For Quick Alerts
  ALLOW NOTIFICATIONS  
  For Daily Alerts

  ಮಧ್ಯಾಹ್ನ 1 ಗಂಟೆಗೆ ಇನ್ನೊಬ್ಬ ಸೆಲೆಬ್ರಿಟಿಗೆ ದರ್ಶನ್ ಓಪನ್ ಚಾಲೆಂಜ್

  |
  ದಚ್ಚು ಯಾರಿಗೆ ಚಾಲೆಂಜ್ ಹಾಕಿರಬಹುದು ?

  ಈಗಾಗಲೆ ದರ್ಶನ್ ಓಪನ್ ಚಾಲೆಂಜ್ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದಿಢೀರನೆ ಚಾಲೆಂಜ್ ಮಾಡಿದ್ದೇಕೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಮತ್ತೊಬ್ಬ ಸೆಲೆಬ್ರಿಟಿಗೆ ದರ್ಶನ್ ಏನು ಚಾಲೆಂಜ್ ಮಾಡಬಹುದು, ಯಾರದು ಸೆಲೆಬ್ರಿಟಿ ಎನ್ನುವ ಹಲವಾರು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ.

  ಮಧ್ಯಾಹ್ನ ಫೇಸ್ ಬುಕ್ ಲೈವ್ ಬಂದು ಎಲ್ಲವನ್ನು ತಿಳಿಸುತ್ತೇನೆ ಎಂದು ದರ್ಶನ್ ಟ್ವಿಟ್ಟರ್ ನಲ್ಲಿ ಪೋಸ್ ಮಾಡಿದ್ದರು. ಆದ್ರೆ ಯಾವ ಸಮಯಕ್ಕೆ ಲೈವ್ ಬರುವುದಾಗಿ ಹೇಳಿರಲಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಗೊಂದಲ ಇತ್ತು. ಹಾಗಾಗಿ ಈಗಾಗಲೆ ಅಭಿಮಾನಿಗಳು ದರ್ಶನ್ ಅವರ ಫೇಸ್ ಬುಕ್ ಖಾತೆಯನ್ನು ಓಪನ್ ಮಾಡಿ ಇಟ್ಟುಕೊಂಡು ದರ್ಶನ್ ಲೈವ್ ಗಾಗಿ ಕಾಯುತ್ತಿದ್ದಾರೆ.

  ಮಾರಿ ಕಣ್ಣು ಹೋರಿ ಮ್ಯಾಗೆ... ದರ್ಶನ್ ಕಣ್ಣು ಯಾರ ಮ್ಯಾಗೆ..?

  ಆದ್ರೀಗ ಈ ಬಗ್ಗೆ ದರ್ಶನ್ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಫೇಸ್ ಬುಕ್ ನಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಈ ಬಗ್ಗೆ ದರ್ಶನ್ ಟ್ವೀಟ್ ಮಾಡಿದ್ದಾರೆ. "ಸೆಲೆಬ್ರಿಟಿ ಚಾಲೆಂಜ್ ಒಂದು ಗಂಟೆಗೆ" ಎಂದು ಹೇಳುವ ಮೂಲಕ ಎಷ್ಟೊತ್ತಿಗೆ ಎನ್ನುವ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

  ಇನ್ನೇನು ಕೆಲವೆ ಕ್ಷಣಗಳಲ್ಲಿ ದರ್ಶನ್ ಫೇಸ್ ಬುಕ್ ಲೈವ್ ಬರಲಿದ್ದಾರೆ. ಯಾರಿಗೆ ಓಪನ್ ಚಾಲೆಂಜ್ ಹಾಕುತ್ತಿದ್ದಾರೆ ಅನ್ನುವ ವಿಚಾರ ಬಹಿರಂಗವಾಗಲಿದೆ. ಅಲ್ಲಿವರೆಗು ಕುತೂಹಲದಿಂದ ಕಾಯುತ್ತಿರಬೇಕು ಅಷ್ಟೆ.

  English summary
  Kannada actor Challenging star Darshan is coming live on Facebook at 1 pm. Darshan to reveal about Open Challenge at 1 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X