'ಕ್ರಾಂತಿ' ಟ್ರೈಲರ್ ಲಾಂಚ್ ಈವೆಂಟ್: ದರ್ಶನ್ ಜೊತೆ ವೇದಿಕೆ ಮೇಲೆ ನಿಲ್ಲೋದ್ಯಾರು?

ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಕ್ರಾಂತಿ' ಸಿನಿಮಾ ಟ್ರೈಲರ್‌ ಲಾಂಚ್‌ಗೆ ಇನ್ನೊಂದೇ ದಿನ ಬಾಕಿ ಇರೋದು. ಡಿ ಬಾಸ್ ದರ್ಶನ್ ಫ್ಯಾನ್ಸ್ ದೊಡ್ಡಮಟ್ಟದಲ್ಲಿ ಟ್ರೈಲರ್‌ನ ಹಿಟ್ ಮಾಡೋಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಟ್ರೈಲರ್ ಲಾಂಚ್ ಈವೆಂಟ್, ಗೆಸ್ಟ್, ಸಮಯ ಎಲ್ಲದರ ಮಾಹಿತಿ ಈಗ ಲಭ್ಯವಾಗಿದೆ.

ಈಗಾಗಲೇ 'ಕ್ರಾಂತಿ' ಚಿತ್ರದ 3 ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಕಳೆದ ವರ್ಷದ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಟೀಸರ್ ನಿರಾಸೆ ಮೂಡಿಸಿತ್ತು. ಆದರೆ ಟ್ರೈಲರ್ ಎಲ್ಲಾ ವಿಧದಲ್ಲೂ ಅದ್ಭುತವಾಗಿರುತ್ತದೆ ಎನ್ನುವ ನಿರೀಕ್ಷೆ ಇದೆ. ಹೇಳಿ ಕೇಳಿ 'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಆಗಿದೆ. ಒಂದೊಳ್ಳೆ ಮೆಸೇಜ್ ಜೊತೆಗೆ ವಿ. ಹರಿಕೃಷ್ಣ ಈ ಕಮರ್ಷಿಯಲ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಕಳೆದೊಂದು ವಾರದಿಂದ 'ಕ್ರಾಂತಿ' ಟ್ರೈಲರ್‌ ಲಾಂಚ್‌ಗೆ ಅಭಿಮಾನಿಗಳ ಕೌಂಟ್‌ಡೌನ್ ಸ್ಟಾರ್ಟ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ 'ಕ್ರಾಂತಿ' ಖದರ್ ಜೋರಾಗಿದೆ. ಟ್ರೈಲರ್‌ನಿಂದ ಚಿತ್ರದ ಅಸಲಿ ಪ್ರಮೋಷನ್ ಶುರುವಾಗಲಿದೆ.

ಒರಾಯನ್ ಮಾಲ್‌ನಲ್ಲಿ ಟ್ರೈಲರ್ ಲಾಂಚ್

ಒರಾಯನ್ ಮಾಲ್‌ನಲ್ಲಿ ಟ್ರೈಲರ್ ಲಾಂಚ್

ನಗರದ ಒರಾಯನ್ ಮಾಲ್‌ನಲ್ಲಿ ನಾಳೆ (ಜನವರಿ 7) ಸಂಜೆ ಟ್ರೈಲರ್ ಲಾಂಚ್ ಕಾರ್ಯಕ್ರಮ ಆಯೋಜಿಸಲಾಗಿದೆ. ಹುಬ್ಬಳ್ಳಿಯಲ್ಲಿ 'ಪುಷ್ಪವತಿ' ಸಾಂಗ್ ರಿಲೀಸ್ ಸುದ್ದಿಗೋಷ್ಠಿ ವೇಳೆಯೇ ಬೆಂಗಳೂರಿನಲ್ಲಿ ಟ್ರೈಲರ್ ರಿಲೀಸ್ ಮಾಡುವ ಬಗ್ಗೆ ದರ್ಶನ್ ಮಾತನಾಡಿದ್ದರು. ಅದಕ್ಕೆ ಕಾರಣವನ್ನು ಕೂಡ ಕೊಟ್ಟಿದ್ದರು. ಸಂಜೆ 6.45ಕ್ಕೆ ಈವೆಂಟ್ ಶುರುವಾಗಲಿದೆ. ದೃಶ್ಯ ಮಾಧ್ಯಮಗಳು ದರ್ಶನ್ ಕುರಿತು ಸುದ್ದಿ ಮಾಡುತ್ತಿಲ್ಲ. ಇನ್ನುಳಿದಂತೆ ಡಿಜಿಟಲ್ ಮಾಧ್ಯಮ, ಯೂಟ್ಯೂಬ್ ಮಾಧ್ಯಮದವರು ಭಾಗಿ ಆಗಲಿದ್ದಾರೆ. ದರ್ಶನ್ ಫ್ಯಾನ್ಸ್‌ 'ಕ್ರಾಂತಿ' ಟ್ರೈಲರ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಈವೆಂಟ್‌ಗೆ ಬರುವ ಅತಿಥಿಗಳು

ಈವೆಂಟ್‌ಗೆ ಬರುವ ಅತಿಥಿಗಳು

'ಕ್ರಾಂತಿ' ಚಿತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಸುಮಲತಾ ಅಂಬರೀಶ್ ಸೇರಿದಂತೆ ಅನುಭವಿ ಕಲಾವಿದರು ನಟಿಸಿದ್ದಾರೆ. ಮೈಸೂರು, ಹೊಸಪೇಟೆ, ಹುಬ್ಬಳ್ಳಿಯಲ್ಲಿ ನಡೆದ ಸಾಂಗ್ ರಿಲೀಸ್ ವೇಳೆ ದರ್ಶನ್, ರಚಿತಾ ರಾಮ್ ಮಾತ್ರ ಭಾಗಿ ಆಗಿದ್ದರು. ಆದರೆ ಟ್ರೈಲರ್ ಲಾಂಚ್ ಈವೆಂಟ್‌ಗೆ ಇಡೀ ಚಿತ್ರತಂಡ ಭಾಗಿ ಆಗಲಿದೆ. ಎಲ್ಲರಿಗೂ ಬೆಳ್ಳಿ ಪರದೆಯಲ್ಲಿ 'ಕ್ರಾಂತಿ' ಟ್ರೈಲರ್, ಸಾಂಗ್ಸ್ ಪ್ರದರ್ಶನ ಮಾಡಲಾಗುತ್ತದೆ. ಒಂದರ್ಥದಲ್ಲಿ ಕ್ರೇಜಿಸ್ಟಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಜೆ 7.30ರ ಸುಮಾರಿಗೆ ಟ್ರೈಲರ್ ಲಾಂಚ್ ಆಗಲಿದೆ.

ಟ್ರೈಲರ್ ಗೆಲ್ಲಿಸಲು ಫ್ಯಾನ್ಸ್ ಪ್ಲ್ಯಾನ್

ಟ್ರೈಲರ್ ಗೆಲ್ಲಿಸಲು ಫ್ಯಾನ್ಸ್ ಪ್ಲ್ಯಾನ್

ಟ್ರೈಲರ್‌ನ ದೊಡ್ಡಮಟ್ಟದಲ್ಲಿ ನೋಡಿ ಹಿಟ್ ಮಾಡಲು ಅಭಿಮಾನಿಗಳು ಕಸರತ್ತು ನಡೆಸುತ್ತಿದ್ದಾರೆ. 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್, ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟ್ರೈಲರ್‌ಗಳ ಲಿಸ್ಟ್‌ನಲ್ಲಿ 'ಕ್ರಾಂತಿ' ಟ್ರೈಲರ್‌ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡುತ್ತಿದ್ದಾರೆ. ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಟ್ರೈಲರ್ 24 ಗಂಟೆಗಳಲ್ಲಿ ಮೂರುವರೆ ಲಕ್ಷ ಲೈಕ್ಸ್, 80 ಲಕ್ಷ ವೀವ್ಸ್ ಸಾಧಿಸಿತ್ತು. ಅದನ್ನು ಮೀರಿಸಿ ದಾಖಲೆ ಬರೆಯಲು ಫ್ಯಾನ್ಸ್ ಕಾಯುತ್ತಿದ್ದಾರೆ. ವಿ. ಹರಿಕೃಷ್ಣ ಜಬರ್ದಸ್ತ್ ಬಿಜಿಎಂ ಹಿನ್ನಲೆಯಲ್ಲಿ ಕ್ಲಾಸ್, ಮಾಸ್ ಝಲಕ್ ಮಿಕ್ಸ್ ಮಾಡಿ 'ಕ್ರಾಂತಿ' ಟ್ರೈಲರ್ ಕಟ್ ಮಾಡಲಾಗಿದೆ.

'ಕ್ರಾಂತಿ' ಸಾಂಗ್ಸ್ ಆರ್ಭಟ

'ಕ್ರಾಂತಿ' ಸಾಂಗ್ಸ್ ಆರ್ಭಟ

'ಕ್ರಾಂತಿ' ಚಿತ್ರದ 3 ಹಾಡುಗಳನ್ನು ಅಭಿಮಾನಿಗಳ ಸಮ್ಮುಖದಲ್ಲೇ ಮೂರು ಬೇರೆ ಬೇರೆ ಜಿಲ್ಲೆಗಳಲ್ಲಿ ರಿಲೀಸ್ ಮಾಡಲಾಗಿತ್ತು. 3 ಸಾಂಗ್ಸ್ ದರ್ಶನ್ ಫ್ಯಾನ್ಸ್ ಮನಗೆದ್ದಿದೆ. 'ಬೊಂಬೊ ಬೊಂಬೆ' ಹಾಗೂ 'ಪುಷ್ಪವತಿ' 10 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿದವೆ. 'ಧರಣಿ' ಸಾಂಗ್ ವೀವ್ಸ್ 7 ಮಿಲಿಯನ್ ಮೀರಿದೆ. ಜನವರಿ 26ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಅಕ್ಷರ 'ಕ್ರಾಂತಿ'ಯ ಕಥೆಯನ್ನು ಹೇಳಲಾಗ್ತಿದೆ.

More from Filmibeat

English summary
Challenging Star Darshan Starrer Kranti Movie Trailer Launch Event Details. Kranti has been written and directed by V. Harikrishna. Shylaja Nag and B. Suresha of Media House Studio have produced the film. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X