ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಬರದಿರಿ: ನಟ ದರ್ಶನ್

Recommended Video

ಅಭಿಮಾನಿಗಳ ಬೆನ್ನಿಗೆ ನಿಂತ ಡಿ ಬಾಸ್..? | Darshan | FILMIBEAT KANNADA

"ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ" ಎಂದು ವಿರೋಧಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಖಡಕ್ ವಾರ್ನಿಂಗ್ ನೀಡುವ ಮೂಲಕ ಅಭಿಮಾನಿಗಳ ಬೆನ್ನಿಗೆ ನಿಂತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ವಾರ್ ತಾರಕಕ್ಕೇರಿದೆ. ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಕಿತ್ತಾಡುತ್ತಿದ್ದಾರೆ. ಅಭಿಮಾನಿಗಳ ವಾರ್ ಗೆ ಈಗ ದಾಸ ದರ್ಶನ್ ಎಂಟ್ರಿ ಕೊಟ್ಟಿದ್ದಾರೆ.

ಟ್ವಿಟ್ಟರ್ ನಲ್ಲಿ ಖಡಕ್ ಎಚ್ಚರಿಕೆ ನೀಡುವ ಮೂಲಕ ತಮ್ಮ ಅಭಿಮಾನಿಗಳ ಬೆನ್ನಿಗೆ ನಿಂತಿದ್ದಾರೆ ದರ್ಶನ್. ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಆದ ನಂತರ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ವಾರ್ ಜಾಸ್ತಿ ಆಗಿದೆ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಅಭಿಮಾನಿಗಳು ಮಾತ್ರ ಕಿತ್ತಾಡುತ್ತಿದ್ದರು, ಆದ್ರೀಗ ನಟ ದರ್ಶನ್ ನೇರವಾಗಿ ಫ್ಯಾನ್ಸ್ ವಾರ್ ಅಖಾಡಕ್ಕೆ ಇಳಿದಿದ್ದಾರೆ.

ವಿರೋಧಿಗಳಿಗೆ ದರ್ಶನ್ ವಾರ್ನಿಂಗ್

ವಿರೋಧಿಗಳಿಗೆ ದರ್ಶನ್ ವಾರ್ನಿಂಗ್

"ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು-ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ" ಎಂದು ಎಚ್ಚರಿಕೆ ನೀಡಿದ್ದಾರೆ.

ದರ್ಶನ್ ಅಭಿಮಾನಿಗಳ ಬಹಿರಂಗ ಪತ್ರ

ದರ್ಶನ್ ಅಭಿಮಾನಿಗಳ ಬಹಿರಂಗ ಪತ್ರ

ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಆದ ನಂತರ ಡಿ ಬಾಸ್ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳ ನಡುವೆ ಕಿತ್ತಾಟ ಜಾಸ್ತಿ ಆಗಿದೆ. ಪೈಲ್ವಾನ್ ಸಿನಿಮಾ ಪೈರಸಿಯಾಗಿ ವೈರಲ್ ಆಗುತ್ತಿದ್ದಂತೆ ಪೈರಸಿ ಆರೋಪ ದರ್ಶನ್ ಅಭಿಮಾನಿಗಳ ಮೇಲೆ ಬಂದಿದೆ. ಇದರಿಂದ ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ಸುದೀಪ್ ಫ್ಯಾನ್ಸ್ ಗೆ ಬಹಿರಂಗ ಪತ್ರ ಬರೆದಿದ್ದರು.

ಸುದೀಪ್ ಫ್ಯಾನ್ಸ್ ಬಹಿರಂಗ ಪತ್ರ

ಸುದೀಪ್ ಫ್ಯಾನ್ಸ್ ಬಹಿರಂಗ ಪತ್ರ

ದರ್ಶನ್ ಅಭಿಮಾನಿಗಳು ಬಹಿರಂಗ ಪತ್ರ ಬರೆಯುತ್ತಿದ್ದಂತೆ ಸುದೀಪ್ ಅಭಿಮಾನಿಗಳು ಸಹ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ದರ್ಶನ್ ಅಭಿಮಾನಿಗಳು ಹೇಳಿರುವ ಮಾತುಗಳಿಗೆ ಕೌಂಟರ್ ಕೊಡುವ ಹಾಗೆ ಸುದೀಪ್ ಅಭಿಮಾನಿಗಳು ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಫ್ಯಾನ್ಸ್ ವಾರ್ ಜಾಸ್ತಿಯಾಗುತ್ತಿದೆ

ಫ್ಯಾನ್ಸ್ ವಾರ್ ಜಾಸ್ತಿಯಾಗುತ್ತಿದೆ

ಫ್ಯಾನ್ಸ್ ವಾರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಏನಾದರು ಪೋಸ್ಟ್ ಮಾಡಿದ್ರೆ ಸುದೀಪ್ ಅಭಿಮಾನಿಗಳು ಕಮೆಂಟ್ ಮಾಡುತ್ತಾರೆ. ಸುದೀಪ್ ಅಭಿಮಾನಿಗಳು ಪೋಸ್ಟ್ ಮಾಡಿದರೆ ದರ್ಶನ್ ಅಭಿಮಾನಿಗಳು ಕಮೆಂಟ್ ಮಾಡಿ ಕೆಣಕುತ್ತಿರುತ್ತಾರೆ. ಇತ್ತೀಚಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾಡಿರುವ ಟ್ವೀಟ್ ಗೆ ಸುದೀಪ್ ಫ್ಯಾನ್ಸ್ ಬೆಂಬಲಿಸಿ ಕಮೆಂಟ್ ಮಾಡಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ಸ್ಟಾರ್ ನಟರಿಬ್ಬರ ಅಭಿಮಾನಿಗಳು ಕೆಸರೆರಚಾಟ ನಡೆಸುತ್ತಿದ್ದಾರೆ.

ದರ್ಶನ್ ಈಗ ಎಲ್ಲಿದ್ದಾರೆ?

ದರ್ಶನ್ ಈಗ ಎಲ್ಲಿದ್ದಾರೆ?

ದರ್ಶನ್ ಈಗ ರಾಬರ್ಟ್ ಚಿತ್ರದ ಶೂಟಿಂಗ್ ನಲ್ಲಿ ಇದ್ದಾರೆ. ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿರುವ ದರ್ಶನ್ ಅಭಿಮಾನಿಗಳ ಕಿತ್ತಾಟವನ್ನು ಗಮನಿಸಿ ವಿರೋಧಿಗಳಿಗೆ ಟ್ವಿಟ್ಟರ್ ನಲ್ಲಿ ಎಚ್ಚರಿಕೆ ನೀಡುವ ಮೂಲಕ ತಮ್ಮ ಅಭಿಮಾನಿಗಳ ಬೆನ್ನಿಗೆ ನಿಂತಿದ್ದಾರೆ. ಇದಿನ್ನು ಎಲ್ಲಿಗೆ ಹೋಗಿ ಮುಟ್ಟುತ್ತೊ ಆ ದೇವರಿಗೆ ಗೊತ್ತು.

More from Filmibeat

English summary
Challenging star Darshan is warning to Opponents fans in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X