ದರ್ಶನ್ 'ವಿರಾಟ್' ಚಿತ್ರಕ್ಕೆ ಕಡೆಗೂ ಕೂಡಿಬಂತು ಗಳಿಗೆ
ವಿರಾಟ್ ಸಿನಿಮಾ ಶೂಟಿಂಗ್ ಈ ವರ್ಷದಲ್ಲೇ ಇದೆ. ಈ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಎರಡೆರೆಡು ಸಿನಿಮಾ ತೆರೆಗೆ ಬರುತ್ತೆ ಅಂತ ಫಿಲ್ಮಿಬೀಟ್ ಕನ್ನಡ ನಲ್ಲಿ ಈ ಹಿಂದೆ ವರದಿ ಮಾಡಿತ್ತು. ಈಗ ಅದರ ಶೂಟಿಂಗ್ ಮಾಹಿತಿಯೂ ಹೊರಬಿದ್ದಿದೆ.
'ಸಾರಥಿ' ಅನ್ನೋ ಬ್ಲಾಕ್ ಬಸ್ಟರ್ ಸಿನಿಮಾ ನಂತರ ದರ್ಶನ್ ತೆರೆಗೆ ಬರಬೇಕಿದ್ದ ಸಿನಿಮಾ ಹೆಚ್ ವಾಸು ನಿರ್ದೇಶನದ 'ವಿರಾಟ್'. ಈ ಚಿತ್ರದ ವಿಶೇಷ ಎಂದರೆ, ವಿರಾಟ್ ಸಿನಿಮಾಗೆ ಚಿತ್ರದ ನಿರ್ಮಾಪಕರು ಕೋಟಿಗಟ್ಟಲೆ ಹಣವನ್ನ ಖರ್ಚು ಮಾಡಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ನಿರ್ಮಾಪಕರು ನಾಪತ್ತೆ?]

ಈ ಚಿತ್ರದ ಶೇ.40 ಭಾಗ ಶೂಟಿಂಗ್ ಮುಗಿದಿದೆ ಕೂಡ. ಈಗ ಚಿತ್ರದ ಉಳಿದ ಭಾಗದ ಚಿತ್ರೀಕರಣ ನಡೆಯಲಿದೆ. ಅಂದ ಹಾಗೆ ಈ ಚಿತ್ರದಲ್ಲಿ ಮೂವರು ನಾಯಕಿಯರು. ಯಶ್ ರ ಮಾಸ್ಟರ್ ಪೀಸ್ ನಾಯಕಿ ಸಾನ್ವಿ ಶ್ರೀವಾತ್ಸವ್ ಅಕ್ಕ ವಿದಿಷಾ ಶ್ರೀವಾತ್ಸವ್ ಒಬ್ಬರಾಗಿದ್ರೆ ಇಷಾ ಚಾವ್ಲಾ, ಚೈತ್ರಾ ಚಂದ್ರನಾಥ್ ಮತ್ತಿಬ್ಬರು.
ಸದ್ಯ 'ಡಿಕೆ' ಸಿನಿಮಾ ಮೂಲಕ ಮಿಂಚಿದ ಚೈತ್ರ ಚಂದ್ರನಾಥ್ ಈ ವರ್ಷ ಚಾಲೆಂಜಿಂಗ್ ಸ್ಟಾರ್ ಗೆ ಜೋಡಿಯಾಗಿ ತೆರೆಗೆ ಬರಲಿದ್ದಾರೆ. ಚಿತ್ರದ ಶೂಟಿಂಗ್ ಇದೇ ಮೇ ತಿಂಗಳ 22ರಿಂದ ಶುರುವಾಗಲಿದೆ ಅನ್ನೋ ಸುದ್ದಿ ವಿರಾಟ್ ಮೂಲದಿಂದ ಹೊರಬಿದ್ದಿದೆ.
ಎಂ.ಎಸ್ ರಮೇಶ್ ಅವರ ಸಂಭಾಷಣೆ, ಚಿತ್ರಕಥೆ ಇರುವ ಚಿತ್ರದಲ್ಲಿ ಸುಹಾಸಿನಿ ಮಣಿರತ್ನಂ ಮುಖ್ಯಮಂತ್ರಿಯಾಗಿ ಕಾಣಿಸಲಿದ್ದಾರೆ. ಸಂದೇಶ್ ನಾಗರಾಜ್ ಹಾಗೂ ಟಾಲಿವುಡ್ ನ ರತ್ನಕುಮಾರ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.


Click it and Unblock the Notifications











