twitter
    For Quick Alerts
    ALLOW NOTIFICATIONS  
    For Daily Alerts

    'ಯಜಮಾನ' ಸಕ್ಸಸ್ ಸಂತಸದ ನಡುವೆ ಗರಂ ಆದ ದರ್ಶನ್

    |

    Recommended Video

    Yajamana Movie: ಯಜಮಾನ' ಸಕ್ಸಸ್ ಸಂತಸದ ನಡುವೆ ಗರಂ ಆದ ದರ್ಶನ್

    ಸ್ಯಾಂಡಲ್ ವುಡ್ ನಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ್ದೇ ಹವಾ. ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಯಜಮಾನ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಸಂತಸದ ಅಲೆಯಲ್ಲಿ ತೇಲುತ್ತಿರುವ 'ಯಜಮಾನ' ಟೀಂ ಇತ್ತೀಚಿಗಷ್ಟೆ ಮೈಸೂರಿನಲ್ಲಿ ಸಕ್ಸಸ್ ಮೀಟ್ ಹಮ್ಮಿಕೊಂಡಿತ್ತು.

    ಸಂತಸ ಕೂಟದಲ್ಲಿ ಚಿತ್ರದ ಯಶಸ್ಸು ಮತ್ತು ಶ್ರಮದ ಬಗ್ಗೆ ಒಂದಿಷ್ಟು ವಿಚಾರ ಹಂಚಿಕೊಂಡಿದೆ ಚಿತ್ರತಂಡ. ಇದೇ ಸಂದರ್ಭದಲ್ಲಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ಸದ್ಯ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ ಮತ್ತು ಕ್ರಿಕೆಟ್ ಕೂಡ ಇದೆ. ಇದರ ನಡುವೆಯೂ 'ಯಜಮಾನ' ಸಿನಿಮಾ ನೋಡಿ, ಯಶಸ್ವಿಗೊಳಿಸಿದ್ದಕ್ಕೆ ಪ್ರೇಕ್ಷಕರಿಗೆ ಧನ್ಯವಾದ ತಿಳಿದ್ದಾರೆ.

    ಆನೆ ನಡೆದಿದ್ದೇ ದಾರಿ : ರಿಯಲ್ ಗಜನ ಜೊತೆಗೆ ಸ್ಯಾಂಡಲ್ ವುಡ್ ಗಜ ಆನೆ ನಡೆದಿದ್ದೇ ದಾರಿ : ರಿಯಲ್ ಗಜನ ಜೊತೆಗೆ ಸ್ಯಾಂಡಲ್ ವುಡ್ ಗಜ

    ಇದರ ಜೊತೆಗೆನೇ ಚಿತ್ರದ ಕಲೆಕ್ಷನ್ ವಿಚಾರವಾಗಿ ಕೊಂಚ ಗರಂ ಆದರು ಡಿ ಬಾಸ್. ಹೌದು, 'ಯಜಮಾನ' ಎಷ್ಟು ಕಲೆಕ್ಷನ್ ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯೆ ಹೀಗಿತ್ತು. ''ಕಲೆಕ್ಷನ್ ತಗೊಂಡು ಏನು ಮಾಡುತ್ತೀರಾ. ತಗೊಂಡು ಏನಾದರು ಮಾಡುವುದಾದರೆ ಹೇಳಿ.. ಖಂಡಿತಾ ನಾನೇ ಕೊಡುತ್ತೇನೆ''', ಎಂದು ಒಮ್ಮೆಗೆ ರೇಗಿದರು. ''50 ಕೋಟಿ ಆಯಿತು, 500 ಕೋಟಿ ಆಯಿತು ಎಂದು ಲೆಕ್ಕ ಹಾಕುವ ಕಲೆಕ್ಷನ್ ವಿಚಾರ ಬಿಟ್ಟುಬಿಡಿ'' ಎಂದು ಹೇಳಿದ್ದಾರೆ.

    Challenging star Darshan get angry for asking Yajamana movie collection

    ಅಬ್ಬಾ...ನಾಲ್ಕೈದು ತಿಂಗಳಲ್ಲಿ ದರ್ಶನ್ ಬಿಡುಗಡೆ ಮಾಡಿದ ಟ್ರೈಲರ್ ಗಳ ಸಂಖ್ಯೆ ನೋಡಿ ಅಬ್ಬಾ...ನಾಲ್ಕೈದು ತಿಂಗಳಲ್ಲಿ ದರ್ಶನ್ ಬಿಡುಗಡೆ ಮಾಡಿದ ಟ್ರೈಲರ್ ಗಳ ಸಂಖ್ಯೆ ನೋಡಿ

    'ಯಜಮಾನ' ಚಿತ್ರ ರಿಲೀಸ್ ಆಗಿ 16 ದಿನಗಳಾಗಿವೆ. ಸದ್ಯ, ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಪಿ.ಕುಮಾರ್ ಮತ್ತು ವಿ.ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕಿ ಶೈಲಜಾ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    English summary
    Challenging star Darshan get angry for asking Yajamana movie collection in the movie success meet at Mysore.
    Saturday, March 16, 2019, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X