For Quick Alerts
  ALLOW NOTIFICATIONS  
  For Daily Alerts

  ದರ್ಶನ್, ಜಗ್ಗೇಶ್ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್!

  |
  <ul id="pagination-digg"><li class="next"><a href="/news/darshan-jaggesh-upcoming-movie-agraja-launch-065319.html">Next »</a></li></ul>

  ಇದು ನಿಜವಾದ ಬ್ರೇಕಿಂಗ್ ನ್ಯೂಸ್..! ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನವರಸ ನಾಯಕ ಜಗ್ಗೇಶ್ ಒಟ್ಟಾಗಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಆ ಚಿತ್ರದ ಹೆಸರು ಅಗ್ರಜ. ದಿ ಇಂಡಿಯನ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಂಕಲನಕಾರ ಟಿ ಗೋವರ್ಧನ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಶ್ರೀ ನಂದನ್ ಎಂಬ ಹೊಸಬರು ಈ ಚಿತ್ರದ ನಿರ್ದೇಶಕರು.

  ಕಥೆ ಕೇಳಿದ ದರ್ಶನ್ ಹಾಗೂ ಜಗ್ಗೇಶ್ ಇಬ್ಬರೂ ಖುಷಿಖುಷಿಯಿಂದ 'ಓಕೆ' ಎಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಈ ಚಿತ್ರದ ಕಥೆಯಿದ್ದು, ದರ್ಶನ್ ಇದರಲ್ಲಿ ಐಪಿಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಜಗ್ಗೇಶ್ ಅವರಿಗೆ ತಮ್ಮ ಮ್ಯಾನರಿಸಂ ತೋರಿಸಲು ಅವಕಾಶವಿರುವ ಅಪರೂಪದ ಪಾತ್ರವಿದೆಯಂತೆ. ಆದರೆ ಸದ್ಯಕ್ಕೆ ಈ ಇಬ್ಬರೂ ನಟರು ಬಹಳ ಬಿಜಿ ಇರುವುದರಿಂದ ತಕ್ಷಣ ಮುಹೂರ್ತ ಸಾದ್ಯವಿಲ್ಲ.

  ಹಾಗಾಗಿ, ಅಂದುಕೊಂಡಂತೆ ನಡೆದರೆ ಆಗಷ್ಟ್ 15, 2012 ರಂದು ಈ ಚಿತ್ರ ಸೆಟ್ಟೇರಲಿದೆ. ಬಿಗ್ ಬಜೆಟ್ ನಿರ್ಮಾಣದ ಈ ಚಿತ್ರವನ್ನು ತಮಿಳು ಹಾಗೂ ತೆಲುಗಿಗೆ ಡಬ್ ಮಾಡುವ ಯೋಚನೆ ಇರುವುದರಿಂದ ಎಲ್ಲಾ ಕಡೆ ಸಲ್ಲಬಲ್ಲ ನಾಯಕಿಗಾಗಿ ಹುಡುಕಾಟ ನಡೆದಿದೆ. ಯಾರೊಬ್ಬರ ಹೆಸರೂ ಇನ್ನೂ ಪಕ್ಕಾ ಆಗಿಲ್ಲವಾದರೂ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳ ಪ್ರೇಕ್ಷಕರಿಗೆ ಇಷ್ಟವಾಗಿರುವ ನಟಿಯರ ಹೆಸರು ಪಟ್ಟಿಯಲ್ಲಿದೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/darshan-jaggesh-upcoming-movie-agraja-launch-065319.html">Next »</a></li></ul>
  English summary
  There is news confirmed that Challenging Star Darshan and Navarasa Nayaka Jaggesh acts together in a movie called Agraja. This movie will launch on August 15, 2012, if everything goes fine. Anyway, all fans of both actors became very happy from this News.&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X