For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಡಿ ಕಂಪೆನಿ' ಶುರು ಮಾಡ್ತಾರಂತೆ

  By Suneetha
  |

  ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ, ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗಿದೆ.

  ದರ್ಶನ್ ಅವರು ಮೊನ್ನೆ ಮೊನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಅವರ ಮುಂದಿನ ಚಿತ್ರಗಳ ಇಡೀ ಲಿಸ್ಟ್ ಅನ್ನು ಇದೇ ಫಿಲ್ಮಿಬೀಟಲ್ಲಿ ನಾವು ನಿಮಗೆ ಒದಗಿಸಿದ್ವಿ ತಾನೇ.[ಬರ್ತ್ ಡೇ ಸ್ಪೆಷಲ್: ದರ್ಶನ್ ಅವರ ಮುಂಬರುವ ಚಿತ್ರಗಳ ಲಿಸ್ಟ್]

  ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಸದಾಗಿ ಒಪ್ಪಿಕೊಂಡಿರುವ ಚಿತ್ರಕ್ಕೆ 'ಡಿ ಕಂಪೆನಿ' ಎಂದು ಹೆಸರಿಡಲಾಗಿದೆ. ವಿಶೇಷ ಏನಪ್ಪಾ ಅಂದ್ರೆ ದರ್ಶನ್ ಅಭಿಮಾನಿಗಳ ಸಂಘದ ಹೆಸರು ಕೂಡ ಡಿ.ಕಂಪೆನಿ ಆಗಿದ್ದು, ಇದೀಗ ದರ್ಶನ್ ಅವರ ಹೊಸ ಪ್ರಾಜೆಕ್ಟ್ ನ ಹೆಸರು ಕೂಡ 'ಡಿ.ಕಂಪೆನಿ'.

  ಮೊಟ್ಟ ಮೊದಲ ಬಾರಿಗೆ ದರ್ಶನ್ ಅವರಿಗೆ 'ಮೆಜೆಸ್ಟಿಕ್' ಚಿತ್ರದ ಮೂಲಕ ಬ್ರೇಕ್ ಕೊಟ್ಟ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರು 'ಡಿ.ಕಂಪೆನಿ' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಅಂತೂ ಮತ್ತೆ 'ಮೆಜೆಸ್ಟಿಕ್' ಜೋಡಿ ಒಂದಾಗುತ್ತಿದೆ.[ದರ್ಶನ್ ಅವರ ಈ ಭಾನುವಾರ ಹೇಗಿತ್ತು ಗೊತ್ತಾ?]

  'ಮೆಜೆಸ್ಟಿಕ್' ಸಿನಿಮಾ ಕೊಟ್ಟ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರು ತದನಂತರ ಬಾ.ಮಾ ಹರೀಶ್ ಅವರ ಜೊತೆಗೂಡಿ ದರ್ಶನ್ ಅವರಿಗೆ 'ಧರ್ಮ' ಎಂಬ ಸಿನಿಮಾ ಮಾಡಿದರು. ಆದರೆ ಆ ಸಿನಿಮಾ ಅಷ್ಟಾಗಿ ಗಾಂಧಿನಗರದಲ್ಲಿ ಸೌಂಡ್ ಮಾಡಲಿಲ್ಲ.

  ಇದೀಗ ನಿರ್ಮಾಪಕ ರಾಮಮೂರ್ತಿ ಅವರು ತಮ್ಮ ಗೆಳೆಯ ಭೋಜರಾಜ ರೈ ಅವರ ಜೊತೆಗೂಡಿ 'ಡಿ.ಕಂಪೆನಿ' ಸಿನಿಮಾ ಮಾಡಲು ಹೊರಟಿದ್ದಾರೆ. ಇನ್ನು ಚಿತ್ರದಲ್ಲಿ ಯಾರ್ಯಾರು ಇರುತ್ತಾರೆ, ದರ್ಶನ್ ಜೊತೆ ಯಾರು ಡ್ಯುಯೆಟ್ ಹಾಡುತ್ತಾರೆ ಎಂಬುದೆಲ್ಲಾ ಸದ್ಯದ ಸಸ್ಪೆನ್ಸ್.[ದರ್ಶನ್ ಅಭಿಮಾನಿಗಳಿಗೆ 'ಜಗ್ಗುದಾದ' ಟೀಸರ್ ಗಿಫ್ಟ್]

  ಸದ್ಯಕ್ಕೆ ನಿರ್ಮಾಪಕರಿಗೆ ದರ್ಶನ್ ಅವರ ಕಾಲ್ ಶೀಟ್ ಮಾತ್ರ ದೊರಕಿದ್ದು, ಮಿಕ್ಕಿದ್ದೆಲ್ಲಾ ಮುಂದಿನ ದಿನಗಳಲ್ಲಿ ನಿರ್ಧಾರವಾಗಬೇಕಿದೆ. ಒಟ್ನಲ್ಲಿ ದರ್ಶನ್ ಅವರು ವಿಭಿನ್ನ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ.

  ನಿರ್ಮಾಪಕ ರಾಮಮೂರ್ತಿ ಅವರು 'ಎನ್ ಕೌಂಟರ್ ದಯಾನಾಯಕ್', 'ಗಂಗೆ ಬಾರೇ ತುಂಗೆ ಬಾರೇ', 'ಐತಲಕ್ಕಡಿ' ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಇನ್ನು ದರ್ಶನ್ ಅವರು ಸದ್ಯಕ್ಕೆ ರಾಘವೇಂದ್ರ ಹೆಗಡೆ ನಿರ್ದೇಶನ ಹಾಗೂ ನಿರ್ಮಾಣದ 'ಜಗ್ಗುದಾದಾ' ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

  English summary
  Producer MG Ramamurthy who has been away for film making for a while is all set to make a comeback as a producer . The film has been titled as 'D Company'. Earlier Mg Ramamurthy has produce Darshan's Debut film as a hero 'Majestic'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X