ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಹೆಚ್ಚುತ್ತಿರುವ ನಿರೀಕ್ಷೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರಲಿರುವ ಚಿತ್ರ 'ಸಂಗೊಳ್ಳಿ ರಾಯಣ್ಣ' ಬಿಡುಗಡೆಗೆ ಸನ್ನದ್ಧವಾಗುತ್ತಿರುವ ಈ ವೇಳೆಯಲ್ಲಿ ದರ್ಶನ್ ಅಭಿಮಾನಿಗಳಲ್ಲಿ ಸಹಜವಾಗಿಯೇ ಮಿಂಚಿನ ಸಂಚಾರ ಆರಂಭವಾಗಿದೆ. 'ಚಿಂಗಾರಿ' ನಂತರ ದರ್ಶನ್ ನಾಯಕತ್ವದ ಯಾವುದೇ ಚಿತ್ರ ಬರಲಿಲ್ಲವಾಗಿ, ಸಹಜವಾಗಿಯೇ ದರ್ಶನ್ ಅಭಿಮಾನಿಗಳು ಅವರನ್ನು ತೆರೆಯಲ್ಲಿ ನೋಡಲು ಭಾರಿ ಉತ್ಸುಕರಾಗಿದ್ದಾರೆ.

ಈ ವಿಷಯ ದರ್ಶನ್ ಗೌರವ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಸ್ನೇಹಿತರು' ಚಿತ್ರ ನೋಡಲು ಬಂದ ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಸ್ಪಷ್ಟವಾಗುತ್ತಿದೆ. ದರ್ಶನ್ ತೆರೆಯಲ್ಲಿ ಬಂದರೆ ಸಾಕು, ಪ್ರೇಕ್ಷಕವಲಯ ಉಸಿರು ಬಿಗಿ ಹಿಡಿದು ನೋಡುತ್ತದೆ. ದರ್ಶನ್ ಹೇಳುವ ಮೊದಲ ಸಂಭಾಷಣೆಗೆ ತೂರಿಬರುವ ಶಿಳ್ಳೆ, ಚಪ್ಪಾಳೆ, ಕೊನೆಯ ಸಂಭಾಷಣೆ ಮುಗಿದರೂ ನಿಲ್ಲುವುದಿಲ್ಲ. ದರ್ಶನ್ ಅವರಿಗೆ 'ಅಣ್ಣ' ಎಂದು ಚಿತ್ರದಲ್ಲಿ ಕರೆಯುವ ಸಂಭಾಷಣೆಗೆ ಪ್ರೇಕ್ಷಕರ ಕರತಾಡನ ಮುಗಿಲುಮುಟ್ಟುತ್ತದೆ.

ಈ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚಿಗೆ ನೆರವೇರಿದ್ದು, ಚಿತ್ರದ ನಾಯಕ ದರ್ಶನ್ ಸ್ವತಃ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವುದು ವ್ಯಕ್ತವಾಗಿದೆ. ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡಿರುವ ಈ 'ಸಂಗೊಳ್ಳಿ ರಾಯಣ್ಣ' ಚಿತ್ರವು ಕನ್ನಡ ಸಿನಿಮಾಗಳ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಬಜೆಟ್ ಹೊಂದಿರುವ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ. ಬಜೆಟ್ ಮೊದಲೇ ನಿರ್ಧಾರ ಮಾಡಿ ಸಿನಿಮಾ ಮಾಡಬಾರದೆಂಬ ನಿರ್ಮಾಪಕ ಅಪ್ಪುಗೋಳ್ ಹೇಳಿಕೆಗೆ ಪ್ರತ್ಯಕ್ಷ ಸಾಕ್ಷಿಯಂತಿದೆ 'ಸಂಗೊಳ್ಳಿ ರಾಯಣ್ಣ'.

"ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಗೆ ಹಾಗೂ ದೇಶ ಭಕ್ತರಿಗಾಗಿಯೇ ಈ ಸಿನಿಮಾ ಮಾಡಿದ್ದೇನೆ. ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ. ಹಾಕಿದ ಬಜೆಟ್ ಬಗ್ಗೆ ಯಾವುದೇ ಚಿಂತೆಯೂ ನನಗಿಲ್ಲ. ಹಾಕಿದ ಹಣ ವಾಪಸ್ ಬಾರದಿದ್ದರೆ ಚಿಂತೆಯಾಗದು. ಚಿತ್ರದಿಂದ ನೂರು ಕೋಟಿ ರೂಪಾಯಿ ಲಾಭ ಬಂದರೂ ಸಂತಸವಾಗದು. ರಾಯಣ್ಣನ ಚಿತ್ರ ಮಾಡಬೇಕೆಂಬ ಕನಸಿತ್ತು, ಮಾಡಿದ್ದೇನೆ ಅಷ್ಟೇ" ಅಂದಿದ್ದಾರೆ ಆನಂದ್ ಅಪ್ಪುಗೋಳ್ (ಒನ್ ಇಂಡಿಯಾ ಕನ್ನಡ)

More from Filmibeat

English summary
Challenging Star Darshan upcoming movie 'Sangolli Rayanna' to Release on this month, October 2012. This movie is in High Expectation from the audience as well as the Darshan himself. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X