For Quick Alerts
  ALLOW NOTIFICATIONS  
  For Daily Alerts

  ಪೋಲ್ಯಾಂಡ್, ಥೈಲ್ಯಾಂಡ್ ನಂತರ ದುಬೈ ಫ್ಲೈಟ್ ಏರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

  |

  ನಟ ದರ್ಶನ್ ಮತ್ತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕೆಲ ದಿನಗಳ ಹಿಂದೆ 'ಕ್ರಾಂತಿ' ಸಿನಿಮಾ ಚಿತ್ರೀಕರಣಕ್ಕಾಗಿ ದೂರದ ಪೋಲ್ಯಾಂಡ್‌ಗೆ ಹೋಗಿ ಬಂದಿದ್ದರು. ಅಲ್ಲಿ 2 ಸಾಂಗ್ ಹಾಗೂ ಒಂದಷ್ಟು ಸನ್ನಿವೇಶಗಳ ಚಿತ್ರೀಕರಣ ನಡೆಸಲಾಗಿತ್ತು. ಸೈಮಾ ಅವಾರ್ಡ್ಸ್ ಕಾರ್ಯಕ್ರಮದ ನಂತರ ಸ್ನೇಹಿತರ ಜೊತೆ ಥೈಲ್ಯಾಂಡ್‌ ಪ್ರವಾಸಕ್ಕೆ ಹೋಗಿದ್ದರು. ಅದಕ್ಕೆ ಸಂಬಂಧಿಸಿದ ಒಂದಷ್ಟು ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ನಟ ದರ್ಶನ್ ದುಬೈಗೆ ಹೊರಟಿದ್ದಾರೆ.

  'ಕ್ರಾಂತಿ' ಹಾಗೂ 'D56' ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸ್ತಿದ್ದಾರೆ. 'ಕ್ರಾಂತಿ' ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ನವೆಂಬರ್ ಕೊನೆ ವಾರದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ ನಿರ್ಮಾಣ ಮಾಡ್ತಿದ್ದಾರೆ. ಮತ್ತೊಂದ್ಕಡೆ ತರುಣ್ ಸುಧೀರ್ ನಿರ್ದೇಶನದ 'D56' ಚಿತ್ರದ ಮೊದಲ ಶೆಡ್ಯೂಲ್ ಕಂಪ್ಲೀಟ್ ಆಗಿದೆ. ರಾಕ್‌ಲೈನ್‌ ಸ್ಟುಡಿಯೋದಲ್ಲಿಯೇ ನಟ ದರ್ಶನ್ ಹಾಗೂ ನಟಿ ರಾಧನಾ ನಟನೆಯ ಒಂದಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ಚಿತ್ರದ ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ರಾಕ್‌ಲೈನ್‌ ವೆಂಕಟೇಶ್ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಚಿತ್ರದಲ್ಲಿ ದರ್ಶನ್‌ನ ಹೊಸ ಲುಕ್‌ನಲ್ಲಿ ತೋರಿಸುವ ಪ್ರಯತ್ನ ನಡೀತಿದೆ.

  ಫೇಕ್.. ಫೇಕ್.. ಬರೀ ಫೇಕ್.. ಬೇಸರಗೊಂಡು ಹಾವಳಿ ಇಟ್ಟ ಫ್ಯಾನ್ಸ್: 'ಕ್ರಾಂತಿ' ಚಿತ್ರತಂಡಕ್ಕೆ ಹೊಸ ತಲೆನೋವು?ಫೇಕ್.. ಫೇಕ್.. ಬರೀ ಫೇಕ್.. ಬೇಸರಗೊಂಡು ಹಾವಳಿ ಇಟ್ಟ ಫ್ಯಾನ್ಸ್: 'ಕ್ರಾಂತಿ' ಚಿತ್ರತಂಡಕ್ಕೆ ಹೊಸ ತಲೆನೋವು?

  ದರ್ಶನ್ ದುಬೈಗೆ ಹೊರಡಲು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು "ಕ್ಷೇಮವಾಗಿ ಹೋಗಿ ಬನ್ನಿ ಬಾಸ್" ಎಂದು ಹಾರೈಸಿದ್ದಾರೆ. ಇನ್ನು ಕೆಲವರು ದರ್ಶನ್ ದುಬೈ ಪ್ರವಾಸಕ್ಕೆ ಕಾರಣ ಏನು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡ್ತಿದ್ದಾರೆ. ಕೆಲವರು 'ಕ್ರಾಂತಿ' ಸಿನಿಮಾ ಚಿತ್ರೀಕರಣಕ್ಕಾಗಿ ದರ್ಶನ್ ಗಲ್ಫ್‌ ದೇಶಕ್ಕೆ ಹೋಗಿದ್ದಾರೆ ಎನ್ನುತ್ತಿದ್ದಾರೆ. ಒಂದು ಸಾಂಗ್ ಶೂಟ್ ಬಾಕಿಯಿದ್ದು, ಅದಕ್ಕಾಗಿ ಈ ಪ್ರವಾಸ ಎನ್ನುತ್ತಿದ್ದಾರೆ. ದರ್ಶನ್ ಜೊತೆ ಅವರ ಆಪ್ತ ಎಸ್. ಸಚ್ಚಿದಾನಂದ ಕೂಡ ಫ್ಲೈಟ್ ಏರಿದ್ದಾರೆ.

  Challenging Star Darshan Spotted in at Airport Flying to Dubai

  ದರ್ಶನ್ ನಟನೆಯ 57ನೇ ಚಿತ್ರವನ್ನು ಎಸ್. ಸಚ್ಚಿದಾನಂದ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಚರ್ಚೆ ನಡೆಸಲು ದುಬೈಗೆ ಹೋಗಿದ್ದಾರೆ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ದರ್ಶನ್ ದುಬೈ ಪ್ರವಾಸದ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಮತ್ತೊಂದ್ಕಡೆ 'ಕ್ರಾಂತಿ' ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರತಂಡದ ಬಳಿ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಗ್ಗೆ ಸರ್‌ಪ್ರೈಸ್ ನ್ಯೂಸ್ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ನವೆಂಬರ್ ಕೊನೆ ವಾರದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

  English summary
  Challenging Star Darshan Spotted in at Airport Flying to Dubai. Kranti is being directed by V Harikrishna, which makes it his second collaboration with Darshan after Yajamana. The film features Rachita Ram as the leading lady.
  Friday, October 7, 2022, 9:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X