ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಟ್ರೈಲರ್ ರಿಲೀಸ್‌ಗೆ ಡೇಟ್ ಫಿಕ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕಾಟೇರ' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಸಿನಿಮಾ ಬಗ್ಗೆ ಸಕತ್ ಹೈಪ್ ಕ್ರಿಯೆಟ್ ಆಗಿದ್ದು, ದಾಸನ ಅಭಿಮಾನಿಗಳು 'ಕಾಟೇರ'ನ ಆಗಮನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೇ ಚಿತ್ರತಂಡ ಅಭಿಮಾನಿಗಳಿಗೆ ಸಕತ್ ಸಿಹಿ ಸುದ್ದಿ ನೀಡಿದ್ದು, ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಡಿಸೆಂಬರ್ 13 ರಂದು 'ಕಾಟೇರ' ಬಗ್ಗೆ ಅಪ್‌ಡೇಟ್ ಹಂಚಿಕೊಳ್ಳುವುದಾಗಿ ನಿರ್ದೇಶಕ ತರುಣ್ ಸುಧೀರ್ ಮಾಹಿತಿ ನೀಡಿದ್ದರು. ಇದು ಹಲವು ಗೊಂದಲಕ್ಕೆ ಕಾರಣವಾಗಿತ್ತು. ಸಿನಿಮಾದ ಸೀನ್ ಒಂದು ಲೀಕ್ ಆಗಿದೆ ಎಂಬ ಬಗ್ಗೆಯೋ, ಯಾವುದರ ಬಗ್ಗೆ, ಏನು ಅಪ್‌ಡೇಟ್ ನೀಡುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದರು. ಸಕಾಟೇರ ಬರೋದು ತಡವಾಗಲಿದೇಯೇ ಎಂಬ ಅನುಮಾನ ಕೂಡ ಹಲವರು ವ್ಯಕ್ತಪಡಿಸಿದ್ದರು.

ಮೂರು ದಿನಗಳಲ್ಲಿ ಕಾಟೇರ ಟ್ರೈಲರ್ ನಿಮ್ಮ ಮುಂದೆ!
ಡಿಸೆಂಬರ್ 13 ರ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ 'ಕಾಟೇರ'ನ ಹವಾ ಸಕತ್ ಜೋರಾಗಿತ್ತು. ತರುಣ್ ಸುಧೀರ್ ಅಪ್‌ಡೇಟ್ ಹಮಚಿಕೊಳ್ಳುವುದಾಗಿ ಹೇಳಿದ ಮೇಲೆ ಫ್ಯಾನ್ಸ್ ನಿರೀಕ್ಷೆ ಜಾಸ್ತಿಯಾಗಿತ್ತು. ಚಿತ್ರತಂಡ ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಿರುವುದರಿಂದ, ಇದು ಟ್ರೇಲರ್ ಬಗ್ಗೆಯೇ ಇರುತ್ತದೆ ಎಂದು ನಂಬಿದ್ದರು. ಇದಕ್ಕೆ ತಕ್ಕಂತೆ ಕಾಟೇರ ತಂಡ ಕೂಡ ಒಳ್ಳೆ ಸುದ್ದಿ ನೀಡಿದೆ.
ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಈ ವಾರ ಟ್ರೇಲರ್ ಬಿಡುಗಡೆ ಮಾಡುತ್ತಾರೆ ಎಂದು ಅಭಿಮಾನಿಗಳು ನಂಬಿದ್ದರು. ಹಾಗೇಯೇ ಡಿಸೆಂಬರ್ 16 ರಂದು ಕಾಟೇರ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ನಟ ದರ್ಶನ್ ತೂಗುದೀಪ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಮಾಹಿತಿ ನೀಡಿದ್ದಾರೆ.
ಕಾಟೇರ ಅಪ್‌ಡೇಟ್ ಹಂಚಿಕೊಂಡ ದರ್ಶನ್ ತೂಗುದೀಪ
ನಟ ದರ್ಶನ್ ಇದೇ ಮೊದಲ ಬಾರಿಗೆ ರೆಟ್ರೋ ಶೈಲಿಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 70 ರ ದಶಕದ ಅವಧಿಯ ಚಿತ್ರವಾಗಿದ್ದು, ಇದು ಮಂಡ್ಯ ಭಾಗದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ ಎನ್ನಲಾಗಿದೆ. ಕೃಷಿ ಸಮಸ್ಯೆ ಸುತ್ತ ಸಿನಿಮಾ ನಡೆಯಲಿದೆ. ಹೀಗಾಗಿ ದರ್ಶನ್ ಪಾತ್ರ ಕೂಡ ಉತ್ತಮವಾಗಿರಲಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.

ಕಾಟೇರ ಸಿನಿಮಾ ಟ್ರೈಲರ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ದರ್ಶನ್, "ಕಾಟೇರ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ಕ್ಕೆ ಬಿಡುಗಡೆ. Get set for a magnificent spectacle as #KaateraTrailer prepares to drop on the 16th of December" ಎಂದು ಡಿಸೆಂಬರ್ 13 ರಂದು ಟ್ವೀಟ್ ಮಾಡಿದ್ದಾರೆ.
ಕಾಟೇರ ಸಿನಿಮಾ
ಕಾಟೇರ ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿವೆ. ಹಾಡುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಗಳು ಹಳೆಯದಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ. 'ಪಸಂದಾಗೌನೆ' ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಜೋಡಿಯಾಗಿದ್ದಾರೆ.
ಕಾಟೇರ ಸಿನಿಮಾ ರಾಬರ್ಟ್ ನಂತರ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನ ಎರಡನೇ ಚಿತ್ರ. ಚಿತ್ರದಲ್ಲಿ ದರ್ಶನ್ ಮತ್ತು ಆರಾಧನಾ ರಾಮ್ ಜೊತೆಗೆ ಜಗಪತಿ ಬಾಬು, ಕುಮಾರ್ ಗೋವಿಂದ್, ಶೃತಿ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು, ಸೆನ್ಸಾರ್ ಸಮಸ್ಯೆ ಕೂಡ ಎದುರಾಗಿದ್ದು, ಡಿಸೆಂಬರ್ 29ಕ್ಕೆ ಕಾಟೇರ ರಿಲೀಸ್ ಆಗುತ್ತಾ ಎಂಬುದು ಇನ್ನು ಗೊತ್ತಿಲ್ಲ. ಆದರೆ, ಆಗೇ ಆಗುತ್ತೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.


Click it and Unblock the Notifications











