Darshan: ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಟ ದರ್ಶನ್

ಹಿರಿಯ ನಟಿ ಲೀಲಾವತಿ ಬಹುದಿನಗಳಿಂದ ಹಾಸಿಗೆ ಹಿಡಿದಿದ್ದು, ಅವರ ಮನೆಗೆ ಹಲವು ನಾಯಕ ನಟರು, ಹಿರಿಯ ಕಲಾವಿದರು ಭೇಟಿ ನಿಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇತ್ತೀಚೆಗೆ ನಟ ಅರ್ಜುನ್ ಸರ್ಜಾ ಕೂಡ ಮಾತನಾಡಿಸಿಕೊಂಡು ಬಂದಿದ್ದರು. ಇದರ ಬೆನ್ನಲ್ಲೇ ಭಾನುವಾರ (ನವೆಂಬರ್ 26 ರಂದು) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿರಿಯ ನಟಿಯನ್ನು ಭೇಟಿಯಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಲೀಲಾವತಿ ಅವರು ದಶಕಗಳ ಕಾಲ ಚಿತ್ರರಂಗವನ್ನು ಆಳಿದವರು. ನಟ ವಿನೋದ್ ರಾಜ್ ಕೂಡ ಚಿತ್ರರಂಗದ ಪ್ರತಿಭಾನ್ವಿತ ನಟ. ತಮ್ಮ ನೃತ್ಯದಿಂದ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಭರವಸೆ ಮುಡಿಸಿದ್ದ ನಟ. ಸದ್ಯ ನಟಿ ಲೀಲಾವತಿ ತಮ್ಮ ವಯಸ್ಸಿನ ಕಾರಣದಿಂದ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ನಟ ದರ್ಶನ್ ತೂಗುದೀಪ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

Challenging star Darshan Thoogudeepa Visited veteran actress Leelavathi Home

ಲೀಲಾವತಿ ಮನೆಯಲ್ಲಿ ನಟ ದರ್ಶನ್ ತೂಗುದೀಪ

ನಟ ದರ್ಶನ್ ಮತ್ತು ಹಲವು ಮಂದಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ತೋಟದ ಮನೆಗೆ ಭೇಟಿ ನೀಡಿದ್ದಾರೆ. 87 ವರ್ಷದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ತೋಟದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಅವರನ್ನು ಭೇಟಿ ಮಾಡುತ್ತಿದ್ದಾರೆ.

ಇನ್ನು, ನಟ ದರ್ಶನ್ ಭೇಟಿ ನೀಡಿರುವ ಚಿತ್ರಗಳನ್ನು ಶ್ರೀರಂಗಪಟ್ಟಣ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. "ಕನ್ನಡ ಚಿತ್ರರಂಗ ಖ್ಯಾತ ಹಿರಿಯ ನಟಿಯಾದ ಶ್ರೀಮತಿ ಲೀಲಾವತಿರವರ ಅನಾರೋಗ್ಯದ ಹಿನ್ನಲೆ ಇಂದು ಅವರ ನಿವಾಸಕ್ಕೆ ಕನ್ನಡ ಚಿತ್ರರಂಗದ ಹೆಸರಾಂತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಹಾಗೂ ಶ್ರೀನಿವಾಸ್ ಅವರೊಂದಿಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಲಾಯಿತು. ಅವರು, ಅದಷ್ಟು ಬೇಗ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

ಇತ್ತೀಚೆಗೆ ಬಹುಭಾಷಾ ನಟ ಅರ್ಜುನ್ ಸರ್ಜಾ ಹಿರಿಯ ನಟಿ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ ಅವರ ಯೋಗ ಕ್ಷೇಮ ವಿಚಾರಿಸಿದ್ದರು. ಈ ವೇ ತಾಯಿಯ ಸ್ಥಿತಿ ಕಂಡು ಕಣ್ಣೀರು ಹಾಕಿದ ನಟ ವಿನೋದ್ ರಾಜ್ ಅವರಿಗೆ ಅರ್ಜುನ್ ಸರ್ಜಾ ಧೈರ್ಯ ತುಂಬಿದ್ದರು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು.

Challenging star Darshan Thoogudeepa Visited veteran actress Leelavathi Home

ಇನ್ನು, ಅನೇಕ ಹಿರಿಯ ಕಲಾವಿದರು ಮತ್ತು ತಂತ್ರಜ್ಞರು ಲೀಲಾವತಿ ಮತ್ತು ವಿನೋದ್ ರಾಜ್ ಅವರನ್ನು ಭೇಟಿ ಮಾಡಿದ್ದರು. ಹಿರಿಯ ನಟ ಶ್ರೀನಾಥ್ ಜೊತೆಗೆ ನಟಿ ಪದ್ಮಾ ವಾಸಂತಿ, ನಟ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಯಿ ಅವರು ಲೀಲಾವತಿ ಮನೆಗೆ ಭೇಟಿ ನೀಡಿದ್ದರು. ಕೆಲ ತಿಂಗಳುಗಳ ಹಿಂದೆ ನಟಿ ಶೃತಿ ಕೂಡ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ್ದರು.

ಕೆಲವು ದಿನಗಳ ಹಿಂದೆ ಹಿರಿಯ ನಟಿ ಲೀಲಾವತಿ ನಿಧನರಾಗಿದ್ದಾರೆಂಬ ಸುದ್ದಿಯನ್ನು ಹಬ್ಬಿಸಲಾಗಿತ್ತು. ಇದು ವಿನೋದ್ ರಾಜ್ ಮನಸ್ಸಿಗೆ ತುಂಬಾನೇ ಬೇಸರ ತರಿಸಿತ್ತು. ಈ ಕಾರಣಕ್ಕೆ ಸಿನಿವುಡ್ ಜೊತೆಗಿನ ಸಂದರ್ಶನದಲ್ಲಿ ಅಮ್ಮನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. "ಅಮ್ಮ ಆರೋಗ್ಯವಾಗಿದ್ದಾರೆ. ಅವರ ವಯಸ್ಸಿಗೆ ತಕ್ಕಂಗೆ ಹೇಗೆ ಇರಬೇಕೋ ಹಾಕಿದ್ದಾರೆ. 86-87 ವಯಸ್ಸು ಮುಟ್ಟಿದ್ದಾರೆ. ಅವರ ಕಾಲಕ್ಕೆ ಒಂದು ದಿನಕ್ಕೆ ನಾಲ್ಕು ಸಿನಿಮಾಗೆ ಪಾತ್ರ ಮಾಡಿದವರು. ಒಟ್ಟು 650 ಸಿನಿಮಾಗೆ ಪಾತ್ರ ಮಾಡಿದ್ದಾರೆ. ಅದ್ಯಾಕೆ ಈ ಸುದ್ದಿ ಹಬ್ಬಿಸಿದ್ರು ಅನ್ನೋದನ್ನು ಮಂಜುನಾಥನ ಹತ್ತಿರ ಬಿಟ್ಟಿದ್ದೀವಿ. ಅವನು ನೋಡಿಕೊಳ್ಳಬೇಕು ಅಷ್ಟೇನೆ" ಎಂದಿದ್ದರು.

More from Filmibeat

English summary
Actor Darshan visited veteran actress Leelavathi home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X