ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಲಾಂಗ್ ' ಲೈಫ್ ಸ್ಟೋರಿ ; ಕರಿಯ ನಂತರ ಆಗಿದ್ದೇನು..?

ಅವಕಾಶಕ್ಕಾಗಿ ಅನೇಕ ಅವಮಾನಗಳನ್ನೇದುರಿಸಿ, ಕೊನೆಗೆ ಚಿತ್ರರಂಗದ ಸಹವಾಸವೇ ಬೇಡ ಅಂತ ದರ್ಶನ್ ಚಿತ್ರರಂಗವನ್ನೇ ಮರೆತು ಹಸು ಸಾಕ್ಕೊಂಡು ಜೀವನ ನಡೆಸ್ತಿರೋವಾಗ, ಇತ್ತ ಗಾಂಧಿನಗರದಲ್ಲಿ ಒಬ್ಬ ನಿರ್ದೇಶಕ ರು ಮೆಜೆಸ್ಟಿಕ್ ನಲ್ಲಿ ಕುಳಿತು ಮೆಜೆಸ್ಟಿಕ್ ಅನ್ನೋ ಸಿನಿಮ ಮಾಡ್ಬೇಕು ಅಂತ ಕನಸು ಕಾಣ್ತಿದ್ದರು.

ಅವರ ಹೆಸ್ರು ಪಿ.ಎನ್.ಸತ್ಯ. ಆವತ್ತು ದಾಸ ಅನ್ನೋ ಪಾತ್ರವನ್ನ ಕಲ್ಪಿಸಿಕೊಂಡಿದ್ದ ಸತ್ಯ ಆ ಪಾತ್ರಕ್ಕಾಗಿ ಕೊಂಚ ಎತ್ತರವಿರೋ ನಟನನ್ನ ಹುಡುಕಿ ಈ ದಾಸನ ಪಾತ್ರ ಮಾಡಿಸಬೇಕು ಅಂತ ಅಂದುಕೊಂಡ್ರು. ಆಗ ಒಬ್ಬ ಕ್ಯಾಮರಾಮನ್ ನಿನ್ನ ಕನಸಿನ ದಾಸ ಮೈಸೂರಲ್ಲಿದಾನೆ ಕಣಯ್ಯಾ ಅಂತ ಹೇಳ್ತಾರೆ. ಅಲ್ಲಿಗೆ ಕಾಲ ಸ್ತಂಭಿಸಿತ್ತು. ದಾಸನ ಆಗಮನವಾಗಿತ್ತು.

Challenging Star Darshan Journey From Light Man To Box Office Sultan

ಮೆಜೆಸ್ಟಿಕ್' ಚಿತ್ರದಲ್ಲಿ ನಾಯಕನಟನಾಗಿ ನಟಿಸುವ ಛಾನ್ಸು ದರ್ಶನ್ ಅವರ ಪಾಲಾಯಿತು. ನಿರ್ದೇಶಕ ಪಿ.ಎನ್. ಸತ್ಯಾಗೂ ಅದು ಮೊದಲ ಚಿತ್ರ.. ಈ ಚಿತ್ರದ ನಿರ್ಮಾಣ ಹಂತದಲ್ಲಿ ನೂರಾರು ಅಡೆತಡೆಗಳು ಎದುರಾಗುತ್ತಿದ್ದವು. ಎಷ್ಟೋ ಬಾರಿ ಈ ಸಿನಿಮಾ ಮುಗಿಯೋದೇ ಡೌಟು' ಎಂಬಂತಾಗಿಬಿಟ್ಟಿತ್ತು.

ಇವೆಲ್ಲ ತೊಂದರೆಗಳೇನೇ ಇದ್ದರೂ ದರ್ಶನ್ ಮಾತ್ರ ತನ್ನ ಕೆಲಸಕ್ಕೆ ನಿಷ್ಟರಾಗಿದ್ದರು. ಯಾವುದೇ ಕಷ್ಟಕ್ಕೂ ಅಂಜದೆ, ಪ್ರಾಮಾಣಿಕ ವಾಗಿ ದುಡಿದ್ರು.. ಫೈನಲಿ ಮೆಜೆಸ್ಟಿಕ್ ತೆರೆಗೆ ಬಂತು.. ಮೆಜೆಸ್ಟಿಕ್ ಸಿನಿಮಾದಲ್ಲಿ ದಾಸ ಅನ್ನೋ ಪಾತ್ರ ಮಾಡಿದ್ದ ದರ್ಶನ್ ಎಂಬ ಆರಡಿ ಎತ್ತರದ ನಟನನ್ನ ನೋಡಿ ಚಿತ್ರರಂಗ ಕಳೆದೋಯ್ತು?

Challenging Star Darshan Journey From Light Man To Box Office Sultan

ಅದ್ರಲ್ಲೂ ರೌಡಿಯೊಬ್ಬನ ಪಾತ್ರದಲ್ಲಿ ದರ್ಶನ್ ನಟಿಸಿದ ಪರಿಗೆ ಎಲ್ಲರೂ ಬೆರಗಾದ್ರೂ. ಕಣ್ಣಲ್ಲೆ ಕ್ರೌರ್ಯವನ್ನ ತೋರಿದ ರೀತಿ, ವಿಕ್ಷಿಪ್ತವಾದ ನಗೆ, ಭಯಹುಟ್ಟಿಸೋ ಅಪೀಯರೆನ್ಸ್ ನೋಡಿ ಫ್ಯಾನ್ಸ್ ಫಿದಾ ಆದ್ರು. ನೋಡ್ ನೋಡ್ತಾನೇ ದರ್ಶನ್ ಗೆ ಅಫರ್ ಗಳ ಸುರಿಮಳೆಯೇ ಆಗತೊಡಗಿತು? ಧ್ರುವ, ನಿನಗೋಸ್ಕರ, ಕಿಟ್ಟಿ ಹೀಗೆ ಸಾಲು ಸಾಲು ಸಿನಿಮಾ ಬಂದ್ವು,. ಎಲ್ಲಾ ಚಿತ್ರಗಳಲ್ಲೂ ದರ್ಶನ್ ನಟನೆ ಸೂಪರ್ಬ್.

ಇದೇ ಸಮಯದಲ್ಲಿ ನಿರ್ದೇಶಕ ಪ್ರೇಮ್ ತಮ್ಮ ಚೊಚ್ಚಲ ಸಿನಿಮಾಗೊಬ್ಬ ಖಡಕ್ ನಾಯಕನನ್ನ ಹುಡುಕ್ತಾ ಇದ್ರು. ರಿಯಲಿಸ್ಟಿಕ್ ರೌಡಿಸಂ ಸಿನಿಮಾವೊಂದನ್ನ ಮಾಡಬೇಕು ಅಂತ ಒಳ್ಳೆ ಸ್ಕ್ರಿಪ್ಟ್ ಮಾಡಿಕೊಂಡಿದ್ರು., ಅದಕ್ಕೆ ದರ್ಶನ್ ಸೂಕ್ತ ಅಂದುಕೊಂಡ್ರು. ದರ್ಶನ್, ಪ್ರೇಮ್ ಕನಸಿನ ಕರಿಯನಾಗಿ ತೆರೆ ಮೇಲೆ ಬಂದ್ರು.

Challenging Star Darshan Journey From Light Man To Box Office Sultan

ಕರಿಯ ಒನ್ಸ್ ಅಗೇನ್ ದರ್ಶನ್ ಕೆಪಾಸಿಟಿಯನ್ನ ಜಗಜ್ಜಾಹೀರು ಮಾಡಿದ ಸಿನಿಮಾ. ಓಂ ಸಿನಿಮಾ ಬಳಿಕ ಈ ಚಿತ್ರದಲ್ಲಿ ರಿಯಲ್ ರೌಡಿಗಳು ನಟಿಸಿದ್ರು. ಸಖತ್ ವೈಲೆನ್ಸ್ ಇತ್ತು. ಮನಮುಟ್ಟೋ ಹಾಡುಗಳಿದ್ವು. ಎಲ್ಲಕ್ಕಿಂತ ಹೆಚ್ಚಾಗಿ ಕರಿಯನ ಪಾತ್ರದಲ್ಲಿ ದರ್ಶನ್ ಇದ್ರು.

ಕರಿಯ ಬಂದ ಮೇಲೆ ದರ್ಶನ್ ಕೈಯಲ್ಲಿ ಲಾಂಗ್ ಕೊಡಬೇಕು ಅಂತಲೇ ಎಲ್ಲರೂ ಯೋಚಿಸ್ತಾ ಇದ್ರು. ಆಗ ದರ್ಶನ್ ರೌಡಿಸಂ ಸಿನಿಮಾಗಳಿಗಷ್ಟೇ ಸೀಮಿತ ಅಂತ ಕೆಲವು ಟೀಕೆಗಳೂ ಬಂದ್ವು. ಆಗ ದರ್ಶನ್ ನಮ್ಮ ಪ್ರೀತಿಯ ರಾಮು ನಂತಹ ಸಿನಿಮಾಗಳಲ್ಲೂ ನಟಿಸಿ ತನ್ನೊಳಗೊಬ್ಬ ಮನೋಜ್ಞ ನಟ ಇದ್ದಾನೆ ಅನ್ನೋದನ್ನ ಪ್ರೂವ್ ಮಾಡೋದಕ್ಕೆ ನಿಂತ್ರು.

Challenging Star Darshan Journey From Light Man To Box Office Sultan

ನಮ್ಮ ಪ್ರೀತಿಯ ರಾಮು ಸಿನಿಮಾದಲ್ಲಿ ದರ್ಶನ್ ಮಾಡಿದ್ದು ಕುರುಡನ ಪಾತ್ರ. ಕುರುಡನ ಪಾತ್ರಕ್ಕೆ ದರ್ಶನ್ ಸಿಕ್ಕಾಪಟ್ಟೆ ತಯಾರಿ ನಡೆಸಿ ಕಷ್ಟ ಪಟ್ಟು ನಟಿಸಿದ್ರು. ಆದ್ರೆ ಈ ಸಿನಿಮಾ ಗೆಲ್ಲಲಿಲ್ಲ. ನಡುವೆ ಲಾಲಿಹಾಡು, ಲಂಕೇಶ್ ಪತ್ರಿಕೆ ನಂತಹ ನವಿರಾದ ಸಿನಿಮಾಗಳನ್ನೂ ಮಾಡಿದ್ರು. ಆದ್ರೆ ಜನ ಮೆಚ್ಚಲಿಲ್ಲ.

ಅಷ್ಟೋತ್ತಿಗೆ ದರ್ಶನ್ ಗೆ ಜನ ತನ್ನನ್ನ ಹೇಗೆ ನೋಡೋದಕ್ಕಲೆ ಇಷ್ಟ ಪಡ್ತಾರೆ ಅನ್ನೋದು ಗೊತ್ತಾಗಿ ಹೋಗಿತ್ತು. ಮತ್ತೆ ಕೈಯಲ್ಲಿ ಲಾಂಗ್ ಹಿಡಿದ್ರು. ತುಟಿಯ ನಡುವೆ ಸಿಗರೇಟ್ ಬಂತು. ಮತ್ತೆ ದಾಸ ಆದ್ರು. ದರ್ಶನ್ ಮತ್ತೆ ಯಾವಾಗ ಲಾಂಗ್ ಹಿಡಿದು ಎಂಟ್ರಿ ಕೊಟ್ರೋ ಜನ ಥಿಯೇಟರ್ ಕಡೆಗೆ ಬಂದ್ರು. ದಾಸನಿಗೆ ಜೈ ಅಂದ್ರು.. ಅಲ್ಲಿಂದ ಆಚೆ ದರ್ಶನ್ ಲಾಂಗ್ ಬಿಡಲಿಲ್ಲ..? ಲಾಂಗ್ ದರ್ಶನ್ ಕೈ ಬಿಡಲಿಲ್ಲ..!

More from Filmibeat

English summary
Challenging Star Darshan had humble beginings in the industry. After graduating from ninasam, he started as light boy before taking up small roles in films. His career took a big leap when he grabbed the lead role in PN Satya's Mejestic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X