For Quick Alerts
  ALLOW NOTIFICATIONS  
  For Daily Alerts

  ಧಾರವಾಡದ ವಿನಯ್ ಕುಲಕರ್ಣಿ ಡೈರಿ ಫಾರ್ಮ್‌ಗೆ ನಟ ದರ್ಶನ್ ಭೇಟಿ!

  |

  ಪ್ರಾಣಿ- ಪಕ್ಷಿ ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೀವ ಬಿಡ್ತಾರೆ. ತಾವು ಮೂಕ ಜೀವಿಗಳನ್ನು ಸಾಕುವುದರ ಜೊತೆಗೆ ಪ್ರಾಣಿಗಳನ್ನು ಸಾಕಿ ಸಲಹುವವರ ಕಂಡರೆ ಸಾಕು ಅವರೊಟ್ಟಿಗೆ ಸ್ನೇಹ ಬೆಳೆಸುತ್ತಾರೆ. ಅಷ್ಟರಮಟ್ಟಿಗೆ ಪ್ರಾಣಿಗಳನ್ನು ಅವುಗಳ ಪಾಲಕರನ್ನು ಕಂಡರೆ ದರ್ಶನ್‌ಗೆ ಪ್ರೀತಿ. 'ಬನಾರಸ್' ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ಗೆ ಹೋಗಿದ್ದ ದರ್ಶನ್, ಧಾರವಾಡದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಡೈರಿ ಫಾರ್ಮ್‌ಗೆ ಹೋಗಿ ಭೇಟಿ ಕೊಟ್ಟಿದ್ದರು.

  ಎಲ್ಲೇ ಹೋಗಲಿ ಬರಲಿ ಪಶು ಪಕ್ಷಿ ಕಂಡರೆ ನಟ ದರ್ಶನ್ ಖುಷಿಯಾಗಿಬಿಡುತ್ತಾರೆ. ಮೈಸೂರಿನ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿರುತ್ತಾರೆ. ಮೃಗಾಲಯಗಳಲ್ಲಿರುವ ಜೀವಿಗಳನ್ನು ದತ್ತು ಪಡೆದು ಸಾಕುತ್ತಾರೆ. ಇವರ ಈ ಪ್ರಾಣಿ ಪಕ್ಷಿ ಕಾಳಜಿ ನೋಡಿ ಅರಣ್ಯ ಇಲಾಖೆಯ ರಾಯಭಾರಿ ಆಗಿ ನೇಮಿಸಲಾಗಿದೆ. ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆ ರಾಯಭಾರಿ ಕೂಡ ಆಗಿದ್ದಾರೆ. ಯಾವುದೇ ಊರಿನ ತಮ್ಮ ಸ್ನೇಹಿತರ ಮನೆಗೆ ದರ್ಶನ್ ಹೋದರು ಅವರು ಸಾಕಿರುವ ಪ್ರಾಣಿ ಪಕ್ಷಿಗಳನ್ನು ನೋಡಿ ಕೆಲ ಸಮಯ ಅವುಗಳ ಒಟ್ಟಿಗೆ ಕಳೆದು ಬರುತ್ತಾರೆ. ಹಾಗಾಗಿ ದರ್ಶನ್‌ಗೆ ಸಾಕಷ್ಟು ಪರಿಸರ ಪ್ರೇಮಿ, ಪ್ರಾಣಿ ಪ್ರಿಯ ಸ್ನೇಹಿತರು ಇದ್ದಾರೆ.

  'ಬನಾರಸ್' ವೇದಿಕೆಯಲ್ಲಿ ದರ್ಶನ್ ಬಿಚ್ಚು ಮಾತು'ಬನಾರಸ್' ವೇದಿಕೆಯಲ್ಲಿ ದರ್ಶನ್ ಬಿಚ್ಚು ಮಾತು

  ಇನ್ನು ಸ್ನೇಹಿತರ ಬಳಿ ಇರುವ ಪ್ರಾಣಿ ಪಕ್ಷಿಗಳನ್ನು ಕೊಟ್ಟು ಪಡೆಯುವ ಕೆಲಸವನ್ನು ದರ್ಶನ್ ಮಾಡುತ್ತಾರೆ. ತಮ್ಮ ಬಳಿ ಇರುವ ಪ್ರಾಣಿ ಪಕ್ಷಿಗಳನ್ನು ಸಾಕಲು ಸ್ನೇಹಿತರಿಗೆ ಕೊಡುತ್ತಾರೆ, ಅದೇ ರೀತಿ ಸ್ನೇಹಿತರ ಬಳಿ ಇರುವ ಪ್ರಾಣಿಗಳನ್ನು ತಂದು ಸಾಕುತ್ತಾರೆ.

  ವಿನಯ್ ಕುಲಕರ್ಣಿ ಡೈರಿಗೆ ದರ್ಶನ್ ಭೇಟಿ

  ವಿನಯ್ ಕುಲಕರ್ಣಿ ಡೈರಿಗೆ ದರ್ಶನ್ ಭೇಟಿ

  ನಿನ್ನೆ(ಅಕ್ಟೋಬರ್ 22) ಝೈದ್ ಖಾನ್ ನಟನೆಯ 'ಬನಾರಸ್' ಸಿನಿಮಾ ಪ್ರೀ ರಿಲೀಸ್ ಈವೆಂಟ್ ಹುಬ್ಬಳ್ಳಿಯಲ್ಲಿ ನಡೀತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ದರ್ಶನ್ ಹೋಗಿದ್ದರು. ಇಂದು (ಅಕ್ಟೋಬರ್ 23) ಧಾರವಾಡದ ಹೊರ ವಲಯದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಡೈರಿ ಫಾರ್ಮ್‌ಗೆ ನಟ ದರ್ಶನ್ ಭೇಟಿ ನೀಡಿದರು. ಡೈರಿಯಲ್ಲಿ ಇರುವ​ ಕುದುರೆ ಹಾಗೂ ದನಕರುಗಳೊಂದಿಗೆ ಕೆಲಕಾಲ ಕಳೆದರು. ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಜೊತೆಗಿದ್ದರು.

  ದೀಪಾವಳಿ ಹಬ್ಬಕ್ಕೂ ಮತ್ತದೇ ಬೇಡಿಕೆ: ಈ ಬಾರಿ ಆದರೂ ಅಭಿಮಾನಿಗಳ ಆಸೆ ಈಡೇರಿಸುತ್ತಾ 'ಕ್ರಾಂತಿ' ಚಿತ್ರತಂಡ?ದೀಪಾವಳಿ ಹಬ್ಬಕ್ಕೂ ಮತ್ತದೇ ಬೇಡಿಕೆ: ಈ ಬಾರಿ ಆದರೂ ಅಭಿಮಾನಿಗಳ ಆಸೆ ಈಡೇರಿಸುತ್ತಾ 'ಕ್ರಾಂತಿ' ಚಿತ್ರತಂಡ?

  ಈ ಹಿಂದೆಯೂ ಫಾರ್ಮ್‌ಗೆ ಹೋಗಿದ್ದರು

  ಈ ಹಿಂದೆಯೂ ಫಾರ್ಮ್‌ಗೆ ಹೋಗಿದ್ದರು

  ಧಾರವಾಡ ಹೊರವಲಯದಲ್ಲಿರುವ ವಿನಯ್ ಕುಲಕರ್ಣಿ ಡೈರಿ ಫಾರ್ಮ್‌ಗೆ ಈ ಹಿಂದೆ ಕೂಡ ನಟ ದರ್ಶನ್ ಭೇಟಿ ನೀಡಿದ್ದರು. ಚಕ್ಕಡಿ ಸವಾರಿ ಮಾಡಿ ಸಂಭ್ರಮಿಸಿದ್ದರು. ಅದಕ್ಕಿಂತ ಮುನ್ನ ಹೈನುಗಾರಿಕೆ ವಿಚಾರವಾಗಿ ಅಲ್ಲಿಗೆ ಭೇಟಿ ನೀಡಿ ಕುದುರೆ ಸವಾರಿ ಮಾಡಿ ಬಂದಿದ್ದರು. ಆ ಫೋಟೊಗಳು, ವಿಡಿಯೋಗಳು ವೈರಲ್ ಆಗಿತ್ತು. ಹುಬ್ಬಳ್ಳಿಯಲ್ಲಿ 'ರಾಬರ್ಟ್' ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದ ನಂತರ ರಾತ್ರಿ ವಿನಯ್ ಕುಲಕರ್ಣಿ ಮನೆಗೆ ದರ್ಶನ್ ಹೋಗಿದ್ದರು.

  'ಬನಾರಸ್' ಅದ್ಧೂರಿ ಈವೆಂಟ್

  'ಬನಾರಸ್' ಅದ್ಧೂರಿ ಈವೆಂಟ್

  ಮಾಜಿ ಸಚಿತ ಜಮೀರ್ ಅಹಮದ್ ಪುತ್ರ ಝೈದ್ ಖಾನ್ 'ಬನಾರಸ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜಯತೀರ್ಥ ನಿರ್ದೇಶನದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ಸೋನಲ್ ಮಂಥೇರೋ ನಾಯಕಿಯಾಗಿ ಮಿಂಚಿದ್ದಾರೆ. ಹುಬ್ಬಳ್ಳಿ ರೈಲ್ವೆ ಸ್ಪೋರ್ಟ್ಸ್‌ ಗ್ರೌಂಡ್‌ನಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ದರ್ಶನ್ ಮುಖ್ಯ ಅತಿಥಿಯಾಗಿ ಹೋಗಿದ್ದರು. ವೇದಿಕೆ ಮೇಲೆ ಚಪ್ಪಲಿ ಬಿಟ್ಟು, ತಮ್ಮ ಅಭಿಮಾನಿಗಳಿಗೆ 'ಸೆಲೆಬ್ರಿಟಿ' ಎಂದು ಸಂಭೋದಿಸುತ್ತಾ ಎಲ್ಲಿರಗೂ ನಮಸ್ಕಾರ ಹೇಳಿ ಭಾಷಣ ಶುರು ಮಾಡಿದ ನಟ ದರ್ಶನ್, 'ಬನಾರಸ್' ಸಿನಿಮಾದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು

  'ಕ್ರಾಂತಿ' & 'D56' ಚಿತ್ರಗಳಲ್ಲಿ ಬ್ಯುಸಿ

  'ಕ್ರಾಂತಿ' & 'D56' ಚಿತ್ರಗಳಲ್ಲಿ ಬ್ಯುಸಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ಕ್ರಾಂತಿ' ಹಾಗೂ 'D56' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಕ್ರಾಂತಿ' ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೆ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ. ತರುಣ್ ಸುಧೀರ್ ನಿರ್ದೇಶನದ 'D56' ಚಿತ್ರದಲ್ಲೂ ದರ್ಶನ್ ನಟಿಸ್ತಿದ್ದು, ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

  English summary
  Challenging Star Darshan Visits Ex-Minister Vinay kulkarni Dharwad Dairy farm. Actor Darshan’s boundless love for Domesticated animals and wildlife is known to everybody, especially his fans. Know more.
  Sunday, October 23, 2022, 18:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X