twitter
    For Quick Alerts
    ALLOW NOTIFICATIONS  
    For Daily Alerts

    'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದ್ದು ಹೇಗೆ? ಥಿಯೇಟರ್‌ನಿಂದ ಎಷ್ಟು? ಟಿವಿ ರೈಟ್ಸ್‌ನಿಂದ ಎಷ್ಟು?

    |

    ಸೂಪರ್‌ಸ್ಟಾರ್ ಸಿನಿಮಾ ಮೊದಲ ವಾರ ಚಿಂತೆ ಮಾಡೋ ಹಾಗೇ ಇಲ್ಲ. ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಎರಡನೇ ವಾರದಿಂದ ಸಿನಿಮಾ ಕಲೆಕ್ಷನ್ ಹಾಗೆ ಉಳಿದುಕೊಂಡ್ರೆ ಬಾಕ್ಸಾಫೀಸ್‌ ಸಕ್ಸಸ್ ಅಂತ ಸಾಬೀತಾಗುತ್ತೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಕೂಡ ಮೊದಲ ಬಾರಿ ಡಿಸೆಂಟ್ ಕಲೆಕ್ಷನ್ ಮಾಡಿದೆ. ಶುಕ್ರವಾರ (ಜನವರಿ 27) ಒಂದು ದಿನ ಬಿಟ್ಟು ಉಳಿದು ಮೂರು ದಿನಗಳಲ್ಲಿ ಕಲೆಕ್ಷನ್ ಅದ್ಭುತ ಅಂತ ವಿತರಕರು ಹೇಳುತ್ತಿದ್ದಾರೆ.

    ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್

    ಈಗಾಗಲೇ 'ಕ್ರಾಂತಿ' ಸಿನಿಮಾದ ನಾಲ್ಕು ದಿನಗಳ ಕಲೆಕ್ಷನ್ ಹೊರಬಿದ್ದಿದೆ. ನಾಲ್ಕೇ ದಿನಕ್ಕೆ 100 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲೂ ಕೂಡ 'ಕ್ರಾಂತಿ' 100 ಕೋಟಿ ರೂ. ಕ್ಲಬ್ ಸೇರಿದ್ದು ಟ್ರೆಂಡಿಂಗ್ ಆಗುತ್ತಿದೆ.

    'ಕ್ರಾಂತಿ' ₹100 ಕೋಟಿ ಸಂಪಾದನೆ

    'ಕ್ರಾಂತಿ' ₹100 ಕೋಟಿ ಸಂಪಾದನೆ

    ಗಣರಾಜ್ಯೋತ್ಸವದಂದು (ಜನವರಿ 26) ತೆರೆಕಂಡಿದ್ದ 'ಕ್ರಾಂತಿ' ಸಿನಿಮಾ ನಾಲ್ಕು ದಿನ ಕಲೆಕ್ಷನ್ ಚೆನ್ನಾಗಿದೆ. ವೀಕೆಂಡ್‌ನಲ್ಲಿ ಬಹುತೇಕ ಚಿತ್ರಮಂದಿರಗಳು ತುಂಬಿವೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ದರ್ಶನ್ ಸಿನಿಮಾ 'ಕ್ರಾಂತಿ' ₹100 ಕೋಟಿ ಕ್ಲಬ್ ಸೇರಿದೆ. ಇದರಲ್ಲಿ ಥಿಯೇಟರ್‌ನಿಂದ ಬಂದ ಹಣ, ಸ್ಯಾಟಲೈಟ್ ಹಾಗೂ ಓಟಿಟಿಯಿಂದ ಸೇಲ್ ಆದ ಮೊತ್ತ ಸೇರಿದೆ. ಹೀಗಾಗಿ 'ಕ್ರಾಂತಿ' ನಾಲ್ಕು ದಿನಗಳ ಅಂತರದಲ್ಲಿ ₹103.7 ಕೋಟಿ ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ.

    2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?

    ಸ್ಯಾಟಲೈಟ್‌ಗೆ ಸೇಲ್ ಆದ ಮೊತ್ತವೆಷ್ಟು?

    ಸ್ಯಾಟಲೈಟ್‌ಗೆ ಸೇಲ್ ಆದ ಮೊತ್ತವೆಷ್ಟು?

    'ಕ್ರಾಂತಿ' ಸ್ಯಾಟಲೈಟ್ ಹಕ್ಕುಗಳು ಭಾರಿ ಮೊತ್ತಕ್ಕೆ ಸೇಲ್ ಆಗಿದೆ. 'ಕ್ರಾಂತಿ' ಪ್ರಸಾರದ ಹಕ್ಕು ಉದಯ ಟಿವಿಗೆ ಸೇಲ್ ಆಗಿದೆ. ಮೂಲಗಳ ಪ್ರಕಾರ, ಉದಯ ಟಿವಿಗೆ 13 ಕೋಟಿ ರೂ. ಸೇಲ್ ಆಗಿದೆ ಎನ್ನಲಾಗಿದೆ. ಇನ್ನೊಂದು ಕಡೆ ಒಟಿಟಿ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಇವೆಲ್ಲವನ್ನೂ ಸೇರಿ 100 ಕೋಟಿ ರೂ. ಸಂಪಾದನೆ ಮಾಡಿದೆ ಎಂದು ಹೇಳಲಾಗುತ್ತಿದೆ.

    ಥಿಯೇಟರ್‌ನಿಂದ 'ಕ್ರಾಂತಿ' ಸಿನಿಮಾ ಗಳಿಸಿದ್ದೆಷ್ಟು?

    ಥಿಯೇಟರ್‌ನಿಂದ 'ಕ್ರಾಂತಿ' ಸಿನಿಮಾ ಗಳಿಸಿದ್ದೆಷ್ಟು?

    ಕನ್ನಡ ಸಿನಿಮಾದ ಮತ್ತೊಂದು ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ. ನಾಲ್ಕು ದಿನಗಳಲ್ಲಿ 'ಕ್ರಾಂತಿ' ಸಿನಿಮಾ ಚಿತ್ರಮಂದಿರದಿಂದಲೇ ದೊಡ್ಡ ಮೊತ್ತ ಕಲೆಹಾಕಿದೆ. ಮೂಲಗಳ ಪ್ರಕಾರ, ನಾಲ್ಕು ದಿನಗಳಲ್ಲಿ ಕ್ರಾಂತಿ ಸಿನಿಮಾ ಸುಮಾರು 83 ಕೋಟಿ ರೂ.ಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಕಲೆಕ್ಷನ್ ಹೇಗಿರುತ್ತೆ? ಅನ್ನೋದು ಹೊಸ ದಾಖಲೆ ಬರೆಯುತ್ತಾ? ಅನ್ನೋದನ್ನು ನಿರ್ಧರಿಸಲಿದೆ.

    ದರ್ಶನ್ 3ನೇ ಸಿನಿಮಾ ₹100 ಕೋಟಿಗೆ ಎಂಟ್ರಿ

    ದರ್ಶನ್ 3ನೇ ಸಿನಿಮಾ ₹100 ಕೋಟಿಗೆ ಎಂಟ್ರಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ₹100 ಕೋಟಿ ದುಡಿದಿದೆ. ಇದು ₹100 ಕೋಟಿ ಕ್ಲಬ್ ಸೇರಿದ ದರ್ಶನ್ 4ನೇ ಸಿನಿಮಾ. 2019ರಲ್ಲಿ ತೆರೆಕಂಡಿದ್ದ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ' 100 ಕೋಟಿ ರೂ. ಕ್ಲಬ್ ಸೇರಿತ್ತು. ಹಾಗೇ 2021ರಲ್ಲಿ ತೆರೆಕಂಡಿದ್ದ 'ರಾಬರ್ಟ್' 100 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿತ್ತು. ಈಗ 'ಕ್ರಾಂತಿ' ಕೂಡ ಅದೇ ದಾರಿ ಹಿಡಿದಿದೆ.

    English summary
    Challenging Star Darshan Starrer Kranti Kannada Movie Reached 100cr Club,Know More.
    Monday, January 30, 2023, 11:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X