For Quick Alerts
  ALLOW NOTIFICATIONS  
  For Daily Alerts

  ಸದ್ದಿಲ್ಲದೇ ಫಾರಿನ್ ಫ್ಲೈಟ್ ಏರಿದ ದರ್ಶನ್: ಎಲ್ಲಿಗೆ ಪಯಣ.. ಏನ್ ಸಮಾಚಾರ?

  |

  ಮೊನ್ನೆಯಷ್ಟೆ(ಸೆಪ್ಟೆಂಬರ್ 10) ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸದ್ದಿಲ್ಲದೇ ಫಾರಿನ್ ಫ್ಲೈಟ್ ಏರಿದ್ದಾರೆ. ದರ್ಶನ್ ಏರ್‌ಪೋರ್ಟ್‌ ಒಳಗೆ ಹೋಗಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಇತ್ತೀಚೆಗೆ 'ಕ್ರಾಂತಿ' ಸಿನಿಮಾ ಚಿತ್ರೀಕರಣಕ್ಕಾಗಿ ಪೋಲೆಂಡ್‌ಗೆ ಹೋಗಿ ಬಂದ್ದಿದ್ದ ದಚ್ಚು ಈ ಬಾರಿ ಥೈಲ್ಯಾಂಡ್‌ಗೆ ಹೋಗಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ.

  'ಕ್ರಾಂತಿ' ಸಿನಿಮಾ ಶೂಟಿಂಗ್ ಮುಗಿಸಿರುವ ದರ್ಶನ್ ಸದ್ಯ 'D56' ಚಿತ್ರದಲ್ಲಿ ನಟಿಸ್ತಿದ್ದಾರೆ. ಈಗಾಗಲೇ ರಾಕ್‌ಲೈನ್‌ ಸ್ಟುಡಿಯೋದಲ್ಲಿ ಒಂದು ಶೆಡ್ಯೂಲ್ ಶೂಟಿಂಗ್ ಸಹ ಮುಗಿದಿದೆ. ದರ್ಶನ್‌ ಜೊತೆಗೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಫಸ್ಟ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರು. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ 'D56' ಚಿತ್ರಕ್ಕೂ ಕೆಲಸ ಮಾಡ್ತಿದೆ.

  SIIMA: ರಾಬರ್ಟ್‌ಗೆ ಬೆಸ್ಟ್ ನಿರ್ದೇಶಕ ಪ್ರಶಸ್ತಿ ಗೆದ್ದು ತರುಣ್ ಆಡಿದ ಮಾತು ಕೇಳಿ ಕಾಲರ್ ಎಗರಿಸಿದ ಡಿ ಫ್ಯಾನ್ಸ್!SIIMA: ರಾಬರ್ಟ್‌ಗೆ ಬೆಸ್ಟ್ ನಿರ್ದೇಶಕ ಪ್ರಶಸ್ತಿ ಗೆದ್ದು ತರುಣ್ ಆಡಿದ ಮಾತು ಕೇಳಿ ಕಾಲರ್ ಎಗರಿಸಿದ ಡಿ ಫ್ಯಾನ್ಸ್!

  ನಟ ದರ್ಶನ್ ಯಾವುದೇ ಸಿನಿಮಾ ಶೂಟಿಂಗ್‌ಗಾಗಿ ಥೈಲ್ಯಾಂಡ್‌ಗೆ ಹೋಗಿಲ್ಲ. 'D56' ಚಿತ್ರದ ಒಂದು ಶೆಡ್ಯೂಲ್ ಮುಗಿಸಿ ಬಿಡುವು ಮಾಡಿಕೊಂಡು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ(ಸೆಪ್ಟೆಂಬರ್ 11) ಸಂಜೆ ಸ್ನೇಹಿತರ ಜೊತೆ ಈ ಬಾರಿ ದರ್ಶನ್ ಫಾರಿನ್ ಫ್ಲೈಟ್ ಏರಿದ್ದಾರೆ. ಈ ಹಿಂದೆ ದರ್ಶನ್ ಸ್ನೇಹಿತರ ಜೊತೆ ವೈಲ್ಡ್‌ ಲೈಫ್‌ ಫೋಟೊಗ್ರಫಿಗಾಗಿ ಕೀನ್ಯಾ ಪ್ರವಾಸ ಕೈಗೊಂಡಿದ್ದರು. ಅಷ್ಟೇ ಅಲ್ಲ ಉತ್ತರ ಭಾರತದಲ್ಲೂ ಸುತ್ತಾಡಿ ಬಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಸೈಮಾ ಅವಾರ್ಡ್ಸ್ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಬಾರ್ ಜೋರಾಗಿತ್ತು. ಅಭಿಷೇಕ್ ಅಂಬರೀಶ್ ಹಾಗೂ ಸ್ನೇಹಿತರ ಜೊತೆ ದರ್ಶನ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. 'ರಾಬರ್ಟ್' ಚಿತ್ರಕ್ಕಾಗಿ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಸುಧಾಕರ್ ಹಾಗೂ ಸಂಗೀತ ನಿರ್ದೇಶನಕ್ಕಾಗಿ ಅರ್ಜುನ್ ಜನ್ಯಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇನ್ನು ಸಮಾರಂಭದಲ್ಲಿ ಮುಂದಿನ ಸಾಲಿನಲ್ಲೇ ದರ್ಶನ್ ಕೂತಿದ್ದರು. ಶಿವಣ್ಣನನ್ನು ಕಂಡ ಒಡನೆ ಸಂಭ್ರಮದಿಂದ ಕೆನ್ನೆ ಗಿಂಡಿ ಮಾತನಾಡಿಸಿದ್ದಾರೆ. ಆ ವಿಡಿಯೋ ವೈರಲ್ ಸಖತ್ ಆಗಿದೆ.

  ದರ್ಶನ್ ಕಾಲಿಗೆ ಬಿದ್ದ ಧನ್ವೀರ್: ಹೇಗಿತ್ತು 'ಬಜಾರ್' ಹುಡ್ಗನ ಬರ್ತ್‌ಡೇ ಸೆಲೆಬ್ರೇಷನ್?ದರ್ಶನ್ ಕಾಲಿಗೆ ಬಿದ್ದ ಧನ್ವೀರ್: ಹೇಗಿತ್ತು 'ಬಜಾರ್' ಹುಡ್ಗನ ಬರ್ತ್‌ಡೇ ಸೆಲೆಬ್ರೇಷನ್?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ'. ವಿ. ಹರಿಕೃಷ್ಣ ನಿರ್ದೇಶದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಭರದಿಂದ ಸಾಗಿದೆ. ಚಿತ್ರದಲ್ಲಿ ದರ್ಶನ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಸೇರಿದಂತೆ ಘಟಾನುಗಟಿ ಕಲಾವಿದರು ನಟಿಸಿದ್ದಾರೆ. ಸ್ವತಃ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಕರುಣಾಕರ್ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ 'ಕ್ರಾಂತಿ' ಸಿನಿಮಾ ನಿರ್ಮಿಸಿದ್ದಾರೆ.

  Challenging Star Darshan Spotted in at Airport Flying to Thailand

  'ಕ್ರಾಂತಿ' ಹೊಸ ಪೋಸ್ಟರ್ ರಿಲೀಸ್: ಜೂಮ್ ಮಾಡಿ ನೋಡಿದವರು ಬೇಸರಗೊಂಡಿದ್ಯಾಕೆ?'ಕ್ರಾಂತಿ' ಹೊಸ ಪೋಸ್ಟರ್ ರಿಲೀಸ್: ಜೂಮ್ ಮಾಡಿ ನೋಡಿದವರು ಬೇಸರಗೊಂಡಿದ್ಯಾಕೆ?

  English summary
  Challenging Star Darshan Spotted in at Airport Flying to Thailand. Darshan starrer D56 directed by Tharun Kishore Sudhir, and produced by Rockline Venkatesh, Team completed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X