Don't Miss!
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರರಂಗದಲ್ಲಿರುವ ಸ್ಟಾರ್ ವಾರ್ಗೆ ನಿರ್ದೇಶಕರು, ಬರಹಗಾರರು ಕಾರಣ: ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿರುವ ಸ್ಟಾರ್ ವಾರ್ ಬಗ್ಗೆ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಯಶ್ ನಟಿಸಿದ ಸಿನಿಮಾಗಳ ಡೈಲಾಗ್ಸ್ ಸ್ಟಾರ್ ವಾರ್, ಫ್ಯಾನ್ಸ್ ವಾರ್ಗೆ ಕಾರಣವಾಗಿತ್ತು. ಇದು ದೊಡ್ಡಮಟ್ಟದಲ್ಲಿ ಸದ್ದು ಕೂಡ ಮಾಡಿತ್ತು.
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಫಿಲ್ಮ್ ಕಾಂಪಾನಿಯನ್ ಸೌತ್ ಯೂಟ್ಯೂಬ್ ಚಾನಲ್ಗೆ ನೀಡಿರುವ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರರಂಗದ ಏಳುಬೀಳು, ವೈಯಕ್ತಿಯ ಜೀವನ ಎಲ್ಲದರ ಬಗ್ಗೆಯೂ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಕಥೆಗಳ ಆಯ್ಕೆ ವಿಚಾರದಲ್ಲಿ ಯಾವೆಲ್ಲಾ ವಿಚಾರಗಳನ್ನು ಗಮನಿಸುತ್ತಾರೆ ಎನ್ನುವುದನ್ನು ಹೇಳಿದ್ದಾರೆ.
ಬೆಳಗಾವಿ
ತಂಟೆಗೆ
ಬಂದ
ಮಹಾರಾಷ್ಟ್ರಕ್ಕೆ
ಖಡಕ್
ಎಚ್ಚರಿಕೆ
ನೀಡಿದ
ದರ್ಶನ್!
ಯಾರಿಗೋ ಕೌಂಟರ್ ಕೊಡುವ ಸನ್ನಿವೇಶ, ಡೈಲಾಗ್ ಇದ್ದರೆ ನಾನು ಅದನ್ನು ಒಪ್ಪುವುದಿಲ್ಲ. ಸ್ಟಾರ್ ವಾರ್ಗಳಿಗೆ ಕಾರಣ ಸಿನಿಮಾ ಮಾಡಲು ಬರುವ ಬರಹಗಾರರು, ನಿರ್ದೇಶಕರು ಎಂದು ದರ್ಶನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಥೆ ಆಯ್ಕೆ ಹೇಗಿರುತ್ತದೆ?
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಮಾಸ್ ಸಿನಿಮಾಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಒಂದು ಸಿನಿಮಾ ಕತೆ ಒಪ್ಪಿಕೊಳ್ಳುವಾಗ ಏನೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ "ಸಾಮಾಜಿಕ ಕಳಕಳಿ ಇರಬೇಕು. ಓಹ್ ಎನ್ನುವುದೆಲ್ಲಾ ಬೇಡ. ನಮ್ಮ ನಡುವೆ ನಡೆಯುವ ಕಥೆ ಆಗಿರಬೇಕು. ಆಗ ಮಾತ್ರ ಕನೆಕ್ಟ್ ಆಗಲು ಸಾಧ್ಯ. ಕಮರ್ಷಿಯಲ್ ಏನಾದರೂ ಇರಲಿ. ಸಾಮಾಜಿಕ ಕಳಕಳಿ ಇರಬೇಕು" ಎಂದಿದ್ದಾರೆ.
"ಹೌದು
ನಾನು
ಬಾವಿಯಲ್ಲಿರುವ
ಕಪ್ಪೆನೇ..
ನನಗೆ
ಮಾತೃಭೂಮಿ
ಮೊದಲು":
ದರ್ಶನ್

ಸ್ಟಾರ್ ವಾರ್ಗೆ ಕಾರಣ ಯಾರು?
ಕಥೆ ಅಥವಾ ಸಂಭಾಷಣೆಯಲ್ಲಿ "ಯಾವುದೇ ಹೀರೊಗೆ ಟಾಂಗ್ ಕೊಡುವಂತೆ ಇರಬಾರದು. ನನ್ನಿಂದ ಮತ್ತೊಬ್ಬರಿಗೆ ನೋವಾಗಬಾರದು. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಪ್ಪಿ ತಪ್ಪಿ ಏನಾದರೂ ಆ ಡೈಲಾಗ್ ಅಲ್ಲಿ ಹೇಳಿದ್ದಾರೆ ಇಲ್ಲಿ ಬಂದಿದೆ ಎಂದು ಯಾರದರೂ ಹೇಳಿದರೆ ಕಥೆ ಮುಗೀತು. ಯಾಕಂದರೆ ಆ ಹೀರೊ ಆ ಚಿತ್ರದಲ್ಲಿ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿರಲ್ಲ. ನಾವು ನೋಡಿರಲ್ಲ. ಇದರಿಂದ ಹೀಗೆಲ್ಲಾ ಆಗುತ್ತದೆ"

ಕೋತಿ ಕೆಲಸ ಮಾಡುವುದು ಯಾರು?
"ಬರಹಗಾರರು ಯಾವುದೋ ದ್ವೇಷಕ್ಕೆ ಇಂತಹ ಡೈಲಾಗ್ಸ್ ಬರೀತಾರೆ. ಸ್ಟಾರ್ ವಾರ್ ಫ್ಯಾನ್ಸ್ ಅಥವಾ ಹೀರೊಗಳು ಮಾಡೊದಲ್ಲ. ನಿರ್ದೇಶಕರು, ಬರಹಗಾರರು ಮಾಡುವ ಕೋತಿ ಕೆಲಸ. ನಾನು ಯಾರಿಗೂ ಡೇಟ್ಸ್ ಕೊಟ್ಟಿರಲ್ಲ. ಅವನು ಮತ್ತೊಬ್ಬರ ಬಳಿ ಹೋಗಿ ಏನೇನೊ ಹೇಳಿ, ಹಿಂಗೆಲ್ಲಾ ಬರೆಸಿಬಿಡುತ್ತಾನೆ. ಅದನ್ನು ನೋಡಿ ನಮ್ಮ ಹುಡುಗ್ರು ಗರಂ ಆಗುತ್ತಾರೆ. ನಾನು ಹೇಳಿರಲ್ಲ. ಅಲ್ಲಿ ಮಾಡಿದ ಮತ್ತೊಬ್ಬ ಹೀರೊಗೂ ಗೊತ್ತಿರಲ್ಲ. ಇದೆಲ್ಲಾ ಇವರ ಕಿತಾಪತಿ. ಹಾಗಾಗಿ ಇದೆಲ್ಲಾ ಬೇಡ ಎಂದು ಹೇಳಿರುತ್ತೀನಿ" ಎಂದು ದರ್ಶನ್ ಹೇಳಿದ್ದಾರೆ.
ಕ್ರಾಂತಿ
ಚಿತ್ರದ
'ಧರಣಿ'
ಹಾಡನ್ನು
ಯಾವುದರ
ಬಗ್ಗೆ
ಬರೆಯಲಾಗಿದೆ
ಎಂದು
ತಿಳಿಸಿದ
ದರ್ಶನ್;
ಗೂಸ್ಬಂಪ್ಸ್
ಗ್ಯಾರಂಟಿ!

'ಧರಣಿ' ಹಾಡು ಬಿಡುಗಡೆಗೆ ಕ್ಷಣಗಣನೆ
ವಿ. ಹರಿಕೃಷ್ಣ ನಿರ್ದೇಶನದಲ್ಲಿ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಜನವರಿ 26ಕ್ಕೆ ತೆರೆಗೆ ಬರ್ತಿದೆ. ಅಕ್ಷರ ಕ್ರಾಂತಿಯ ಕಥೆಯನ್ನು ಚಿತ್ರದಲ್ಲಿ ಹೇಳಿದ್ದಾರೆ. ನಾಳೆ(ಡಿಸೆಂಬರ್ 10) ಮೈಸೂರಿನಲ್ಲಿ ಚಿತ್ರದ ಮೊದಲ ಹಾಡು 'ಧರಣಿ' ಬಿಡುಗಡೆ ಆಗಲಿದೆ. ವಿ. ಹರಿಕೃಷ್ಣ ಸಂಗೀತ ಈ ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈಗಾಗಲೇ ಸಣ್ಣ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ತೆರೆಗೆ ಬರುತ್ತಿರುವುದು ವಿಶೇಷ.