For Quick Alerts
  ALLOW NOTIFICATIONS  
  For Daily Alerts

  "ಕ್ರಾಂತಿ' ಚಿತ್ರದಲ್ಲಿ ಇವ್ರು ಒಳ್ಳೆ ಪಾತ್ರ ಮಾಡಿದ್ದಾರೆ.. ಪಕ್ಕದಲ್ಲಿ ನಾನು ಒಂದು ಪಾತ್ರ ಮಾಡಿದ್ದೀನಿ": ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಜನವರಿ 26ಕ್ಕೆ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ವರ್ಕ್ ಭರದಿಂದ ಆಗಿದೆ. ಇತ್ತೀಚೆಗೆ ಹಿರೇಕೆರೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದರ್ಶನ್ 'ಕ್ರಾಂತಿ' ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಹಂಚಿಕೊಂಡಿದ್ದಾರೆ.

  ಕೃಷಿ ಸಚಿವರಾದ ಬಿ. ಸಿ ಪಾಟೀಲ್ ಅವರ ಹುಟ್ಟುಹಬ್ಬದ ಅದ್ಧೂರಿ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ನೆಚ್ಚಿನ ನಟನನ್ನು ನೋಡಿ ಖುಷಿಪಟ್ಟರು. ವೇದಿಕೆಯಲ್ಲಿ ಮಾತನಾಡಿದ ದರ್ಶನ್, ಸಚಿವರಾದ ಬಿ. ಸಿ ಪಾಟೀಲ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಸಿದರು. ಜೊತೆಗೆ ಬಿ. ಸಿ ಪಾಟೀಲ್ ನಿರ್ಮಿಸಿ ನಟಿಸುತ್ತಿರುವ 'ಗರಡಿ' ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು. ಇದೇ ವೇಳೆ ಪೋಷಕ ನಟ ಧರ್ಮಣ್ಣ ನಟನೆ ಬಗ್ಗೆ ದರ್ಶನ್ ಆಡಿದ ಮಾತುಗಳು ವೈರಲ್ ಆಗಿದೆ.

  ತನಗಾಗಿ 500 ಕಿ.ಮೀ ನಡೆದು ಬಂದವರನ್ನು ಅಪ್ಪಿಕೊಂಡ ದರ್ಶನ್ತನಗಾಗಿ 500 ಕಿ.ಮೀ ನಡೆದು ಬಂದವರನ್ನು ಅಪ್ಪಿಕೊಂಡ ದರ್ಶನ್

  ತಾನು ಬೆಳೆದು ತನ್ನವರನ್ನು ಬೆಳೆಸುವ ಗುಣ ದರ್ಶನ್‌ ಅವರದ್ದು. ಹೊಸ ಪ್ರತಿಭೆಗಳನ್ನು ದರ್ಶನ್ ಸದಾ ಪ್ರೋತ್ಸಾಹಿಸುತ್ತಲೇ ಇರುತ್ತಾರೆ. ಹೊಸಬರ ಸಿನಿಮಾ ಪೋಸ್ಟರ್‌, ಟೀಸರ್, ಟ್ರೈಲರ್ ರಿಲೀಸ್ ಮಾಡುವುದು, ಅಥವಾ ಅತಿಥಿ ಪಾತ್ರದಲ್ಲಿ ನಟಿಸಿ ಬೆಂಬಲಿಸುತ್ತಾ ಬಂದಿದ್ದಾರೆ.

  ಧರ್ಮಣ್ಣ ಅಭಿನಯ ಮೆಚ್ಚಿದ ದರ್ಶನ್

  ಧರ್ಮಣ್ಣ ಅಭಿನಯ ಮೆಚ್ಚಿದ ದರ್ಶನ್

  ಹಿರೇಕೆರೂರಿನ ಅದ್ಧೂರಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡುತ್ತಾ ಹಿಂದೆ ನಿಂತಿದ್ದ ನಟ ಧರ್ಮಣ್ಣ ಅವರನ್ನು ದರ್ಶನ್ ಮುಂದಕ್ಕೆ ಕರೆದಿದ್ದಾರೆ. "ನಮ್ಮ ಧರ್ಮಣ್ಣ ಒಳ್ಳೆ ಕಲಾವಿದ. 'ಕ್ರಾಂತಿ' ಚಿತ್ರದಲ್ಲಿ ಅವರು ತುಂಬಾ ಒಳ್ಳೆಯ ಕ್ಯಾರೆಕ್ಟರ್ ಮಾಡಿದ್ದಾರೆ. ನಾನು ಅವರ ಪಕ್ಕದಲ್ಲಿ ಒಂದು ಕ್ಯಾರೆಕ್ಟರ್ ಮಾಡಿದ್ಧೀನಿ" ಎಂದು ಸರಳತೆ ಮೆರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  'ಗರಡಿ'ಯಲ್ಲಿ ಪಟ್ಟು ಹಾಕಲಿರುವ ದರ್ಶನ್

  'ಗರಡಿ'ಯಲ್ಲಿ ಪಟ್ಟು ಹಾಕಲಿರುವ ದರ್ಶನ್

  ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದಲ್ಲಿ ಬಿ. ಸಿ ಪಾಟೀಲ್ ಹಾಗೂ ಯಶಸ್ ಸೂರ್ಯ ಲೀಡ್‌ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದೆ ದರ್ಶನ್ ಶೂಟಿಂಗ್ ಅಖಾಡಕ್ಕೆ ಹೋಗಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಕುಸ್ತಿ ಕ್ರೀಡೆಯ ಸುತ್ತಾ ಚಿತ್ರದ ಕಥೆ ಸುತ್ತುತ್ತದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಸುತ್ತಾಮುತ್ತಾ ಸಿನಿಮಾ ಚಿತ್ರೀಕರಣ ನಡೆದಿದೆ. ಕಳೆದ ಬಾರಿ ಕೃಷಿ ಸಚಿವರಾದ ಬಿ. ಸಿ ಪಾಟೀಲ್ ಹುಟ್ಟುಹಬ್ಬದ ಸಂಭ್ರಮದಲ್ಲೇ ದರ್ಶನ್ ಈ ಚಿತ್ರದ ಟೈಟಲ್ ರಿವೀಲ್ ಮಾಡಿದ್ದರು.

  ರೈತರಿಗೆ ಸಿಂಪಥಿ ಬೇಡ

  ರೈತರಿಗೆ ಸಿಂಪಥಿ ಬೇಡ

  ಇನ್ನು ವೇದಿಕೆಯಲ್ಲಿ ಕೃಷಿ ಸಚಿವರಾದ ಬಿ. ಸಿ ಪಾಟೀಲ್ ಬಳಿ ನಟ ದರ್ಶನ್ ರೈತರ ಪರವಾಗಿ ವಿಶೇಷ ಮನವಿ ಮಾಡಿಕೊಂಡರು. "ನಮ್ಮ ರೈತರಿಗೆ ಸಿಂಪಥಿ ಬೇಡ. ಅನುಕಂಪವೂ ಬೇಡ, ಅವರಿಗೆ ಸೇರಬೇಕಾದದ್ದು ಅವರ ಕೈ ಸೇರಿದರೆ ಇನ್ನು ಮುಂದೆ ಬರುತ್ತಾರೆ. ಅಂತಹ ಯೋಜನೆಗಳನ್ನು ಮಾಡುತ್ತಲೇ ಇರಿ" ಎಂದರು. ಬಿ. ಸಿ ಪಾಟೀಲ್ ಅವರನ್ನು ದರ್ಶನ್ ಯಾವಾಗಲೂ ಕಾಕಾ ಎಂದು ಕರೆಯುತ್ತಾರೆ. ಇನ್ನು ದರ್ಶನ್ ಕೃಷ್ಣ ಇಲಾಖೆಯ ರಾಯಭಾರಿ ಕೂಡ ಆಗಿದ್ದಾರೆ. ಕಳೆದ ಬಾರಿ ಹಿರೇಕೆರೂರಿನಲ್ಲಿ ನಡೆದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿ ಆಗಿದ್ದರು.

  ದರ್ಶನ್ 'ಕ್ರಾಂತಿ'ಗೆ ವೇದಿಕೆ ಸಿದ್ಧ

  ದರ್ಶನ್ 'ಕ್ರಾಂತಿ'ಗೆ ವೇದಿಕೆ ಸಿದ್ಧ

  ವಿ. ಹರಿಕೃಷ್ಣ ನಿರ್ದೇಶನದಲ್ಲಿ ದರ್ಶನ್ ನಟಿಸುತ್ತಿರುವ ಸಿನಿಮಾ 'ಕ್ರಾಂತಿ'. ಶೈಲಜಾ ನಾಗ್ ಹಾಗೂ ಬಿ. ಸುರೇಶ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ಚಾಲೆಂಜಿಂಗ್ ಸ್ಟಾರ್‌ಗೆ ಸಾಥ್ ಕೊಟ್ಟಿದ್ದಾರೆ. ಅಕ್ಷರ ಕ್ರಾಂತಿಯ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದ್ದು ಜನವರಿ 26ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇನ್ನು ತರುಣ್ ಸುಧೀರ್ ನಿರ್ದೇಶನದ 'D56' ಚಿತ್ರದಲ್ಲೂ ದರ್ಶನ್ ಬಣ್ಣ ಹಚ್ಚಿದ್ದಾರೆ.

  English summary
  Chalanging Star Darshan Praises comedian Dharmanna Kadur Acting Skills Video Goes Viral. Darshan Attend BJP leader and Minister for Agriculture in Karnataka, B.C. Patil's Birthday Event in hirekerur. Know more.
  Tuesday, November 15, 2022, 23:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X