For Quick Alerts
  ALLOW NOTIFICATIONS  
  For Daily Alerts

  ಶಂಕರ್ ನಾಗ್ ಹುಟ್ಟುಹಬ್ಬ: 'ಆಟೋರಾಜ'ನನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  |

  ಕನ್ನಡ ಸಿನಿಮಾರಂಗದ ಮರೆಯಲಾಗದ ಮಾಣಿಕ್ಯ, ಜೀವನೋತ್ಸಾಹಿ, ಕರಾಟೆ ಕಿಂಗ್ ಶಂಕರ್ ನಾಗ್ ಗೆ ಇಂದು (ನ.09) ಹುಟ್ಟುಹಬ್ಬದ ಸಂಭ್ರಮ. ಪ್ರತಿಭಾವಂತ ನಟ, ನಿರ್ದೇಶಕ, ತಂತ್ರಜ್ಞ ಮತ್ತು ಹೊಸ ಚಿಂತನೆಗಳ ಹರಿಕಾರ ಆಟೋರಾಜ ಶಂಕರ್ ನಾಗ್ ಅವರ 66ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.

  ಶಂಕರ್ ನಾಗ್ ಕಣ್ಮರೆಯಾಗಿ 3 ದಶಕಗಳೇ ಕಳೆದಿವೆ. ಆದರೆ ಕನ್ನಡಿಗರಲ್ಲಿ ಹೆಮ್ಮೆಯ ಶಂಕ್ರಣ್ಣನ ನೆನಪು ಇನ್ನೂ ಹಸಿರಾಗೆ ಇದೆ. ಅದ್ಭುತ ಸಿನಿಮಾಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿ ಜೀವನವನ್ನು ಅರ್ಧಕ್ಕೆ ನಿಲ್ಲಿಸಿ, ಅಪಾರ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿರುವ ಶಂಕರ್ ನಾಗ್ ನನ್ನು ಇಂದು ಸಿನಿಮಾ ಮತ್ತು ರಾಜಕೀಯ ಗಣ್ಯರು ಸ್ಮರಿಸಿದ್ದಾರೆ.

  ಶಂಕರ್ ನಾಗ್ ಹುಟ್ಟುಹಬ್ಬ: ಕರಾಟೆ ಕಿಂಗ್ ನನ್ನು ಸ್ಮರಿಸಿದ ಗಣ್ಯರುಶಂಕರ್ ನಾಗ್ ಹುಟ್ಟುಹಬ್ಬ: ಕರಾಟೆ ಕಿಂಗ್ ನನ್ನು ಸ್ಮರಿಸಿದ ಗಣ್ಯರು

  66ನೇ ಜನ್ಮದಿನದ ಸಮಯದಲ್ಲಿ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ನಟರಾದ ಸುದೀಪ್, ದರ್ಶನ್ ಮತ್ತು ಧನಂಜಯ್ ಹಾಗೂ ನಟಿ ರಚಿತಾ ರಾಮ್ ಸೇರಿದಂತೆ ಅನೇಕರು ಸ್ಯಾಂಡಲ್ ವುಡ್ ಲೆಜೆಂಡ್ ಗೆ ಶುಭಕೋರಿದ್ದಾರೆ

  ಈ ಬಗ್ಗೆ ಟ್ವೀಟ್ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ' ನಿಜವಾದ ಲೆಜೆಂಡ್ ಗೆ ಎಂದಿಗೂ ಸಾವಿಲ್ಲ. ಅವರು ನೆನಪು ಯಾವಾಗಲು ಕನ್ನಡಿಗರ ಹೃದಯದಲ್ಲಿ ಹಸಿರಾಗೆ ಉಳಿದಿರುತ್ತೆ. ನಿಮ್ಮನ್ನು ಯಾವಾಗಲು ಮಿಸ್ ಮಾಡಿಕೊಳ್ಳುತ್ತೇವೆ. ಹುಟ್ಟುಹಬ್ಬದ ಶುಭಾಶಯಗಳು ಶಂಕ್ರಣ್ಣ' ಎಂದು ಟ್ವೀಟ್ ಮಾಡಿದ್ದಾರೆ.

  ನಟ ದರ್ಶನ್ ಸಾರಥಿ ಸಿನಿಮಾದಲ್ಲಿ ಶಂಕ್ರಣ್ಣನ ಅಭಿಮಾನಿಯಾಗಿ ನಟಿಸಿದ್ದರು. ಸಾರಥಿ ಸಿನಿಮಾದ ಫೋಟೋಗಳನ್ನು ಶೇರ್ ಮಾಡಿ ದರ್ಶನ್ ಅಭಿಮಾನಿಗಳು ಶಂಕರ್ ನಾಗ್ ಗೆ ಶುಭ ಹಾರೈಸುತ್ತಿದ್ದಾರೆ.

  ನನ್ನ ವಯಕ್ತಿಕ ಜೀವನದಲ್ಲಿ ನಡೆದ ಕಥೆ ಇದು | NodidavaruEnantare? | Filmibeat Kannada

  ಸಿನಿಮಾ ಗಣ್ಯರು ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳು ಸಹ ಶಂಕರ್ ನಾಗ್ ಹುಟ್ಟುಹಬ್ಬವನ್ನು ಸ್ಮರಿಸಿದ್ದಾರೆ. ನಟ ಸುದೀಪ್ ಟ್ವೀಟ್ ಎಲ್ಲರಿಗೂ ಹೀರೋ ಶಂಕರ್ ಎಂದು ಬರೆದು ಕೊಂಡಿದ್ದಾರೆ. ಜೊತೆಗೆ ಶಂಕರ್ ನಾಗ್ ಫೋಟೋವನ್ನು ಶೇರ್ ಮಾಡಿದ್ದಾರೆ.

  English summary
  Shankar Nag Birth Anniversary: Challenging star Darshan remember the legendary actor Shankar nag.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X