ಬಿಳಿ ಗಜೇಂದ್ರನ ಮೇಲೇರಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸವಾರಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯಾ ಎನ್ನುವುದು ಎಲ್ಲಿರಿಗೂ ಗೊತ್ತಿರುವ ವಿಚಾರ. ಮೈಸೂರಿನ ಫಾರ್ಮ್ ಹೌಸಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಅದರಲ್ಲು ದರ್ಶನ್ ಗೆ ಕುದುರೆ ಅಂದ್ರೆ ಪಂಚ ಪ್ರಾಣ. ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಕುದುರೆಗಳನ್ನೂ ಸಾಕಿದ್ದಾರೆ.
ಆಗಾಗ ಕುದುರೆ ಸವಾರಿ ಮಾಡಿ ರಿಲ್ಯಾಕ್ಸ್ ಆಗುವ ದರ್ಶನ್ ಇತ್ತೀಚಿಗಷ್ಟೆ ಗಜೇಂದ್ರನ ಸವಾರಿ ಮಾಡಿದ್ದಾರೆ. ದರ್ಶನ್ ಗೆ ಇಷ್ಟವಾದ ಕುದುರೆ ಗಜೇಂದ್ರ. ಈ ಗಜೇಂದ್ರ ಇತ್ತೀಚಿಗಷ್ಟೆ ದರ್ಶನ್ ಫಾರ್ಮ್ ಹೌಸ್ ಸೇರಿದೆ. ಈ ಬಿಳಿ ಬಣ್ಣದ ಗಜೇಂದ್ರನನ್ನು ಮಹಾರಾಷ್ಟ್ರದಿಂದ ಖರೀದಿಸಿದ್ದಾರೆ.

ಕುರುಕ್ಷೇತ್ರ ಪ್ರಮೋಷನ್, ರಾಬರ್ಟ್ ಚಿತ್ರದಲ್ಲಿ ಬ್ಯುಸಿ ಇರುವ ದರ್ಶನ್ ಸದ್ಯ ಕುದುರೆ ಸವಾರಿ ಮಾಡುತ್ತ ಜಾಲಿ ಮಾಡುತ್ತಿದ್ದಾರೆ. ಬಿಡುವಿನ ವೇಳೆ ಚಾಲೆಂಜಿಂಗ್ ಸ್ಟಾರ್ ಫಾರ್ಮ್ ಹೌಸ್ ನಲ್ಲಿರುವ ಪ್ರಾಣಿಗಳ ಜೊತೆಯೆ ಹೆಚ್ಚು ಕಾಲ ಕಳೆಯುತ್ತಾರೆ.

ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ಕನ್ನಡ ಮತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ಒಡೆಯ ಸಿನಿಮಾ ರಿಲೀಸ್ ಗೆ ಸಜ್ಜಾಗುತ್ತಿದೆ. ಜೊತೆಗೆ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಡಿ ಬಾಸ್ ಬ್ಯುಸಿಯಾಗಿದ್ದಾರೆ.


Click it and Unblock the Notifications











