ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಜಗ್ಗು ದಾದಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಅಂಬರೀಶ' ಚಿತ್ರ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದರೂ ನಿರೀಕ್ಷಿಸಿದ ಮಟ್ಟದಲ್ಲೇನು ಗುರಿ ಮುಟ್ಟಲಿಲ್ಲ. ಇದೀಗ ಅವರು 'ಐರಾವತ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಐರಾವತ ಚಿತ್ರ ಬಹುತೇಕ ಪೂರ್ಣವಾಗಿದ್ದು, ಅವರ ಮುಂದಿನ ಚಿತ್ರ ಯಾವುದು ಎಂಬ ಸಂಗತಿ ಬಹಿರಂಗವಾಗಿದೆ. ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳಲಿರುವ 'ಜಗ್ಗು ದಾದಾ' ಚಿತ್ರವೇ ಅವರ ಮುಂದಿನ ಚಿತ್ರ. [2015ರಲ್ಲಿ ಸ್ವಮೇಕ್ ಸಿನಿಮಾಗಳದ್ದೇ ಚಕ್ರಾಧಿಪತ್ಯ]

'ಜಗ್ಗು ದಾದಾ' ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಾಸ್ ಎಲಿಮೆಂಟ್ಸ್ ನಿಂದ ತುಂಬಿರುವ ಚಿತ್ರ. ದರ್ಶನ್ ಅವರು ಡಾನ್ ಆಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ಜಗ್ಗು ದಾದಾ ಹೊರಗಡೆ ಡಾನ್ ಆಗಿ ಕಂಡರೂ ಹೃದಯದಲ್ಲಿ ಮಾತ್ರ ಗುಣ ಸಂಪನ್ನ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಯೂನುಸ್ ಸೆಜ್ ವಾಲ್ ಅವರ ಚಿತ್ರಕಥೆ ಇದೆ. ಇವರು ಶಾರುಖ್ ಖಾನ್ ಅವರ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರಕ್ಕೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ್ದರು. ಮುಂಬೈನ ಆರ್ಎಚ್ ಎಂಟರ್ ಟೇನ್ ಮೆಂಟ್ ಸಂಸ್ಥೆ ಜಗ್ಗು ದಾದಾ ಚಿತ್ರವನ್ನು ನಿರ್ಮಿಸುತ್ತಿದೆ. ರಾಘವೇಂದ್ರ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. (ಏಜೆನ್ಸೀಸ್)


Click it and Unblock the Notifications











