For Quick Alerts
  ALLOW NOTIFICATIONS  
  For Daily Alerts

  ಇನ್ನು ಮುಗಿದಿಲ್ಲ ಶೂಟಿಂಗ್: ರಾಜ್ಯೋತ್ಸವಕ್ಕೆ 'ಕ್ರಾಂತಿ' ಅನುಮಾನ?

  |

  ದರ್ಶನ್ ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರೋ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಕ್ರಾಂತಿ'. ಈವರೆಗೆ ಚಿತ್ರತಂಡ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲ ದಿನಗಳ ಹಿಂದೆ ನಟ ದರ್ಶನ್ ಚಿತ್ರಕ್ಕಾಗಿ ಡಬ್ಬಿಂಗ್ ಮಾಡಿದ್ದರು. 'D56' ಚಿತ್ರಕ್ಕೂ ಚಾಲನೆ ಕೊಟ್ಟಿದ್ದರು. ಇದನ್ನು ನೋಡಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಇನ್ನು ಸಿನಿಮಾ ಚಿತ್ರೀಕರಣ ಬಾಕಿಯಿದೆ ಎನ್ನುವ ಮಾಹಿತಿ ಸಿಗುತ್ತಿದೆ.

  'ಕ್ರಾಂತಿ' ಚಿತ್ರದಲ್ಲಿ ಅಕ್ಷರ 'ಕ್ರಾಂತಿ'ಯ ಬಗ್ಗೆ ಚರ್ಚಿಸಲಾಗ್ತಿದೆ. ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ನಾಯಕ ಹೋರಾಟ ಮಾಡುವ ಕಥೆ ಇದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಚಿತ್ರವನ್ನು ರಾಜ್ಯೋತ್ಸವದ ಸಂಭ್ರಮದಲ್ಲಿ ಬಿಡುಗಡೆ ಮಾಡುವ ಲೆಕ್ಕಾಚಾರ ನಡೀತಿತ್ತು. ರಿಲೀಸ್ ಡೇಟ್ ಅನೌನ್ಸ್ ಆಗದೇ ಇದ್ದರೂ ಕಳೆದ ಕೆಲ ದಿನಗಳಿಂದ ಅಭಿಮಾನಿಗಳು 'ಕ್ರಾಂತಿ' ಸಿನಿಮಾ ಪ್ರಚಾರ ಮಾಡುತ್ತಲೇ ಬರ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಸೆಟ್ ಹಾಕಿ ಸ್ಪೆಷಲ್ ಸಾಂಗ್ ಶೂಟ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು.

  Exclusive: ಉಮಾಪತಿ 'ಕ್ರಾಂತಿ' ಪ್ರಮೋಷನ್: Exclusive: ಉಮಾಪತಿ 'ಕ್ರಾಂತಿ' ಪ್ರಮೋಷನ್: "ನಮ್ಮದು ಸಿನಿಮಾ ಜಾತಿ.. ಇಲ್ಲಿ ಶಾಶ್ವತ ಶತ್ರುಗಳು ಯಾರು ಇಲ್ಲ"

  ನಿರ್ಮಾಪಕಿ ಶೈಲಜಾ ನಾಗ್ ಈ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿದ್ದು, ಶೆಡ್ಯೂಲ್ ಪ್ರಕಾರವೇ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ. ಆದರೆ ಎಲ್ಲಿ, ಏನ್ ಶೂಟಿಂಗ್ ಎನ್ನುವುದನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ವಿ. ಹರಿಕೃಷ್ಣ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಅಭಿಮಾನಿಗಳಿಗೆ ಇಷ್ಟವಂತೆ 'ಕ್ರಾಂತಿ' ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. ಸ್ವತಃ ಅವರೇ ಮ್ಯೂಸಿಕ್ ಕಂಪೋಸ್ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ.

  ಶೈಲಜಾ ನಾಗ್‌ ಹಾಗೂ ಬಿ. ಸುರೇಶ ನಿರ್ಮಾಣ ಮಾಡುತ್ತಿರುವ 'ಕ್ರಾಂತಿ' ಚಿತ್ರದ ಮುಖ್ಯಭೂಮಿಕೆಯಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಬಣ್ಣ ಹಚ್ಚಿದ್ದಾರೆ. ಶಶಿಧರ ಅಡಪ ಕಲಾ ನಿರ್ದೇಶನ, ಕರುಣಾಕರ ಛಾಯಾಗ್ರಹಣ, ರಾಮ್‌-ಲಕ್ಷ್ಮಣ್ ಹಾಗೂ ವಿನೋದ್ ಮಾಸ್ಟರ್‌ ಸಾಹಸ ಸಂಯೋಜನೆ 'ಕ್ರಾಂತಿ' ಚಿತ್ರಕ್ಕಿದೆ. ಸೂಪರ್ ಹಿಟ್ 'ಯಜಮಾನ' ಕಾಂಬಿನೇಷನ್‌ನಲ್ಲೇ ಈ ಸಿನಿಮಾ ಕೂಡ ಸಿದ್ಧವಾಗ್ತಿದೆ.

  Challenging Star Darshan Starrer kranti final schedule kickstarts soon

  ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶವನ್ನು ಹೊತ್ತು 'ಕ್ರಾಂತಿ' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈವರೆಗೆ ಚಿತ್ರತಂಡ ಸಿನಿಮಾ ಬಗ್ಗೆ ಹೆಚ್ಚೇನು ಮಾತನಾಡಿಲ್ಲ. ಚಿತ್ರದ ಕೆಲಸಗಳೆಲ್ಲಾ ಮುಗಿದ ಮೇಲೆ ಪ್ರಚಾರ ಪ್ರಾರಂಭಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಟ್ರೈಲರ್, ಸಾಂಗ್ಸ್‌ ಅಂತ ಸಾಕಷ್ಟು ಸರ್‌ಪ್ರೈಸ್‌ಗಳು ಅಭಿಮಾನಿಗಳಿಗಾಗಿ ಕಾಯುತ್ತಿದೆ. ರಾಜ್ಯೋತ್ಸವಕ್ಕೆ ಇನ್ನು 40 ದಿನಗಳು ಬಾಕಿಯಿದೆ. ಅಷ್ಟರಲ್ಲಿ ಶೂಟಿಂಗ್ ಮುಗಿಸಿ, ಪ್ರಮೋಷನ್ ಮಾಡಿ ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯಾನಾ ಅನ್ನುವುದನ್ನು ಕಾದು ನೋಡಬೇಕಿದೆ. ನವೆಂಬರ್ ಕೊನೆ ವಾರದಲ್ಲಿ ಸಿನಿಮಾ ರಿಲೀಸ್ ಆದರೂ ಅಚ್ಚರಿ ಪಡ್ಬೇಕಿಲ್ಲ.

  English summary
  Challenging Star Darshan Starrer kranti final schedule kickstarts soon
  Friday, September 23, 2022, 15:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X