'ಯಜಮಾನ' ಸಕ್ಸಸ್ ಸಂತಸದ ನಡುವೆ ಗರಂ ಆದ ದರ್ಶನ್
Recommended Video

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ್ದೇ ಹವಾ. ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಯಜಮಾನ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಸಂತಸದ ಅಲೆಯಲ್ಲಿ ತೇಲುತ್ತಿರುವ 'ಯಜಮಾನ' ಟೀಂ ಇತ್ತೀಚಿಗಷ್ಟೆ ಮೈಸೂರಿನಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.
ಸಂತಸ ಕೂಟದಲ್ಲಿ ಚಿತ್ರದ ಯಶಸ್ಸು ಮತ್ತು ಶ್ರಮದ ಬಗ್ಗೆ ಒಂದಿಷ್ಟು ವಿಚಾರ ಹಂಚಿಕೊಂಡಿದೆ ಚಿತ್ರತಂಡ. ಇದೇ ಸಂದರ್ಭದಲ್ಲಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ಸದ್ಯ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ ಮತ್ತು ಕ್ರಿಕೆಟ್ ಕೂಡ ಇದೆ. ಇದರ ನಡುವೆಯೂ 'ಯಜಮಾನ' ಸಿನಿಮಾ ನೋಡಿ, ಯಶಸ್ವಿಗೊಳಿಸಿದ್ದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ತಿಳಿದ್ದಾರೆ.
ಇದರ ಜೊತೆಗೆನೇ ಚಿತ್ರದ ಕಲೆಕ್ಷನ್ ವಿಚಾರವಾಗಿ ಕೊಂಚ ಗರಂ ಆದರು ಡಿ ಬಾಸ್. ಹೌದು, 'ಯಜಮಾನ' ಎಷ್ಟು ಕಲೆಕ್ಷನ್ ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ ಹೀಗಿತ್ತು. ''ಕಲೆಕ್ಷನ್ ತಗೊಂಡು ಏನು ಮಾಡುತ್ತೀರಾ. ತಗೊಂಡು ಏನಾದರು ಮಾಡುವುದಾದರೆ ಹೇಳಿ.. ಖಂಡಿತಾ ನಾನೇ ಕೊಡುತ್ತೇನೆ''', ಎಂದು ಒಮ್ಮೆಗೆ ರೇಗಿದರು. ''50 ಕೋಟಿ ಆಯಿತು, 500 ಕೋಟಿ ಆಯಿತು ಎಂದು ಲೆಕ್ಕ ಹಾಕುವ ಕಲೆಕ್ಷನ್ ವಿಚಾರ ಬಿಟ್ಟುಬಿಡಿ'' ಎಂದು ಹೇಳಿದ್ದಾರೆ.

'ಯಜಮಾನ' ಚಿತ್ರ ರಿಲೀಸ್ ಆಗಿ 16 ದಿನಗಳಾಗಿವೆ. ಸದ್ಯ, ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಪಿ.ಕುಮಾರ್ ಮತ್ತು ವಿ.ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











