ಮತ್ತೊಂದು ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಟೀಂ; 'ಸಾರಥಿ' ಪಯಣ ಯಾವ ಕಡೆಗೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲಾಕ್ ಡೌನ್ ಬಳಿಕ ಹೆಚ್ಚಾಗಿ ತಮ್ಮ ಮೈಸೂರಿನ ತೋಟದ ಮನೆಯಲ್ಲೇ ವಾಸಿಸುತ್ತಿದ್ದಾರೆ. ಆಗಾಗ ತನ್ನ ಸ್ನೇಹಿತರ ಜೊತೆ ಗ್ಯಾಂಗ್ ಜೊತೆ ಕಾಣಿಸಿಕೊಳ್ಳುವ ದರ್ಶನ್ ಅವರ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿರುತ್ತಾರೆ.

Recommended Video

ಕರ್ನಾಟಕದಿಂದ ಹೊರಗೆ ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಗ್ರೂಪ್ | Darshan Bike Ride | Filmibeat Kannada

ಲಾಕ್ ಡೌನ್ ಬಳಿಕ ಬಹುತೇಕರು ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಆದರೆ ದರ್ಶನ್ ಇನ್ನೂ ಚಿತ್ರೀಕರಣ ಶುರುಮಾಡಿಲ್ಲ. ಈ ವರ್ಷ ಇನ್ನೇನು ಕಳೆಯುತ್ತಾ ಬಂತು. ಹಾಗಾಗಿ ದರ್ಶನ್ ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಗೆ ವಿರಾಮ ನೀಡಿರುವ ಡಿ ಬಾಸ್ ಸ್ನೇಹಿತರ ಜೊತೆ ಬೈಕ್ ರೈಡ್ ಎಂಜಾಯ್ ಮಾಡುತ್ತಿದ್ದಾರೆ.

ಇದೀಗ ದರ್ಶನ್ ಮತ್ತು ತಂಡ ಮತ್ತೊಂದು ಬೈಕ್ ರೈಡ್ ಹೊರಟಿದ್ದಾರೆ. ಇತ್ತೀಚಿಗಷ್ಟೆ ಮಡಿಕೇರಿ ಕಡೆ ಪಯಣ ಬೆಳೆಸಿದ್ದ ದರ್ಶನ್, ಈ ಬಾರಿ ಕೇರಳ ಕಡೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಆರ್ ಆರ್ ನಗರದ ತಮ್ಮ ನಿವಾಸದಿಂದ ಹೊರಟ ದರ್ಶನ್ ಗೆ ನಟ ಪ್ರಜ್ವಲ್ ದೇವರಾಜ್, ಚಿಕ್ಕಣ್ಣ, ಉಮಾಪತಿ ಸೇರಿದಂತೆ ಸ್ನೇಹಿತರು ಸಾಥ್ ನೀಡಿದರು.

Challenging star Darshan heads out bike ride with his friends

ಸ್ನೇಹಿತರ ಗ್ಯಾಂಗ್ ಜೊತೆ ಮನೆಯಿಂದ ಹೊರಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮನೆಮುಂದೆ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿ, ಮನೆದೇವರಿಗೆ ನಮಸ್ಕರಿಸಿ ಹೊರಟಿದ್ದಾರೆ. ದರ್ಶನ್ ಸದ್ಯ ರಾಬರ್ಟ್ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನೂ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಬೇಕಿದೆ. ಇತ್ತೀಗಷ್ಟೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ನಟ ದೊಡ್ಡಣ್ಣ ಸಿನಿಮಾ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಾಟ ಮಾಡುತ್ತಿದ್ದರು. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಹೇಳಿದ್ದರು. ಜನವರಿಯಿಂದ ದರ್ಶನ್ ವೀರ ಮದಕರಿನಾಯಕ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

More from Filmibeat

English summary
Challenging star Darshan heads out bike ride with his friends.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X