ಪತಿ-ಪತ್ನಿ ಫೈಟ್ : ದರ್ಶನ್ ಸುತ್ತ ಎದ್ದ ಗಾಳಿಸುದ್ದಿಗೆ ಪತ್ನಿ ತೆರೆ

By ಫಿಲ್ಮಿ ಬೀಟ್ ಡೆಸ್ಕ್

Recommended Video

ತಮ್ಮ ಸಂಸಾರದ ಬಗ್ಗೆ ಎದ್ದಿದ್ದ ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಸಂಸಾರದ ಗಲಾಟೆ ವಿಚಾರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿಗೆ ಸರಿಯಾಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ಕಳೆದ 24 ಗಂಟೆಯಿಂದ ಗಾಂಧಿನಗರದಲ್ಲಿ ಬಾರಿ ಗುಲ್ಲಾಗಿದೆ.

ದರ್ಶನ್ ಸಂಸಾರ ವಿಚಾರವಾಗಿ ಹರಿದಾಡುತ್ತಿದ್ದ ಸ್ಪೋಟಕ ಸುದ್ದಿಗೀಗ ಪತ್ನಿ ವಿಜಯಲಕ್ಷ್ಮಿಯೆ ಇತಿಶ್ರೀ ಹಾಡುವ ಪ್ರಯತ್ನ ಮಾಡಿದ್ದಾರೆ. ಗಾಂಧಿನಗರದಲ್ಲಿ ಈ ಸುದ್ದಿ ಜೋರಾಗುತ್ತಿದ್ದಂತೆ, ಪತ್ನಿ ವಿಜಯಲಕ್ಷ್ಮಿ ದಿಢೀರ್ ಅಂತ ಟ್ವೀಟ್ ಮಾಡಿದ್ದಾರೆ.

"ಹರಿದಾಡುತ್ತಿರುವ ವದಂತಿಗಳೆಲ್ಲ ಸುಳ್ಳು" ಎಂದು ಜಸ್ಟ್ ಒನ್ ಲೈನ್ ನಲ್ಲಿ ಹೇಳಿ ಮುಗಿಸಿದ್ದಾರೆ. ಆದ್ರೆ ವಿಜಯಲಕ್ಷ್ಮಿ ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಯಾವ ರೂಮರ್ಸ್, ಏನಾಗಿದೆ ಎನ್ನುವ ಪ್ರಶ್ನೆಗಳ ಸುರಿಮಳೆ ಹರಿಸುತ್ತಿದ್ದಾರೆ.

ಒಟ್ಟಿಗೆ ಜೀವನ ಸಾಗಿಸುತ್ತಿದ್ದರು?

ಒಟ್ಟಿಗೆ ಜೀವನ ಸಾಗಿಸುತ್ತಿದ್ದರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸರಿಯಾಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ ಹರಿದಾಡುತ್ತಿದೆ. ಆದ್ರೆ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರು ಹಳೆಯದನ್ನೆಲ್ಲವನ್ನು ಮರೆತು ಒಂದಾಗಿದ್ದಾರೆ. ಇಬ್ಬರು ಕೂಡ ಸುಂದರ ಸಂಸಾರ ಸಾಗಿಸುತ್ತಿದ್ದು. ಮಗನಿಗಾಗಿ ಇಬ್ಬರು ಒಂದಾಗಿದ್ದರು. ಮೊನ್ನೆ ಮೊನ್ನೆಯಷ್ಟೆ ಇಬ್ಬರು ಒಟ್ಟಿಗೆ ಸಿನಿಮಾ ಕೂಡ ವೀಕ್ಷಿಸಿದ್ದಾರೆ.

ಮತ್ತೆ ಪತ್ನಿಗೆ ಚೆನ್ನಾಗಿ ಹೊಡೆದಿರುವ ದರ್ಶನ್?

ಮತ್ತೆ ಪತ್ನಿಗೆ ಚೆನ್ನಾಗಿ ಹೊಡೆದಿರುವ ದರ್ಶನ್?

ಬೆಂಗಳೂರಿನ ಹೊಸಕೆರೆ ಹಳ್ಳಿ ಬಳಿ ಇರುವ ಅಪಾರ್ಟ್ ಮೆಂಟ್ ಒಂದರಲ್ಲಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ವಾಸವಾಗಿದ್ದರು. ಆದ್ರೆ ನಿನ್ನೆ ಬೆಳಗ್ಗೆ( ಆಗಸ್ಟ್ 10) ದರ್ಶನ್ ಪತ್ನಿಯ ಮೇಲೆ ಸಿಟ್ಟಾಗಿ ಕೈ ಮಾಡಿದ್ದಾರಂತೆ. ಪತ್ನಿಗೆ ರಕ್ತ ಬರುವಹಾಗೆ ಹೊಡೆದಿದ್ದಲ್ಲದೆ ಸಿಗರೇಟಿನಿಂದ ಸುಟ್ಟಿದ್ದಾರಂತೆ.

ವಿಜಯಲಕ್ಷ್ಮಿ ತಾಯಿಗೂ ಹೊಡೆದಿರುವ ದರ್ಶನ್

ವಿಜಯಲಕ್ಷ್ಮಿ ತಾಯಿಗೂ ಹೊಡೆದಿರುವ ದರ್ಶನ್

ಕೇವಲ ಪತ್ನಿಗೆ ಮಾತ್ರವಲ್ಲದೆ ಮನೆಯಲ್ಲೆ ಇದ್ದ ವಿಜಯಲಕ್ಷ್ಮಿ ತಾಯಿಗೂ ಸರಿಯಾಗಿ ಹೊಡೆದಿದ್ದಾರಂತೆ. ಅಳಿಯನಿಂದ ಒದೆತಿಂದ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಹರಿದಾಡುತ್ತಿದೆ.

ಬಿಡಿಸಲು ಹೋದವರಿಗೂ ಒದೆ

ಬಿಡಿಸಲು ಹೋದವರಿಗೂ ಒದೆ

ದರ್ಶನ್ ಪತ್ನಿ ಮತ್ತು ಅತ್ತೆಗೆ ಚೆನ್ನಾಗಿ ಹೊಡೆಯುತ್ತಿರುವುದನ್ನು ನೋಡಿ ಗಾಬರಿಯಾದ ಮಗ ಮನೆಯ ಪಕ್ಕದಲ್ಲೆ ಇದ್ದ ಮತ್ತೊಬ್ಬ ನಟನ ಮನೆಗೆ ಸಹಾಯಕ್ಕೆ ಓಡಿದ್ದಾರೆ. ದರ್ಶನ್ ಹೊಡೆಯುತ್ತಿರುವುದನ್ನು ಬಿಡಿಸಲು ಹೋದ ಆ ನಟನಿಗೂ ಸರಿಯಾಗಿ ಒದೆಬಿದ್ದಿದೆಯಂತೆ.

ಪೊಲೀಸ್ ಸ್ಟೇಷನ್ ಮಟ್ಟಿಲೇರಿರುವ ವಿಜಯಲಕ್ಷ್ಮಿ?

ಪೊಲೀಸ್ ಸ್ಟೇಷನ್ ಮಟ್ಟಿಲೇರಿರುವ ವಿಜಯಲಕ್ಷ್ಮಿ?

ಪದೇ ಪದೇ ಪತ್ನಿಯ ಮೇಲೆ ಕ್ರೌರ್ಯ ಮೆರೆಯುತ್ತಿರುವ ಪತಿಯನ್ನು ನೋಡಿ ಬೇಸತ್ತಿರುವ ವಿಜಯಲಕ್ಷ್ಮಿ, ಮತ್ತೆ ಪೊಲೀಸ್ ರ ಮೊರೆ ಹೋಗಿದ್ದಾರಂತೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದ್ದಾರೆ. ಆದ್ರೆ ಅಷ್ಟರಲ್ಲೆ ಆಪ್ತರು ಬಂದು ವಿಜಯಲಕ್ಷ್ಮಿ ಅವರನ್ನು ಸಮಾಧಾನ ಮಾಡಿ ಪೊಲೀಸ್ ಸ್ಟೇಷನ್ ನಿಂದ ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮಹಿಳಾ ಆಯೋಗದ ಮೊರೆ?

ಮಹಿಳಾ ಆಯೋಗದ ಮೊರೆ?

ಅಷ್ಟಕ್ಕು ದರ್ಶನ್ ಇಲ್ಲಿ ಪತ್ನಿಯ ಮೇಲೆ ಮಾತ್ರ ಕೈ ಮಾಡಿಲ್ಲ. ತಾಯಿ ಸಮಾನವಾದ ಅತ್ತೆಯ ಮೇಲು ಕ್ರೌರ್ಯ ಮೆರೆದಿದ್ದಾರೆ. ಅಮ್ಮನಿಗೂ ಹೊಡೆದ ಕಾರಣ ತೀರ ನೊಂದಿರುವ ವಿಜಯಲಕ್ಷ್ಮಿ ಈಗ ಮಹಿಳಾ ಆಯೋಗದ ಮೊರೆ ಹೋಗುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಸಂದಾನ

ಇಂದು ಸಂದಾನ

ದರ್ಶನ್ ಸಂಸಾರ ಗಲಾಟೆ ವಿಚಾರ ಮತ್ತೆ ಬೀದಿಗೆ ಬಂದಿರುವುದು ದೊಡ್ಡ ಸುದ್ದಿಯಾಗುತ್ತಿದ್ದಂತೆ ರಾಜಕೀಯ ವ್ಯಕ್ತಿಯೊಬ್ಬರು ಇಬ್ಬರ ಸಂದಾನಕ್ಕೆ ಮುಂದಾಗಿದ್ದಾರಂತೆ. ಪತ್ನಿ ವಿಜಯಲಕ್ಷ್ಮಿ ಅವರನ್ನು ಸಮಾಧಾನ ಮಾಡಿ ಪತಿ-ಪತ್ನಿಯ ಸಂದಾನ ಕಾರ್ಯ ಇಂದು ಮಾಡಲಾಗುತ್ತಿದೆ ಎನ್ನುವ ಮಾತು ಹೇಳಿ ಬರುತ್ತಿದೆ.

ಕಾರಣ ಏನು?

ಕಾರಣ ಏನು?

ಹಳೆಯದೆಲ್ಲವನ್ನು ಮರೆತು ಇಬ್ಬರು ಚೆನ್ನಾಗೆ ಸಂಸಾರ ಸಾಗಿಸುತ್ತಿದ್ದ ದರ್ಶನ್ ಗೆ ಇದ್ದಕ್ಕಿದ್ದಹಾಗೆ ಏನಾಯಿತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ ದರ್ಶನ್ ಕುರುಕ್ಷೇತ್ರ ಸಿನಿಮಾ ರಿಲೀಸ್ ಆದ್ಮೇಲೆ ತುಂಬ ಅಪ್ ಸೆಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ನಿರೀಕ್ಷೆ ತಕ್ಕಂತೆ ಅವರ ಪಾತ್ರ ಮೂಡಿ ಬಂದಿಲ್ಲ ಎಂದು ಬುಸುಗುಟ್ಟುತ್ತಿದ್ದರಂತೆ. ಅದೇ ಸಿಟ್ಟನ್ನು ಪತ್ನಿ ಮತ್ತು ಅತ್ತೆಯ ಮೇಲೆ ಹೊಡೆದು ತೀರಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಈ ಹಿಂದೆ ಎರಡು ಬಾರಿ ಪತ್ನಿ ಮೇಲೆ ಕೈ ಮಾಡಿದ್ದರು

ಈ ಹಿಂದೆ ಎರಡು ಬಾರಿ ಪತ್ನಿ ಮೇಲೆ ಕೈ ಮಾಡಿದ್ದರು

2011ರಲ್ಲಿ ಪತ್ನಿಯ ಮೇಲೆ ಕೈ ಮಾಡಿ ದೊಡ್ಡ ರಂಪಾಟವನ್ನೆ ಮಾಡಿಕೊಂಡಿದ್ದರು. ಅಷ್ಟೆಯಲ್ಲ ಆ ನಂತರ ಮತ್ತೆ 2016ರಲ್ಲಿ ಆಡಿ ಕಾರಿನ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಗಲಾಟೆಯಾಗಿತ್ತು. ಆಗಲು ದರ್ಶನ್ ಪತ್ನಿಯ ಮೇಲೆ ಕೈ ಮಾಡಿದ್ದಲ್ಲೆ ಪತ್ನಿಯ ಕ್ಯಾರೆಕ್ಟರ್ ಬಗ್ಗೆಯು ಕೆಟ್ಟದಾಗಿ ಮಾತನಾಡಿದ್ರು. ಆದ್ರೀಗ ಮತ್ತೆ ಇಬ್ಬರ ನಡುವೆ ಹೊಡೆದಾಟ ಬಡೆದಾಟ ಪ್ರಾರಂಭವಾಗಿದೆಯ ಎಂದು ಎಲ್ಲರು ಮಾತನಾಡಿಕೊಳ್ಳುತ್ತಿರುವಾಗಲೆ ಇದೆಲ್ಲ ಸುಳ್ಳು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿಯೆ ಟ್ವೀಟ್ ಮಾಡಿ ಎಲ್ಲರ ಬಾಯಿಗೆ ಬೀಗಹಾಕಿದ್ದಾರೆ.

More from Filmibeat

English summary
Kannada Actor Challenging Star Darshan Hitting His Wife Vijayalakshmi Again
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X