Kranti Trailer Records : ಫ್ಯಾನ್ಸ್ ಟಾರ್ಗೆಟ್ ರೀಚ್ ಆದ್ರಾ? 24 ಗಂಟೆಗಳಲ್ಲಿ ಸಿಕ್ಕಿದ ಲೈಕ್ಸ್, ವೀವ್ಸ್ ಎಷ್ಟು?

'ಕ್ರಾಂತಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ 24 ಗಂಟೆ ಕಳೆದಿದೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಅಭಿಮಾನಿಗಳು ಸೂಪರ್ ಹಿಟ್ ಮಾಡಿದ್ದಾರೆ. ಅಭಿಮಾನಿಗಳು ಟಾರ್ಗೆಟ್ ರೀಚ್ ಆದ್ರಾ? ಯಾವೆಲ್ಲಾ ದಾಖಲೆಗಳು ಧೂಳಿಪಟ ಆಯಿತು ಇನ್ನುವುದರ ಮಾಹಿತಿ ಈಗ ಸಿಕ್ಕಿದೆ.

ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ಕ್ರಾಂತಿ'. ಜನವರಿ 26ಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಲಿದೆ. ರಚಿತಾ ರಾಮ್, ರವಿಚಂದ್ರನ್, ಉಮಾಶ್ರೀ, ಸುಮಲತಾ ಅಂಬರೀಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿ. ಕ್ರಾಂತಿ ರಾಯಣ್ಣ ದರ್ಶನ್ ಮಾವಿನ ತೋಟದ ಕಥೆ ಹೇಳುತ್ತಾ ಟ್ರೈಲರ್ ಶುರುವಾಗುತ್ತದೆ. ಮುಂದೆ ಭರ್ಜರಿ ಆಕ್ಷನ್ ಸೀಕ್ವೆನ್ಸ್, ಡೈಲಾಗ್ಸ್, ಸಾಂಗ್ಸ್ ಝಲಕ್‌ನಿಂದ ಕಿಕ್ ಕೊಡುತ್ತಾ ಸಾಗುತ್ತದೆ. ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದೊಳ್ಳೆ ಸಂದೇಶವನ್ನು 'ಕ್ರಾಂತಿ' ಸಿನಿಮಾ ಹೊತ್ತು ಬರ್ತಿದೆ.

ಕಳೆದೊಂದು ವಾರದಿಂದ 'ಕ್ರಾಂತಿ' ಟ್ರೈಲರ್‌ನ ದೊಡ್ಡಮಟ್ಟದಲ್ಲಿ ಹಿಟ್ ಮಾಡಲು ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದರು. 24 ಗಂಟೆಗಳಲ್ಲಿ ಈ ಹಿಂದಿನ ಕನ್ನಡ ಸಿನಿಮಾಗಳು ನಿರ್ಮಿಸಿದ ದಾಖಲೆ ಮುರಿಯಲು ಪ್ರಯತ್ನಿಸಿದ್ದರು. ಅದರಲ್ಲಿ ಭಾಗಶಃ ಸಕ್ಸಸ್ ಕಂಡಿದ್ದಾರೆ.

24 ಗಂಟೆಗಳಲ್ಲಿ 78 ಲಕ್ಷ ವೀವ್ಸ್

24 ಗಂಟೆಗಳಲ್ಲಿ 78 ಲಕ್ಷ ವೀವ್ಸ್

ನಗರದ ಒರಾಯನ್ ಮಾಲ್‌ನಲ್ಲಿ 'ಕ್ರಾಂತಿ' ಟ್ರೈಲರ್ ಲಾಂಚ್ ಈವೆಂಟ್ ನಡೆದಿತ್ತು. ಇನ್ನು ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. 24 ಗಂಟೆಗಳಲ್ಲಿ 7.8 ಮಿಲಿಯನ್ ವೀವ್ಸ್ ಸಾಧಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳು ಟ್ರೈಲರ್ ಯೂಟ್ಯೂಬ್‌ಗೆ ಅಪ್‌ಲೋಡ್ ಆಗುತ್ತಿದ್ದಂತೆ ನೋಡಲು ಮುಗಿಬಿದ್ದಿದ್ದರು. ನೋಡ ನೋಡುತ್ತಲೇ ಲಕ್ಷ ಲಕ್ಷ ವೀವ್ಸ್ ಸಾಧಿಸುತ್ತಾ ಹೋಯಿತು. 24 ಗಂಟೆಗಳಲ್ಲಿ ಆ ಸಂಖ್ಯೆ 70 ಲಕ್ಷ ದಾಟಿದಿದೆ. ವೀವ್ಸ್ ಲೆಕ್ಕಾಚಾರದಲ್ಲಿ 'ಕ್ರಾಂತಿ' 4ನೇ ಸ್ಥಾನದಲ್ಲಿದೆ.

ಹೆಚ್ಚು ಲೈಕ್ಸ್ ಗಿಟ್ಟಿಸಿದ ಟ್ರೈಲರ್

ಹೆಚ್ಚು ಲೈಕ್ಸ್ ಗಿಟ್ಟಿಸಿದ ಟ್ರೈಲರ್

24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟ್ರೈಲರ್ ಲಿಸ್ಟ್‌ನಲ್ಲಿ 'ಕ್ರಾಂತಿ' 2ನೇ ಸ್ಥಾನದಲ್ಲಿದೆ. 7 ನಿಮಿಷಕ್ಕೆ 50 ಸಾವಿರ, 200 ನಿಮಿಷಕ್ಕೆ 1 ಲಕ್ಷ, 45 ನಿಮಿಷಕ್ಕೆ ಒಂದೂವರೆ ಲಕ್ಷ ಹೀಗೆ ಲೈಕ್ಸ್ ಸಂಖ್ಯೆ ಏರುತ್ತಾ ಹೋಯ್ತು. ಇದೀಗ 3 ಲಕ್ಷದ 94 ಸಾವಿರ ಲೈಕ್ಸ್ ಪಡೆದುಕೊಂಡು 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ KGF- 2 ಸಿನಿಮಾ ಟ್ರೈಲರ್ ಇದೆ. ಆದರೆ ಅದು ಸೀಕ್ವೆಲ್ ಸಿನಿಮಾ ಆಗಿತ್ತು. ಹಾಗಾಗಿ ಕ್ರೇಜ್ ಜಾಸ್ತಿ ಇತ್ತು. ಆದರೆ 'ಕ್ರಾಂತಿ' ಟ್ರೈಲರ್ 2ನೇ ಸ್ಥಾನಕ್ಕೆ ಏರಿರುವುದು ತಮಾಷೆ ಮಾತಲ್ಲ.

ಟಾರ್ಗೆಟ್ ರೀಚ್ ಆದ್ರಾ ಫ್ಯಾನ್ಸ್?

ಟಾರ್ಗೆಟ್ ರೀಚ್ ಆದ್ರಾ ಫ್ಯಾನ್ಸ್?


ರಿಲೀಸ್ ಡೇಟ್ ಅನೌನ್ಸ್‌ ಆದ ದಿನದಿಂದಲೂ 'ಕ್ರಾಂತಿ' ಟ್ರೈಲರ್‌ನ ಹಿಟ್ ಮಾಡಲು ಅಭಿಮಾನಿಗಳು ತಯಾರಿ ನಡೆಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಮಾನಿಗಳನ್ನು ಜಾಗೃತರನ್ನಾಗಿ ಮಾಡುವ ಪ್ರಯತ್ನ ನಡೆದಿತ್ತು. ಇದೀಗ ಟ್ರೈಲರ್ ರಿಲೀಸ್ ಆಗಿ 24 ಗಂಟೆ ಕಳೆದಿದೆ. ಒಂದಷ್ಟು ದಾಖಲೆಗಳು 'ಕ್ರಾಂತಿ' ಸಿನಿಮಾ ಪಾಲಾಗಿದೆ. ಟಾರ್ಗೆಟ್ ರೀಚ್ ಆಗುವುದರಲ್ಲಿ ಒಂದು ರೇಂಜಿಗೆ ಸಕ್ಸಸ್‌ ಕಂಡಿದ್ದಾರೆ. ಅಭಿಮಾನಿಗಳು ತಮ್ಮ ತಾಖತ್ತು ಏನು ಅನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

ಜನವರಿ 26ಕ್ಕೆ ಸಿನಿಮಾ ತೆರೆಗೆ

ಜನವರಿ 26ಕ್ಕೆ ಸಿನಿಮಾ ತೆರೆಗೆ


'ಕ್ರಾಂತಿ' ಹೊಸ ವರ್ಷದಲ್ಲಿ ತೆರೆಗೆ ಬರ್ತಿರೋ ಕನ್ನಡದ ದೊಡ್ಡ ಸಿನಿಮಾ ಆಗಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗಿದೆ. ಚಿತ್ರದಲ್ಲಿ ಕ್ರಾಂತಿ ರಾಯಣ್ಣ ಎನ್ನುವ ಎನ್‌ಆರ್‌ಐ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರಿಸಿದ್ದಾರೆ. ಶೈಲಜಾ ನಾಗ್, ಬಿ ಸುರೇಶ ದಂಪತಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜನವರಿ 26ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
Challenging Star Darshan Starrer Kranti Trailer 24 Hours Report and Records. tremendous response for KrantiTrailer. Close to 8M views with 395K+ likes in 24 hours. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X