For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಮನಗೆದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆಗಳು!

  |

  ಅಭಿಮಾನಿಗಳ ಆರಾಧ್ಯ ದೈವ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸೂಪರ್ ಹಿಟ್ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ತಮ್ಮ ಸಮಾಜಮುಖಿ ಕೆಲಸಗಳಿಂದಲೂ ದರ್ಶನ್ ತಮ್ಮ ಸೆಲೆಬ್ರೆಟಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ. ದರ್ಶನ್ ಕೊಡುವ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ. ಇಂತಹ ಹೇಳಿಕೆಗಳು ಅಭಿಮಾನಿಗಳಿಗೆ ಸ್ಪೂರ್ತಿ ತುಂಬುತ್ತದೆ.

  ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದು ಕರೆಯುವ ದರ್ಶನ್ ಅವರಿಗೆ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಕೊಟ್ಟಿದ್ದಾರೆ. ಸದ್ಯ ಚಿತ್ರರಂಗದಲ್ಲಿ ದರ್ಶನ್ 25 ವರ್ಷ ಪೂರೈಸಿದ್ದಾರೆ. ಈ ಸಂಭ್ರಮವನ್ನು ಅಭಿಮಾನಿಗಳು ಬಹಳ ಜೋರಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 25 Years of Bossisam ಹೆಸರಿನಲ್ಲಿ ಕಾಮನ್ ಡಿಪಿ ಕ್ರಿಯೇಟ್ ಮಾಡಿ ವೈರಲ್ ಮಾಡಿದ್ದಾರೆ. ಇನ್ನು ಅಭಿಮಾನಿಗಳಿಂದ, ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

  ದರ್ಶನ್ ಸಿನಿ ಬದುಕಿಗೆ 25 ವರ್ಷ: ವಿವಾದ, ಗಲಾಟೆ, ಗದ್ದಲದ ನಡುವೆ ಅಭಿಮಾನಿಗಳ ಸಂಭ್ರಮಾಚರಣೆದರ್ಶನ್ ಸಿನಿ ಬದುಕಿಗೆ 25 ವರ್ಷ: ವಿವಾದ, ಗಲಾಟೆ, ಗದ್ದಲದ ನಡುವೆ ಅಭಿಮಾನಿಗಳ ಸಂಭ್ರಮಾಚರಣೆ

  ದರ್ಶನ್‌ ನಟನೆಗೆ ಅಭಿಮಾನಿಗಳಾದವರಿಂತ ಮಾನವೀಯ ಗುಣಕ್ಕೆ, ನೇರ ನಡೆ ನುಡಿಗೆ ಅಭಿಮಾನಿಗಳಾದವರ ಸಂಖ್ಯೆ ದೊಡ್ಡದಿದೆ. ಇನ್ನು ಲೈಟ್‌ ಬಾಯ್ ಆಗಿ ಚಿತ್ರರಂಗಕ್ಕೆ ಬಂದ ದರ್ಶನ್ ಇವತ್ತು ಸೂಪರ್ ಸ್ಟಾರ್ ಪಟ್ಟಕ್ಕೇರಿರುವುದು ಅದೆಷ್ಟೋ ಜನರಿಗೆ ಪ್ರೇರಣೆಯಾಗಿದೆ. ವೇದಿಕೆಗಳಲ್ಲಿ, ಸಂದರ್ಶನಗಳಲ್ಲಿ ದರ್ಶನ್ ಕೊಟ್ಟಿರುವ ಹೇಳಿಕೆಗಳು ಸಖತ್ ಸದ್ದು ಮಾಡಿವೆ. ಇವತ್ತಿಗೂ ಅಂತಹ ಕೆಲ ಹೇಳಿಕೆಗಳನ್ನು ಮರೆಯೋಕೆ ಸಾಧ್ಯವಿಲ್ಲ.

   ಅಭಿಮಾನಿಗಳ ಬಗ್ಗೆ ದರ್ಶನ್ ಮಾತು

  ಅಭಿಮಾನಿಗಳ ಬಗ್ಗೆ ದರ್ಶನ್ ಮಾತು

  ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅಭಿಮಾನಿಗಳು ಅಂದರೆ ಅಪಾರ ಪ್ರೀತಿ. "ನನ್ನ ಚರ್ಮ ಸುಲಿದು ಚಪ್ಪಲಿ ಮಾಡಿಕೊಟ್ಟರು ಅಭಿಮಾನಿಗಳ ಋಣ ತೀರಿಸೋಕೆ ಸಾಧ್ಯವಿಲ್ಲ" ಎಂದು ಸಾಕಷ್ಟು ಸಮಯಗಳಲ್ಲಿ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿದರೆ ದರ್ಶನ್‌ಗೆ ಅಭಿಮಾನಿಗಳೆಂದರೆ ಎಷ್ಟು ಕೃತಜ್ಞತೆ ಭಾವ ಇದೆ ಅನ್ನುವುದು ಗೊತ್ತಾಗುತ್ತದೆ.

  ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?

   ಚಪ್ಪಲಿ ಬಿಟ್ಟು ವೇದಿಕೆ ಏರಿದ್ದ ದರ್ಶನ್

  ಚಪ್ಪಲಿ ಬಿಟ್ಟು ವೇದಿಕೆ ಏರಿದ್ದ ದರ್ಶನ್

  ಹುಬ್ಬಳ್ಳಿಯಲ್ಲಿ 'ರಾಬರ್ಟ್‌' ಸಿನಿಮಾ ಪ್ರೀ ರಿಲೀಸ್ ಈವೆಂಟ್ ನಡೆದಿತ್ತು. ಅಂದು ವೇದಿಕೆ ಏರಿ ಚಪ್ಪಲಿ ಬಿಟ್ಟು ದರ್ಶನ್ ಮಾತನಾಡಿದ್ದರು. ಅದಕ್ಕೆ ಕಾರಣವನ್ನು ತಿಳಿಸಿದ್ದರು. "ಸಂಗೊಳ್ಳಿ ರಾಯಣ್ಣ ಚಿತ್ರದ ವಿಜಯೋತ್ಸವ ಹೊರಟಾಗ ಎಲ್ಲಾ ಕಡೆ ಒಳ್ಳೆ ಪ್ರೋತ್ಸಾಹ ಸಿಕ್ಕಿತ್ತು. ಆದರೆ ಉತ್ತರ ಕರ್ನಾಟಕಕ್ಕೆ ಹೋಗಿದ್ದಾಗ ಪ್ರತಿಯೊಬ್ಬ ಹೆಣ್ಣುಮಕ್ಕಳು ತಲೆಯ ಮೇಲೆ ಸೆರಗು ಹೊದ್ದು, ಚಪ್ಪಲಿ ಬಿಟ್ಟು ನಮಸ್ಕಾರ ಮಾಡಿದ್ದರು. ನಿಜಕ್ಕೂ ಅವತ್ತು ಅಂದುಕೊಂಡೆ ಇದಕ್ಕೆ ಲಾಯಕ್ ಇದ್ದೀವಾ ಅನ್ನಿಸಿತ್ತು. ನಾವು ನಿಜವಾಗಿಯೂ ಲಾಯಕ್ ಇಲ್ಲ ಸ್ವಾಮಿ, ನಾವು ಚೆಪ್ಪಲಿ ಬಿಟ್ಟು ನಿಮ್ಮ ಪಾದಗಳಿಗೆ ನಾವು ಚಪ್ಪಲಿ ಆಗಬೇಕಷ್ಟೆ" ಎಂದಿದ್ದರು.

   ಸ್ನೇಹದ ಬಗ್ಗೆ ದರ್ಶನ್ ಮಾತು

  ಸ್ನೇಹದ ಬಗ್ಗೆ ದರ್ಶನ್ ಮಾತು

  ನಟ ದರ್ಶನ್ ಸ್ನೇಹಜೀವಿ. ಸ್ನೇಹಿತರು ಸದಾ ಅವರ ಸುತ್ತಾ ಇರ್ತಾರೆ. ಸ್ನೇಹದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದರ್ಶನ್ "ಫ್ರೆಂಡ್‌ಶಿಪ್ ಮಾಡ್ಬೇಕಾ ಎರಡೂ ಕೈ ಚಾಚುತ್ತೀನಿ, ಆದರೆ ದೂರ ತಳ್ಳಬೇಕು ಅಂದರೆ ಒಂದು ಬೆರಳಿನಲ್ಲಿ ತಳ್ಳಿಬಿಡ್ತೀನಿ. ಡಿಫ್ಲೋಮ್ಯಾಟಿಕ್ ಆಗಿ ಎರಡನ್ನೂ ಹ್ಯಾಂಡಲ್ ಮಾಡ್ತೀನಿ ಅನ್ನೋದೆಲ್ಲಾ ಇಲ್ಲ. ಕೂತೀದ್ದೀವಾ ಕೂತಿದ್ದೀವಿ. ಫ್ರೆಂಡ್ಸಾ ಫ್ರೆಂಡ್ಸ್, ಎಂಜಾಯ್ ಅಂದರೆ ಎಂಜಾಯ್. ಹಂಗೆ ದುಶ್ಮನಿನಾ ದುಶ್ಮನಿನೇ. ತುಂಬಾ ಸಲ ಹೇಳ್ತಿರ್ತೀನಿ, ಫ್ರೆಂಡ್‌ಶಿಪ್‌ನ ಎಷ್ಟು ಚೆನ್ನಾಗಿ ನಿಭಾಯಿಸುತ್ತೀನೋ, ದುಶ್ಮನಿನಾ ಅದರ ಎರಡರಷ್ಟು ನಿಭಾಯಿಸುತ್ತೀನಿ" ಎಂದು ಹೇಳಿದ್ದರು.

   ದೊಡ್ಮನೆ ಕುರಿತು ದರ್ಶನ್ ಹೇಳಿಕೆ

  ದೊಡ್ಮನೆ ಕುರಿತು ದರ್ಶನ್ ಹೇಳಿಕೆ

  ನಟ ದರ್ಶನ್ ತಾವು ನಡೆದು ಬಂದ ದಾರಿಯನ್ನು ಎಂದು ಮರೆತವರಲ್ಲ. ಅದರಲ್ಲೂ ತಮ್ಮ ಕುಟುಂಬಕ್ಕೆ ಸಹಾಯ ಮಾಡಿದ ಅಣ್ಣಾವ್ರ ಫ್ಯಾಮಿಲಿ ಬಗ್ಗೆ ಸದಾ ನೆನಪಿಸಿಕೊಳ್ಳುತ್ತಿರುತ್ತಾರೆ. "ದೊಡ್ಮನೆ ಅಂದರೆ ನಮ್ಮ ಅಪ್ಪ ಬಂದಿರುವುದು ಅಲ್ಲಿಂದಲೇ, ಇದೇ ರಾಜ್‌ಕುಮಾರ್ ಕಂಪೆನಿಯಿಂದ ನಮ್ಮ ಅಪ್ಪ ಬಂದಿದ್ದು ಚಿತ್ರರಂಗಕ್ಕೆ. ನಾನು ಲೈಟ್ ಬಾಯ್ ಆಗಿ ಸೇರಿಕೊಂಡಿದ್ದು ಇದೇ ಪೂರ್ಣಿಮಾ ಎಂಟರ್‌ಟ್ರೈಸರ್‌ ಬ್ಯಾನರ್‌ನಲ್ಲಿ. 'ಜನುಮದ ಜೋಡಿ' ಚಿತ್ರಕ್ಕೆ 150 ರೂ, ಬಾಟಾ ಇಂದ ಶುರುಮಾಡಿದ್ದು ನಾನು. ಇನ್ನು ನೂರು ವರ್ಷ ಹೋದರೂ ದೊಡ್ಮನೆ ದೊಡ್ಮನೆನೇ. ನಾವೆಲ್ಲಾ ಅದರ ಕೆಳಗಿರುವ ಹುಲ್ಲು ಅಲ್ಲ, ಬೇರುಗಳು ಅಂದುಕೊಳ್ಳಿ" ಎಂದು ಚಾಲೆಂಜಿಂಗ್ ಸ್ಟಾರ್ ಮಾತನಾಡಿದ್ದು ವೈರಲ್ ಆಗಿತ್ತು.

  Recommended Video

  ಟಿಕೆಟ್ ಸಿಗಲಿಲ್ಲ ಅಂದಾಗ ಬಹಳ ಬೇಜಾರಾಯ್ತು!! | Filmibeat Kannada
  English summary
  Challenging Star Darshan Viral Statements About Fans, Friends and Raj Family. Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X