ಕನ್ವರ್ ಲಾಲ್ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಲವು ತಳಿಯ ಶ್ವಾನಗಳನ್ನು ನಟ ದರ್ಶನ್ ಸಾಕುತ್ತಿದ್ದಾರೆ. ಇನ್ನೂ, ದರ್ಶನ್ ಫಾರ್ಮ್ ಹೌಸ್ ನಲ್ಲಿ ಕುದುರೆ, ಎತ್ತು, ಹಸು ಸೇರಿದಂತೆ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳು ಕೂಡ ಇವೆ.

ಇಂತಿಪ್ಪ ದರ್ಶನ್ 'ಕನ್ವರ್ ಲಾಲ್' ಜೊತೆಗೆ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ಈ ಕನ್ವರ್ ಲಾಲ್ ಯಾರು ಅಂದ್ರಾ.? ಕನ್ವರ್ ಲಾಲ್ ಬೇರೆ ಯಾರೂ ಅಲ್ಲ. ರೆಬೆಲ್ ಸ್ಟಾರ್ ಅಂಬರೀಶ್ ರವರ ಅಚ್ಚು ಮೆಚ್ಚಿನ ಶ್ವಾನ.

ಕನ್ವರ್ ಲಾಲ್ ಜೊತೆಗೆ ದರ್ಶನ್ ಸೆಲ್ಫಿ

ಕನ್ವರ್ ಲಾಲ್ ಜೊತೆಗೆ ದರ್ಶನ್ ಸೆಲ್ಫಿ

ಅಂಬರೀಶ್ ಸಾಕಿ ಸಲುಹಿದ್ದ ಸೇಂಟ್ ಬರ್ನಾಡ್ ತಳಿಯ ಶ್ವಾನ ಕನ್ವರ್ ಲಾಲ್ ಅಂದ್ರೆ ನಟ ದರ್ಶನ್ ಗೂ ಅಚ್ಚುಮೆಚ್ಚು. ಇತ್ತೀಚೆಗೆಷ್ಟೇ ಅಂಬರೀಶ್ ಮನೆಗೆ ಭೇಟಿ ಕೊಟ್ಟಿದ್ದ ನಟ ದರ್ಶನ್, ಕನ್ವರ್ ಲಾಲ್ ಜೊತೆಗೂ ಕಾಲ ಕಳೆದು, ಅವನೊಟ್ಟಿಗೆ ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ.

ಶ್ವಾನ ಪ್ರಿಯ ಅಂಬರೀಶ್

ಶ್ವಾನ ಪ್ರಿಯ ಅಂಬರೀಶ್

ಅಸಲಿಗೆ, ರೆಬೆಲ್ ಸ್ಟಾರ್ ಅಂಬರೀಶ್ ಕೂಡ ಶ್ವಾನ ಪ್ರಿಯ. ತಮ್ಮ ಮನೆಯಲ್ಲಿ ಎರಡು ನಾಯಿಗಳನ್ನು ಅಂಬರೀಶ್ ಪ್ರೀತಿಯಿಂದ ಸಾಕಿದ್ದರು. ತಮ್ಮ ಜನಪ್ರಿಯ ಡೈಲಾಗ್ ಗಳಾದ 'ಕನ್ವರ್ ಲಾಲ್' ಮತ್ತು 'ಬುಲ್ ಬುಲ್' ನ ಪ್ರತಿ ದಿನ ನೆನಪಿಸಿಕೊಳ್ಳಲು ಶ್ವಾನಗಳಿಗೆ ಅದೇ ಹೆಸರುಗಳನ್ನಿಟ್ಟು ಅಂಬರೀಶ್ ನಾಮಕರಣ ಮಾಡಿದ್ದರು.

ಅಂಬಿ ನಿಧನಹೊಂದಿದ ಮೇಲೆ...

ಅಂಬಿ ನಿಧನಹೊಂದಿದ ಮೇಲೆ...

ಸಮಯ ಸಿಕ್ಕಾಗಲೆಲ್ಲಾ ಕನ್ವರ್ ಲಾಲ್ ಮತ್ತು ಬುಲ್ ಬುಲ್ ಜೊತೆಗೆ ಅಂಬರೀಶ್ ಆಟವಾಡುತ್ತಿದ್ದರು. ಅಂಬಿ ನಿಧನ ಹೊಂದಿದ ಮೇಲೆ ಕನ್ವರ್ ಲಾಲ್ ಮತ್ತು ಬುಲ್ ಬುಲ್ ಮಂಕಾಗಿ ಮನೆಯ ಮೂಲೆ ಸೇರಿದ್ದರು. ನೆಚ್ಚಿನ ಒಡೆಯ ಅಂಬಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದ ಕನ್ವರ್ ಲಾಲ್ ಮತ್ತು ಬುಲ್ ಬುಲ್ ಶ್ವಾನಗಳನ್ನು ಮತ್ತೆ ನಾರ್ಮಲ್ ಟ್ರ್ಯಾಕ್ ಗೆ ತರುವಲ್ಲಿ ಅಭಿಶೇಕ್ ಅಂಬರೀಶ್ ಯಶಸ್ವಿ ಆಗಿದ್ದಾರೆ.

ವೈರಲ್ ಆದ ಫೋಟೋ

ವೈರಲ್ ಆದ ಫೋಟೋ

ಮೊನ್ನೆಯಷ್ಟೇ ಅಂಬಿ ಮನೆಗೆ ಭೇಟಿ ಕೊಟ್ಟ ದಾಸ ದರ್ಶನ್, ಕನ್ವರ್ ಲಾಲ್ ನನ್ನು ನೋಡಿ ಖುಷಿ ಪಟ್ಟು ತಕ್ಷಣ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

English summary
Challenging Star Darshan takesh selfie with Ambareesh's pet Kanvarlal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X