'ನನ್ನ ಪ್ರಕಾರ' ಆಡಿಯೋ ಬಿಡುಗಡೆ ಮಾಡುತ್ತಿದ್ದಾರೆ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ ಚಿತ್ರದ ಸಕ್ಸಸ್ ನ ಖುಷಿಯಲ್ಲಿ ಇದ್ದಾರೆ. ಕನ್ನಡದಲ್ಲಿ ಧೂಳ್ ಎಬ್ಬಿಸುತ್ತಿರುವ ಕುರುಕ್ಷೇತ್ರ ಈಗ ತಮಿಳು ಮತ್ತು ಮಲಯಾಳಂನಲ್ಲಿ ರಿಲೀಸ್ ಗೆ ತಯಾರಾಗುತ್ತಿದೆ. ಆಗಸ್ಟ್ 15ಕ್ಕೆ ಕುರುಕ್ಷೇತ್ರ ತಮಿಳು ಮತ್ತು ಮಲಯಾಳಂನಲ್ಲಿ ತೆರೆಗೆ ಬರುತ್ತಿದೆ.

ಸಾಕಷ್ಟು ಬ್ಯುಸಿ ಇರುವ ದರ್ಶನ್ 'ನನ್ನ ಪ್ರಕಾರ' ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಏನಿದು ಅಂತ ಅಂದುಕೊಳ್ಳುತ್ತಿದ್ದೀರಾ. 'ನನ್ನ ಪ್ರಕಾರ' ನಟ ಕಿಶೋರ್ ಮತ್ತು ಪ್ರಿಯಾಮಣಿ ಅಭಿನಯದ ಸಿನಿಮಾ. ಈ ಚಿತ್ರದ ಹಾಡುಗಳನ್ನು ದಾಸ ದರ್ಶನ್ ರಿಲೀಸ್ ಮಾಡುತ್ತಿದ್ದಾರೆ.

ದರ್ಶನ್ ಸಾಕಷ್ಟು ಸಿನಿಮಾದ ಆಡಿಯೋ, ಟ್ರೈಲರ್ ಮತ್ತು ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಈಗ ನನ್ನ ಪ್ರಕಾರ ಚಿತ್ರದ ಹಾಡುಗಳನ್ನು ಲಾಂಚ್ ಮಾಡುತ್ತಿದ್ದಾರೆ. ಈಗಾಗಲೆ ನನ್ನ ಪ್ರಕಾರ ಪೋಸ್ಟರ್, ಟೀಸರ್ ಮತ್ತು ಒಂದು ಹಾಡಿನ ಮೂಲಕ ಚಿತ್ರಾಭಿಮಾನಿಗಳ ಗಮನ ಸಳೆಯುತ್ತಿದೆ.

Challenging Star Darshan Will Release The Audio Of Nanna Prakara

ಅಂದ್ಹಾಗೆ ಚಿತ್ರದ ಹಾಡುಗಳನ್ನು ಆಗಸ್ಟ್ 15ಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ನನ್ನ ಪ್ರಕಾರ ವಿನಯ್ ಬಾಲಾಜಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ವಿಭಿನ್ನ ಕಥಾ ಹಂದರ ಹೊಂದಿರುವ 'ನನ್ನ ಪ್ರಕಾರ' ಚಿತ್ರಕ್ಕೆ ದರ್ಶನ್ ಬೆಂಬಲ ಸಿಕ್ಕಿರುವುದು ಚಿತ್ರಕ್ಕೆ ಆನೆ ಬಲ ಬಂದಂತಾಗಿದೆ.

ವಿನೂತನ ಮತ್ತು ಹೊಸಬಗೆಯ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ಯಾವತ್ತು ಕೈಬಿಟ್ಟಿಲ್ಲ. ಹಾಗಾಗಿ 'ನನ್ನ ಪ್ರಕಾರ' ಕೂಡ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಸ್ಯಾಂಡಲ್ ವುಡ್ ನ ನಿರೀಕ್ಷೆಯ ಚಿತ್ರವಾಗಿರುವ 'ನನ್ನ ಪ್ರಕಾರ' ಇದೆ ತಿಂಗಳು 23ಕ್ಕೆ ತೆರೆಗೆ ಬರುತ್ತಿದೆ.

More from Filmibeat

English summary
Actor Kishore and Priyamani starrer Nanna Prakara audio will release by challenging star Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X