Don't Miss!
- News
ದೆಹಲಿ ಮದ್ಯ ಹಗರಣದ ಹಣವನ್ನು ಗೋವಾ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡ ಎಎಪಿ: ಇಡಿ ಹೇಳಿಕೆಯಲ್ಲಿ ಏನಿದೆ?
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಾಲೆಂಜಿಂಗ್ ಸ್ಟಾರ್ ಕಡೆಯಿಂದ ಸಿಹಿಸುದ್ದಿ: ಹಬ್ಬ ಶುರು ಮಾಡಿದ ಫ್ಯಾನ್ಸ್!
ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ಅಭಿಮಾನಿಗಳ ಬಗ್ಗೆ ಬಿಡಿಸಿ ಹೇಳೋದೇ ಬೇಕಿಲ್ಲ. ಈಗಾಗಲೇ 'ಕ್ರಾಂತಿ' ಚಿತ್ರದ ಪ್ರಚಾರ ಶುರು ಮಾಡಿರುವ ಅಭಿಮಾನಿಗಳು ಸಿನಿಮಾ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದಾರೆ. ಇತ್ತೀಚೆಗೆ ಪೋಲೆಂಡ್‌ನಲ್ಲಿ 2 ಸಾಂಗ್ಸ್ ಮತ್ತು ಒಂದಷ್ಟು ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಬಂದಿರೋ ದರ್ಶನ್ ಹೊಸ ಹೇರ್‌ಸ್ಟೈಲ್‌ನಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಡಿ ಬಾಸ್ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ನಮ್ ಬಾಸ್ ಹೊಸ ಹೇರ್‌ಸ್ಟೈಲ್ ಹಿಂದಿನ ಗುಟ್ಟೇನು ಅಂತ ಗೆಸ್ ಮಾಡಲು ಶುರು ಮಾಡಿದ್ದಾರೆ.
'ರಾಬರ್ಟ್' ನಂತರ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. 'ಯಜಮಾನ' ಸಿನಿಮಾ ಮಾಡಿ ಗೆದ್ದಿದ್ದ ಅದೇ ತಂಡ ಈ ಚಿತ್ರವನ್ನು ಕಟ್ಟಿಕೊಡ್ತಿದ್ದು, ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದೆ. ನಿಧಾನವಾಗಿ ಪೋಸ್ಟ್ ಪ್ರೊಡಕ್ಷನ್ ಕಡೆ ಚಿತ್ರತಂಡ ಮುಖ ಮಾಡಿದೆ. ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
ನಟ
ದರ್ಶನ್
ಹೊಸ
ಹೇರ್‌ಸ್ಟೈಲ್
ಸೀಕ್ರೇಟ್
ಏನ್
ಗೊತ್ತಾ?
'ಕ್ರಾಂತಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮಿಂಚಿದ್ದಾರೆ. ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಸೇರಿದಂತೆ ಘಟಾನುಘಟಿ ಕಲಾವಿದರು ಪಾತ್ರವರ್ಗದಲ್ಲಿದ್ದಾರೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ 'ಕ್ರಾಂತಿ' ಟೀಸರ್ ಅಭಿಮಾನಿಗಳ ಮನಗೆದ್ದಿತ್ತು. ಬಹಳ ದಿನಗಳಿಂದ 'ಕ್ರಾಂತಿ' ಸಿನಿಮಾ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದರು.
|
ಹೊಸ ಲುಕ್‌ನಲ್ಲಿ ದರ್ಶನ್ 'ಕ್ರಾಂತಿ' ಸಿನಿಮಾ ಡಬ್ಬಿಂಗ್
ಪೋಲೆಂಡ್‌ನಲ್ಲಿ 'ಕ್ರಾಂತಿ' ಸಿನಿಮಾ ಚಿತ್ರೀಕರಣ ಮುಗಿಸಿ ಬಂದ ದರ್ಶನ್, ಈಗ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಹೊಸ ಲುಕ್‌ನಲ್ಲಿ ಮಿಂಚುತ್ತಿರುವ ಡಿಬಾಸ್ ಡಬ್ಬಿಂಗ್ ಸ್ಟುಡಿಯೋದಲ್ಲಿರೋ ಫೋಟೊವನ್ನು ನಿರ್ಮಾಪಕಿ ಶೈಲಜಾ ನಾಗ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. The Voice of Kranti ಬರೆದು ಅವರು ಪೋಸ್ಟ್ ಮಾಡಿರೋ ಫೋಟೊ ಸಖತ್ ವೈರಲ್ ಆಗಿದೆ.
ದರ್ಶನ್
ನಟನೆಯ
'ಕ್ರಾಂತಿ'
ರಿಲೀಸ್‌ಗೆ
ಮುಹೂರ್ತ
ಫಿಕ್ಸ್!

'ಕ್ರಾಂತಿ' ಚಿತ್ರದಲ್ಲಿ NRI ಪಾತ್ರದಲ್ಲಿ ದರ್ಶನ್
ಅಕ್ಷರ ಕ್ರಾಂತಿಯ ಕುರಿತಾದ ಸಿನಿಮಾ ಇದು ಅನ್ನೋದು ಈಗಾಗಲೇ ಪೋಸ್ಟರ್ ಹಾಗೂ ಟೀಸರ್‌ನಲ್ಲಿ ಗೊತ್ತಾಗಿದೆ. ಚಿತ್ರದಲ್ಲಿ ದರ್ಶನ್ NRI ಪಾತ್ರದಲ್ಲಿ ನಟಿಸಿದ್ದಾರೆ ಅನ್ನಲಾಗ್ತಿದ್ದು, ವಿದೇಶದಲ್ಲಿ ಚಿತ್ರದ ನಾಯಕ ಸಂದರ್ಶನ ನೀಡುತ್ತಿರುವಂತೆ ಮೇಕಿಂಗ್ ಸ್ಟಿಲ್ ಒಂದು ವೈರಲ್ ಆಗಿತ್ತು. ಸದ್ಯ ದರ್ಶನ್ ಡಬ್ಬಿಂಗ್ ಮಾಡುವಾಗಲೂ ಅದೇ ದೃಶ್ಯದ ಫೋಟೊವನ್ನು ಅವರ ಎದುರಿಗಿರುವ ಟಿವಿಯಲ್ಲಿ ನೋಡಬಹುದು.

ರಾಜ್ಯೋತ್ಸವದ ಸಂಭ್ರಮದಲ್ಲಿ 'ಕ್ರಾಂತಿ' ರಿಲೀಸ್?
'ಕ್ರಾಂತಿ' ಸಿನಿಮಾ ಟೀಸರ್‌ನಲ್ಲಿ'ನನ್ನ ಶಾಲೆ. ಅಕ್ಷರ ಎದೆಗೆ ಬಿತ್ತಿದ ಶಾಲೆ. ಪ್ರಜ್ಞೆಯ ತಲೆಗೆ ನೂಕಿದ ಶಾಲೆ. ಬದುಕುವ ದಾರಿ ತೋರಿದ ಶಾಲೆ. ಎಲ್ಲರನ್ನೂ ಪ್ರೀತಿಸುವುದ ಕಲಿಸಿದ ಶಾಲೆ. ತಾಯಿ ನುಡಿ ದೇವ ನುಡಿ ಎಂದ ಶಾಲೆ. ಈ ತಾಯಿಗೆ ನನ್ನ ಕನ್ನಡ ತಾಯಿಗೆ, ನಾನು ಚಿರಋಣಿ.' ಎಂದು ದರ್ಶನ್ ಹೇಳಿರುವ ಡೈಲಾಗ್ ಸೂಪರ್ ಹಿಟ್ ಆಗಿದೆ. ಇದು ಬರೀ ಅಕ್ಷರ ಕ್ರಾಂತಿಯ ಸಿನಿಮಾ ಮಾತ್ರವಲ್ಲ, ಕನ್ನಡಾಭಿಮಾನದ ಸಿನಿಮಾ. ಹಾಗಾಗಿ ಈ ಚಿತ್ರವನ್ನು ರಾಜ್ಯೋತ್ಸವದ ಸಂಭ್ರಮದಲ್ಲಿ ರಿಲೀಸ್ ಮಾಡಲಾಗುತ್ತೆ ಅನ್ನೋ ಚರ್ಚೆ ಕೂಡ ನಡೀತಿದೆ.

ತರುಣ್ ಸುಧೀರ್ ಸಾರಥ್ಯದಲ್ಲಿ ದರ್ಶನ್ ಹೊಸ ಪ್ರಾಜೆಕ್ಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 55ನೇ ಸಿನಿಮಾ 'ಕ್ರಾಂತಿ'. ಈ ಸಿನಿಮಾ ನಂತರ ತರುಣ್ ಸುಧೀರ್ ನಿರ್ದೇಶನದಲ್ಲಿ 56ನೇ ಸಿನಿಮಾ ಶುರುವಾಗಲಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದ ಥೀಮ್ ಪೋಸ್ಟರ್ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿ ಸದ್ದು ಮಾಡಿತ್ತು. ಇದೇ ಚಿತ್ರದ ಲುಕ್ ಟೆಸ್ಟ್‌ಗಾಗಿ ಡಿಬಾಸ್ ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚುತ್ತಿದ್ದಾರೆ ಅನ್ನಲಾಗುತ್ತಿದೆ.