For Quick Alerts
  ALLOW NOTIFICATIONS  
  For Daily Alerts

  ವೃಕ್ಷ ಮಾತೆ ಉಳಿವಿಗಾಗಿ ಟೊಂಕ ಕಟ್ಟಿದ ಚಾಲೆಂಜಿಂಗ್ ಸ್ಟಾರ್

  By Pavithra
  |
  ಅಭಿಮಾನಿಗಳು ಹೆಮ್ಮೆ ಪಡುವಂತ ಕೆಲಸ ಮಾಡಿದ್ದಾರೆ D - BOSS| Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್. ಕೇವಲ ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಸ್ನೇಹಿತರ ಕಾಳಜಿ, ಪ್ರಾಣಿಗಳ ಬಗೆಗಿನ ಕಾಳಜಿ ಜೊತೆಯಲ್ಲಿ ಸುತ್ತ-ಮುತ್ತ ಇರುವ ಪರಿಸರವನ್ನು ಶುದ್ದವಾಗಿ ಹಾಗೂ ಸುಂದವಾಗಿ ನೋಡಿಕೊಳ್ಳಬೇಕು ಎನ್ನುವ ಇಚ್ಛೆಯನ್ನು ಹೊಂದಿರುವ ನಟ.

  ಬೇಸಿಗೆ ಶುರುವಾದಾಗ ಚಾಲೆಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳು ಮತ್ತು ನಾಡಿನ ಜನರಲ್ಲಿ ಪರಿಸರ ಕಾಪಾಡುವಂತೆ. ಅರಣ್ಯದಲ್ಲಿ ಬೆಂಕಿಪಾಲಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದರು.

  ರೋಡ್ ಗೆ ಇಳಿದ ಡಿ ಬಾಸ್ ಕಾರಿನ ಜೊತೆ ಅಭಿಮಾನಿಗಳ ಫೋಟೋರೋಡ್ ಗೆ ಇಳಿದ ಡಿ ಬಾಸ್ ಕಾರಿನ ಜೊತೆ ಅಭಿಮಾನಿಗಳ ಫೋಟೋ

  ಜೂನ್ ತಿಂಗಳು ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಜೂನ್ ತಿಂಗಳಲ್ಲಿ ಎಲ್ಲರಿಗೂ ತಿಳಿದಿರುವಂತೆ ಪರಿಸರ ದಿನಾಚರಣೆ ಇದೆ. ಅದೇ ನಿಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ವೃಕ್ಷ ಮಾತೆಯ ಉಳಿವಿಗಾಗಿ ಮುಂದಾಗಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ಓದಿ

  ವೃಕ್ಷವನ್ನು ಉಳಿಸಲು ಮುಂದಾದ ದರ್ಶನ್

  ವೃಕ್ಷವನ್ನು ಉಳಿಸಲು ಮುಂದಾದ ದರ್ಶನ್

  ನಟ ದರ್ಶನ್ ಈ ಬಾರಿಯ ಪರಿಸರ ದಿನಾಚರಣೆಯ ಅಂಗವಾಗಿ ಅಭಿಮಾನಿಗಳು ಹಾಗೂ ನಾಡಿನ ಜನತೆಯಲ್ಲಿ ವಿಶೇಷ ಮನವಿ ಮಾಡಲಿದ್ದಾರೆ. ಸುತ್ತ-ಮುತ್ತಲಿನ ಪರಿಸರ ಹಾಗೂ ಮರಗಳನ್ನು ಉಳಿಸಿ ಎಂದು ಕರೆ ಕೊಡುತ್ತಿದ್ದಾರೆ.

  ವಿಡಿಯೋ ಮೂಲಕ ಪ್ರಚಾರ

  ವಿಡಿಯೋ ಮೂಲಕ ಪ್ರಚಾರ

  ಅರಣ್ಯ ಇಲಾಖೆಯಿಂದ ಈ ರೀತಿಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಮರಗಳನ್ನು ಉಳಿಸಿ ಎನ್ನವ ಸಂದೇಶ ಇರುವ ವಿಡಿಯೋವನ್ನು ದರ್ಶನ್ ಅವರಿಂದ ಪಡೆಯಲಾಗಿದ್ಯಂತೆ. ಅದನ್ನು ಜೂನ್ 5 ರಂದು ಬಿಡುಗಡೆ ಮಾಡಲಿದ್ದಾರೆ.

  ಅರಣ್ಯಗಳಲ್ಲಿ ಚಿತ್ರೀಕರಣ

  ಅರಣ್ಯಗಳಲ್ಲಿ ಚಿತ್ರೀಕರಣ

  ದರ್ಶನ್ ಹೇಳಿರುವ ಸಂದೇಶವನ್ನು ಒಳಗೊಂಡಿರುವ ವಿಡಿಯೋವನ್ನು ನಾಗರಹೊಳೆ, ಬಂಡಿಪುರ ಹಾಗೂ ಮಲೆಯಮಹದೇಶ್ವರ ಬೆಟ್ಟಗಳಲ್ಲಿ ಚಿತ್ರೀಕರಣ ಮಾಡಲಾಗಿದ್ಯಂತೆ.

  ಪರಿಸರ ಕಾಳಜಿಯೇ ಗುರಿ

  ಪರಿಸರ ಕಾಳಜಿಯೇ ಗುರಿ

  ಅರಣ್ಯ ಇಲಾಖೆಯಿಂದ ಪರಿಸರ ಕಾಳಜಿ ಇಂದಿನ ದಿನದಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ಜನರಿಗೆ ತಲಿಪಿಸುವ ನಿಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ಅವರನ್ನ ತಮ್ಮ ಅಭಿಯಾನಕ್ಕೆ ಬರ ಮಾಡಿಕೊಂಡಿದ್ದಾರೆ.

  English summary
  Challenging Star Darshan is all set to feature in a video about the importance of protecting trees, which will be released ahead of World Environment Day on June 5

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X