ಯಶಸ್ಸು- ಹುಮ್ಮಸ್ಸು ಸದಾ ನಿಮ್ಮ ಜೊತೆ ಇರಲಿ : ಕ್ರೇಜಿ ಸ್ಟಾರ್ ಗೆ ಡಿ ಬಾಸ್ ವಿಶ್
ಸ್ಯಾಂಡಲ್ ವುಡ್ ಕನಸುಗಾರ, ಪ್ರೇಮಲೋಕದ ಸರದಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮಗಳ ಮದುವೆ ಸಂಭ್ರಮ ಮುಗಿಯುತ್ತಿದಂತೆ ರವಿಮಾಮನ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ.
ಮಗಳ ಮದುವೆ ಪ್ರಯುಕ್ತ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಕೊಳ್ಳುವುದಿಲ್ಲ ಎಂದು ಕ್ರೇಜಿ ಸ್ಟಾರ್ ಹೇಳುವ ಮೂಲಕ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ದಾರೆ. ಆದ್ರೂ ಅಭಿಮಾನಿಗಳು ಸಾಮಾಜಿಕಾ ಜಾಲತಾಣದ ಮೂಲಕವೆ ಶುಭಕೋರುತ್ತಿದ್ದಾರೆ. ಈಗಾಗಲೆ ರವಿಚಂದ್ರನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿರುತ್ತಿದ್ದರು.
ರಾತ್ರಿಯಿಂದಲೆ ರವಿಚಂದ್ರನ್ ದರ್ಶನ ಪಡೆಯಲು ಮನೆ ಮುಂದೆ ಕ್ಯೂ ನಿಂತು ಕಾಯುತ್ತಿರುತ್ತಿದ್ದರು. ಆದ್ರೆ ಈ ಬಾರಿ ಮಗಳ ಮದುವೆ ಪ್ರಯುಕ್ತ ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಲ್ಲಿ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಸಾಮಾಜಿಕ ಜಾಲತಾಣದ ಮೂಲಕವೆ ನೆಚ್ಚಿನ ನಟನಿಗೆ ಶುಭಕೋರುತ್ತಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ಕ್ರೇಜಿ ಸ್ಟಾರ್ ಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ. ರವಿಚಂದ್ರನ್ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಶುಭಕೋರಿದ್ದಾರೆ.
"ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಯಾವಾಗಲೂ ಯಶಸ್ಸು- ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ" ಎಂದು ಟ್ವಿಟ್ಟರ್ ನಲ್ಲಿ ರವಿಮಾಮನಿಗೆ ಶುಭಾಶಯ ತಿಳಿಸಿದ್ದಾರೆ.
ರವಿಚಂದ್ರನ್ ಮಗಳ ಅದ್ಧೂರಿ ಮದುವೆಗೆ ಸ್ಯಾಂಡಲ್ ವುಡ್ ಮತ್ತು ಬೇರೆ ಬೇರೆ ಭಾಷೆಯ ಚಿತ್ರರಂಗದ ಗಣ್ಯರು ಹಾಜರಾಗಿ ಗೀತಾಂಜಲಿ ದಂಪತಿಗೆ ಶುಭಹಾರೈಸಿದ್ದಾರೆ.


Click it and Unblock the Notifications











