'ನಿನ್ನ ಹೃದಯ ಬಯಸಿದ್ದು ನಿನಗೆ ಸಿಗಲಿ' ಎಂದು ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ದರ್ಶನ್

ಚಂದನವನದ ಕ್ರೇಜಿ ಕ್ವೀನ್ ಎಂದೇ ಖ್ಯಾತಿಯನ್ನು ಪಡೆದಿರುವ ನಟಿ ರಕ್ಷಿತಾ ಪ್ರೇಮ್ ಇಂದು ( ಮಾರ್ಚ್ 31 ) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2002ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ನಟಿ ರಕ್ಷಿತಾ 2007ರವೆರೆಗೆ ಮಾತ್ರ ನಾಯಕಿಯಾಗಿ ಸಕ್ರಿಯರಾಗಿದ್ದರು. ಆ ಬಳಿಕ ನಿರ್ದೇಶಕ ಪ್ರೇಮ್ ಅವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ನಟನೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಸಿನಿಮಾ ಕ್ಷೇತ್ರಲ್ಲಿ ಸಕ್ರಿಯವಾಗಿ ಇದ್ದದ್ದು ಕೇವಲ ಐದು ವರ್ಷವಾದರೂ ಸಹ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ ಸ್ಟಾರ್ ನಟರ ಜತೆ ನಟಿಸಿದ್ದಾರೆ. 2002ರಲ್ಲಿ ಬಿಡುಗಡೆಗೊಂಡ ಅಪ್ಪು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಕ್ಷಿತಾ ಪ್ರೇಮ್ ಅದೇ ವರ್ಷ ಅಪ್ಪು ಸಿನಿಮಾದ ತೆಲುಗು ವರ್ಷನ್ ಈಡಿಯಟ್‌ನಲ್ಲಿ ರವಿತೇಜಾ ಜತೆ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು.

Challenging Star Darshan wishes actress Rakshita Prem on her birthday

ಬಳಿಕ ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಜತೆ ನಟಿಸಿರುವ ರಕ್ಷಿತಾ ತೆಲುಗಿನಲ್ಲಿ ರವಿತೇಜಾ, ಚಿರಂಜೀವಿ, ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್, ಜಗಪತಿ ಬಾಬು ರೀತಿಯ ದೊಡ್ಡ ನಟರ ಜತೆಯೇ ತೆರೆ ಹಂಚಿಕೊಂಡಿದ್ದಾರೆ. ತಮಿಳಿನಲ್ಲಿಯೂ ಸ್ಟಾರ್ ನಟರಾದ ಸಿಳಂಬರಸನ್ ಹಾಗೂ ದಳಪತಿ ವಿಜಯ್ ನಟನೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಹೀಗೆ ನಟಿಸಿದ್ದು ಕೇವಲ ಐದು ವರ್ಷವಾದರೂ ತಮ್ಮ ಫಿಲ್ಮೋಗ್ರಫಿಯಲ್ಲಿ ದೊಡ್ಡ ದೊಡ್ಡ ಚಿತ್ರಗಳ ಹೆಸರನ್ನೇ ದಾಖಲಿಸಿಕೊಂಡಿರುವ ನಟಿ ರಕ್ಷಿತಾ ಪ್ರೇಮ್ ಹುಟ್ಟುಹಬ್ಬಕ್ಕೆ ವಿವಿಧ ಭಾಷೆಗಳ ಸಿನಿ ರಸಿಕರು ಶುಭ ಕೋರಿದ್ದಾರೆ. ಇನ್ನು ಸಿನಿ ರಸಿಕರು ಮಾತ್ರವಲ್ಲದೇ ಚಿತ್ರರಂಗಗಳ ಸ್ಟಾರ್ ಕಲಾವಿದರೂ ಸಹ ರಕ್ಷಿತಾ ಪ್ರೇಮ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

ಇನ್ನು ಕನ್ನಡ ಚಲನಚಿತ್ರರಂಗದ ಸ್ಟಾರ್ ಹಿಟ್ ಜೋಡಿ ಎಂದೇ ಖ್ಯಾತಿಯನ್ನು ಪಡೆದಿರುವ ಹಲವಾರು ನಟ ಹಾಗೂ ನಟಿಯರ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಒಂದಾಗಿರುವುದೆಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ. ಕಲಾಸಿಪಾಳ್ಯ, ಅಯ್ಯ, ಸುಂಟರಗಾಳಿ ಹಾಗೂ ಮಂಡ್ಯ ಹೀಗೆ ಒಟ್ಟು ನಾಲ್ಕು ಚಿತ್ರಗಳಲ್ಲಿ ಪರದೆ ಹಂಚಿಕೊಂಡಿತ್ತು ಈ ಜೋಡಿ.

Challenging Star Darshan wishes actress Rakshita Prem on her birthday

ಆಗಿನಿಂದಲೂ ಪರಸ್ಪರ ಸ್ನೇಹ ಗೌರವವನ್ನು ಹೊಂದಿರುವ ಈ ಜೋಡಿ ಈಗಲೂ ಸಹ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಇಬ್ಬರಲ್ಲಿ ಯಾರದ್ದೇ ಹುಟ್ಟುಹಬ್ಬವಿದ್ದರೂ ಒಬ್ಬರು ಮತ್ತೊಬ್ಬರಿಗೆ ತಪ್ಪದೇ ವಿಶ್ ಮಾಡುತ್ತಾರೆ. ಇನ್ನು ಈಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಕ್ಷಿತಾ ಜತೆಗಿನ ಫೋಟೊವೊಂದನ್ನು ಹಂಚಿಕೊಂಡಿದ್ದು "ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ, ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ, ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ ರಕ್ಷಿತಾ ಪ್ರೇಮ್" ಎಂದು ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.

ಇನ್ನು ಕಳೆದ ತಿಂಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬವಿದ್ದಾಗ ನಟಿ ರಕ್ಷಿತಾ ಪ್ರೇಮ್ ಶುಭ ಕೋರಲು ಬಳಸಿದ್ದ ಫೋಟೊವನ್ನೇ ಇದೀಗ ದರ್ಶನ್ ಅವರೂ ಬಳಸಿದ್ದಾರೆ. ಪತ್ನಿ ರಕ್ಷಿತಾ ಪ್ರೇಮ್ ಅವರ ಹುಟ್ಟುಹಬ್ಬವನ್ನು ನಿರ್ದೇಶಕ ಪ್ರೇಮ್ ಸಂಭ್ರಮದಿಂದ ಆಚರಿಸಿದ್ದು, ಮಧ್ಯರಾತ್ರಿ ಕುಟುಂಬ ಹಾಗೂ ಸ್ನೇಹಿತರ ಜತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

More from Filmibeat

English summary
Challenging Star Darshan wishes Rakshita Prem on her birthday. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X