ಹೊಸ ವರ್ಷ ಒಳಿತನ್ನೇ ತರಲಿ, ಕೊರೊನಾ ಮಹಾಮಾರಿ ಜೀವನದಿಂದ ದೂರವಾಗಲಿ; ನಟ ದರ್ಶನ್
2021 ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ಭರವಸೆ, ಕನಸುಗಳೊಂದಿಗೆ ಹೊಸ ವರ್ಷವನ್ನು ಇಡೀ ವಿಶ್ವ ಸ್ವಾಗತಿಸಿದೆ. ಮನುಕುಲಕ್ಕೆ ದೊಡ್ಡ ಪಾಠ ಹೇಳಿಕೊಟ್ಟ 2020ಗೆ ಧನ್ಯವಾದ ಹೇಳುತ್ತಾ, ಮತ್ತೆ ಅಂತ ವರ್ಷ ಮರುಕಳುಹಿಸದಿರಲಿ ಎಂದು ಪ್ರಾರ್ಥಿಸುತ್ತಾ ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ಇಂದು ಎಲ್ಲೆಲ್ಲೂ ಹೊಸ ವರ್ಷದ ಶುಭಾಶಯಗಳೇ ಹರಿದಾಡುತ್ತಿದೆ. ಎಲ್ಲರೂ ಹೊಸ ವರ್ಷಕ್ಕೆ ಶುಭಾಶಯಗಳನ್ನು ತಿಳಿಸುತ್ತಾ ಆನಂದಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಟ ದರ್ಶನ್ ಹೊಸ ವರ್ಷಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ವಿಶ್ ತಿಳಿಸಿದ್ದಾರೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
'ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕೊರೊನಾ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ. ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು' ಎಂದು ಹೇಳಿದ್ದಾರೆ.

ದರ್ಶನ್ ವಿಶ್ ಗೆ ಅಭಿಮಾನಿಗಳು ಸಹ ಶುಭಾಶಯ ತಿಳಿಸಿ ಕಾಮೆಂಟ್ ಮಾಡುತ್ತಿದ್ದಾರೆ. ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದಾರೆ ಸಿನಿಮಾ ಕಳೆದ ವರ್ಷ ಏಪ್ರಿಲ್ ನಲ್ಲಿ ತೆರೆಕಾಣಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ಈ ವರ್ಷ ತೆರೆಕಾಣಲು ಸಜ್ಜಾಗುತ್ತಿದೆ.
ಇನ್ನು ನಟ ದರ್ಶನ್ ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಈ ವರ್ಷದಿಂದ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಫಾರ್ಮ್ ಹೌಸ್, ಸ್ನೇಹಿತರು, ಪ್ರವಾಸ ಅಂತ ಎಂಜಾಯ್ ಮಾಡಿಕೊಂಡಿದ್ದ ದರ್ಶನ್ ಈ ವರ್ಷ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿ, ನಿಲ್ಲಿಸಿರುವ ರಾಜ ವೀರ ಮದಕರಿ ನಾಯಕ ಸಿನಿಮಾ ಮತ್ತೆ ಪ್ರಾರಂಭಿಸುವ ಮೂಲಕ ಚಿತ್ರೀಕರಣಕ್ಕೆ ಹೊರಡುವ ಸಾಧ್ಯತೆ ಇದೆ.


Click it and Unblock the Notifications










