ಇಳಕಲ್ ನಲ್ಲಿ ಗುಡುಗಿದ ದರ್ಶನ್: ಅಡ್ಡ ದಾರಿ ಹಿಡಿಯೋರಿಗೆ ದಾಸನ ಬುದ್ದಿ ಮಾತು

By Bharath Kumar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗಷ್ಟೇ ಬಾಗಲಕೋಟೆಯ ಇಳಕಲ್ ನಲ್ಲಿ ನಡೆದ ರಾಷ್ಟ್ರೀಯ ಯುವ ಉತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸ್ಟೇಜ್ ಮೇಲೆ ಮಾತನಾಡಿದ ಡಿ-ಬಾಸ್ ಕೆಲವು ಕಹಿ ಘಟನೆಗಳನ್ನ ಮೆಲುಕು ಹಾಕಿದರು.

ದರ್ಶನ್ ಅವರನ್ನ ಇಂಡಸ್ಟ್ರಿಗೆ ಅವರು ಕರೆದುಕೊಂಡು ಬಂದರು. ಇವರು ಪರಿಚಯ ಮಾಡಿದ್ರು ಎಂಬ ವಾದ-ವಿವಾದ ಕೆಲದಿನಗಳ ಹಿಂದೆ ನಡೆದಿತ್ತು. ಈ ಘಟನೆಯ ಬಗ್ಗೆಯೂ ಮಾತನಾಡಿದ ದಾಸ ಕೆಲವರಿಗೆ ಉತ್ತರ ಕೊಟ್ಟಿದ್ದಾರೆ.

ಇನ್ನು ಯುವಕರ ಕುರಿತು ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ''ಯುವಕರು ಹೇಗಿರಬೇಕು, ಜೀವನದಲ್ಲಿ ಯಾವ ರೀತಿಯ ಕಷ್ಟಗಳು ಬರುತ್ತೆ. ಅದನ್ನ ಹೇಗೆ ಎದುರಿಸಬೇಕು ಎಂದು ಖಡಕ್ ಆಗಿ ಮಾತನಾಡಿದ್ದಾರೆ. ಹಾಗಿದ್ರೆ, ಇಳಕಲ್ ನಲ್ಲಿ ದರ್ಶನ್ ಭಾಷಣ ಹೇಗಿತ್ತು? ಮಾತಿನಲ್ಲೇ ಪೆಟ್ಟು ನೀಡಿದ್ದು ಯಾರಿಗೆ? ಮುಂದೆ ಓದಿ.....

ಟೈಮ್ಸ್ ಈಸ್ ಮನಿ

ಟೈಮ್ಸ್ ಈಸ್ ಮನಿ

'ಟೈಮ್ಸ್ ಈಸ್ ಮನಿ, ಸಮಯ ಎನ್ನುವುದು ದುಡ್ಡು ಇದ್ದಹಾಗೆ. ಅದನ್ನ ಹಾಳು ಮಾಡಿಕೊಳ್ಳಬೇಡಿ. ಯಾವತ್ತು ಎರಡು ಕೆಲಸ ಮಾಡೋಕೆ ಹೋಗ್ಬೇಡಿ. ಯಾರಿಗೂ ತಲೆ ಹೊಡಿಬೇಡಿ. ತಲೆ ಹಿಡಿಬೇಡಿ. ಇದನ್ನ ಬಿಟ್ಟು ಬೇರೆ ಏನು ಬೇಕಾದರೂ ಮಾಡಿ ಉದ್ಧಾರ ಆಗ್ತೀರಾ.

ದರ್ಶನ್ ನ ಯಾರೂ ಕರ್ಕೊಂಡು ಬಂದಿಲ್ಲ

ದರ್ಶನ್ ನ ಯಾರೂ ಕರ್ಕೊಂಡು ಬಂದಿಲ್ಲ

ಇದು ನಾನು ಮಾಡಿಕೊಂಡಿರುವ ವೇದಿಕೆ. ಇದು ಯಾರ ಬಿಕ್ಷೆಯೂ ಅಲ್ಲ. ದರ್ಶನ್ ನ ನಾನು ಮಾಡದೇ, ದರ್ಶನ್ ನ ನಾನು ಕರ್ಕೊಂಡು ಬಂದೆ ಅಂತ ಹೇಳೋ ಅಧಿಕಾರ ನಾನು ಯಾರಿಗೂ ಕೊಟ್ಟಿಲ್ಲ.

ನನ್ನ ಕಷ್ಟದ ಪರಿಶ್ರಮ ಇದು

ನನ್ನ ಕಷ್ಟದ ಪರಿಶ್ರಮ ಇದು

250 ರೂಪಾಯಿ ಇಂದ ಹಿಡಿದು ಕೋಟಿ ರೂಪಾಯಿವರೆಗೂ ಬರೋದಕ್ಕೆ ನಾನು ಪಟ್ಟ ಶ್ರಮ ನನಗೆ ಮಾತ್ರ ಗೊತ್ತು. ಅದನ್ನ ನೀವು ಮಾಡಿ. ಜೀವನದಲ್ಲಿ ಅಳವಡಿಸಿಕೊಳ್ಳಿ. ಒಂದು ಧ್ಯೇಯ ಇಟ್ಟುಕೊಳ್ಳಿ. ಎರಡು ದೋಣೆ ಮೇಲೆ ಕಾಲಿಡೋಕೆ ಹೋಗ್ಬೇಡಿ.

ಯುವಕರು ಎದ್ದೇಳಿ

ಯುವಕರು ಎದ್ದೇಳಿ

ಗುರಿಯನ್ನ ಅಲ್ಲೇಲ್ಲೋ ಇಡಬೇಕಂತೆ. ಅಲ್ಲಿವರೆಗೂ ಹೋಗ್ತೀನಿ ಅಂತ ಅನ್ಕೊಬೇಕು. ಅದೇ ಎಷ್ಟೇ ಕಷ್ಟ ಇದ್ರು ಹೋಗೋಣ, ಆದ್ರೆ, ನಮ್ಮ ಶ್ರಮದಲ್ಲಿ ಹೋಗೋಣ. ಆದ್ದರಿಂದ ಎಲ್ಲ ಯುವಕರಿಗೆ ಹೇಳೋದು, ಎದ್ದೇಳಿ, ಎಚ್ಚೆತ್ತುಕೊಳ್ಳಿ. ಜೀವನದಲ್ಲಿ ತುಂಬ ಸಾಧನೆ ಮಾಡೋದು ಇದೆ. ಆ ಸಾಧನೆನ ನಿಮ್ಮದು ಮಾಡ್ಕೊಳ್ಳಿ.

ಇದನ್ನ ಅಳವಡಿಸಿಕೊಳ್ಳಿ

ಇದನ್ನ ಅಳವಡಿಸಿಕೊಳ್ಳಿ

10 ರೂಪಾಯಿ ದುಡಿಯೋಣ. ಅದರಲ್ಲಿ ನಾವು ಬದುಕಬೇಕು. 2 ರೂಪಾಯಿ ದಾನ ಮಾಡಿ ಸಾಕು. ಇದನ್ನ ಅಳವಡಿಸಿಕೊಳ್ಳಿ. ನಮ್ಮಂತ ಕಲಾವಿದರನ್ನ ಬೆಳಸಿ. ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳನ್ನ ನೋಡಿ, ಪ್ರೋತ್ಸಾಹಿಸಿ.

More from Filmibeat

English summary
Challenging star darshan speech in ilkal. Darshan, Dhananjaya and Yashas Surya was attend National Youth Festival held in Bagalkot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X