿಯ ಚೊಚ್ಚಲ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲ ಸಿಕ್ಕಿರೋದು ಮತ್ತಷ್ಟು ಬಲ ಬಂದಂತಾಗಿದೆ.

ಪಕ್ಕಾ ಹಳ್ಳಿ ಸೊಗಡಿನ ಸಿನಿಮಾ

'ಟಗರು ಪಲ್ಯ' ಹಳ್ಳಿ ಸೊಗಡಿನ ಸಿನಿಮಾ. ಹಾಸ್ಯವೇ ಪ್ರಧಾನವಾಗಿರೋ ಈ ಸಿನಿಮಾ ಸಿನಿ ಮಂದಿಯನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದು ಗ್ಯಾರಂಟಿ. ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಡಾಲಿ ಧನಂಜಯ್ ನಿರ್ಮಿಸುತ್ತಿರುವ 'ಟಗರು ಪಲ್ಯ' ಸಿನಿಮಾಗೆ ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ನೆನಪಿರಲಿ ಪ್ರೇಮ್ ಮಗಳು ಅಮೃತಾ ಎಂಟ್ರಿ ಹಾಗೂ ನಾಗಭೂಷಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಮೇಲೆ ದಿನದಿಂದ ದಿನಕ್ಕೆ ನೀರಿಕ್ಷೆ ಹೆಚ್ಚಾಗಿದೆ.

ನಾಗಭೂಷಣ, ಅಮೃತಾ ಪ್ರೇಮ್ ಜೊತೆಗೆ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ಚಿತ್ರರಂಗದ ಹಿರಿಯರು ನಟಿಸಿದ್ದಾರೆ. ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಎಸ್. ಕೆ. ರಾವ್ ಛಾಯಾಗ್ರಹಣವಿದ್ದು ಅಕ್ಟೋಬರ್ 27ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ನಾಗಭೂಷಣ್ ಅಪಘಾತ ಪ್ರಕರಣ

ಸಿನಿಮಾ ಬಿಡುಗಡೆ ವೇಳೆನೇ ನಾಗಭೂಷಣ್ ಅಪಘಾತ ಪ್ರಕರಣ 'ಟಗರು ಪಲ್ಯ' ಬಿಡುಗಡೆಗೆ ಹಿನ್ನಡೆಯಾಗಬಹುದೇನೋ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಡಾಲಿ ಧನಂಜಯ್ ಅನೌನ್ಸ್ ಮಾಡಿದ ದಿನದಂದೇ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

ಸದ್ಯ ಕಾರು ಅಪಘಾತ ಪ್ರಕರಣದಲ್ಲಿ ಸಿಕ್ಕಿಕೊಂಡಿರೋ ನಾಗಭೂಷಣ್ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಾರಾ? ಬಿಡುಗಡೆ ಬಳಿಕ ಸಿನಿಮಾವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಕುತೂಹಲವಿದೆ. ಸದ್ಯ 'ಟಗರು ಪಲ್ಯ' ಟ್ರೈಲರ್‌ಗಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

More from Filmibeat

English summary
Challenging Star Darshan extended Support to Daali Dhananjay produced movie Tagaru Palya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X