ದುಬೈನಲ್ಲಿ ನಟ ದರ್ಶನ್ ಪುತ್ರ ವಿನೀಶ್ ಕುದುರೆ ಸವಾರಿ ಜೋರು; ವಿಡಿಯೋ ವೈರಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ, ಪಕ್ಷಿ ಕಾಳಜಿ ಎಲ್ಲರಿಗೂ ಗೊತ್ತಿದೆ. ಇನ್ನು ದರ್ಶನ್ ಒಳ್ಳೆ ಕುದರೆ ಸವಾರರು ಕೂಡ. ತಮ್ಮ ಮೈಸೂರು ಫಾರ್ಮ್‌ಹೌಸ್‌ನಲ್ಲಿ ಕುದುರೆಗಳನ್ನು ಸಾಕುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಕುದುರೆಗಳನ್ನು ಕಿಚ್ಚು ಆಯಿಸುವುದನ್ನು ಕೂಡ ನೋಡಿದ್ದೇವೆ. ಇದೀಗ ದರ್ಶನ್ ಅವರ ಪುತ್ರ ವಿನೀಶ್ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಇತ್ತೀಚೆಗೆ ವಿನೀಶ್ ತಂದೆ ಜೊತೆ ಕಾಣಿಸಿಕೊಳ್ಳುವ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಣಿಸುತ್ತಿವೆ. ಕೆಲ ದಿನಗಳ ಹಿಂದೆ ಚಕ್ಕಡಿ ಬಂಡಿ ಏರಿ ವಿನೀಶ್ ತಂದೆ ಜೊತೆ ನೈಟ್ ಔಟ್ ಕೂಡ ಹೋಗಿದ್ದರು. ಸದ್ಯ ಮರುಭೂಮಿಯಲ್ಲಿ ವಿನೀಶ್ ಕುದುರೆ ಸವಾರಿ ಮಾಡಿರುವುದನ್ನು ದರ್ಶನ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ನಟ ದರ್ಶನ್ ಹಿಂದೆ ತಂದೆ ಜೊತೆ ಕುದುರೆ ಏರಿ ಸುತ್ತಾಡಿದ್ದ ವೀಡಿಯೋಗಳು ಹರಿದಾಡಿತ್ತು. ದರ್ಶನ್ ಮಗನಿಗೆ ಕುದುರೆ ಸವಾರಿ ಹೇಳಿಕೊಡುತ್ತಿದ್ದಾರೆ ಎನ್ನಲಾಗಿತ್ತು. ಸದ್ಯ ವೈರಲ್ ವೀಡಿಯೋ ನೋಡುತ್ತಿದ್ದರೆ ವಿನೀಶ್ ಕುದುರೆ ಸವಾರಿಯ ತರಬೇತಿ ಜೋರಾಗಿಯೇ ಇದೆ ಅನ್ನೋದು ಗೊತ್ತಾಗುತ್ತಿದೆ. ಅಂದಹಾಗೆ ನಟ ದರ್ಶನ್ ಪುತ್ರ ವಿನೀಶ್ ಈಗ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ.
ಇತ್ತೀಚೆಗೆ ದುಬೈ ಪ್ರವಾಸದ ವೇಳೆ ವಿನೀಶ್ ಅಲ್ಲಿನ ಕುದುರೆ ಸವಾರರ ಜೊತೆ ಕುದುರೆ ಏರಿರುವುದನ್ನು ನೋಡಬಹುದು. ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಬಗ್ಗೆ ನಟ ದರ್ಶನ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಮುಂದೊಂದು ದಿನ ವಿನೀಶ್ ಕೂಡ ಹೀರೊ ಆಗಿ ಚಿತ್ರರಂಗಕ್ಕೆ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 'ಯಜಮಾನ' ಚಿತ್ರದ ಸಕ್ಸಸ್ ಸಮಯದಲ್ಲೇ ಈ ಬಗ್ಗೆ ನಟ ದರ್ಶನ್ ಮಾತನಾಡಿದ್ದರು.
'ಯಜಮಾನ' ಚಿತ್ರದ ಶಿವನಂದಿ ಚಿತ್ರದ ಹಾಡಿನ ಸಣ್ಣ ಝಲಕ್‌ನಲ್ಲಿ ವಿನೀಶ್ ಕಾಣಿಸಿಕೊಂಡಿದ್ದ. ಆ ಸಮಯದಲ್ಲೇ ಸುದ್ದಿಗೋಷ್ಠಿಯಲ್ಲಿ ಮಗ ಚಿತ್ರರಂಗಕ್ಕೆ ಬರ್ತಾನಾ? ಎನ್ನುವ ಪ್ರಶ್ನೆಗೆ ದರ್ಶನ್ ಉತ್ತರಿಸಿದ್ದರು. "ಖಂಡಿತ. ನಾವು ಹೋದ ಮೇಲೆ ನಮ್ಮದೊಂದು ಬ್ರ್ಯಾಂಡ್ ಇರಬೇಕಲ್ವಾ?" ಎಂದು ಹೇಳಿದ್ದರು. ಬಳಿಕ ಬೇರೇ ಬೇರೆ ಸಂದರ್ಭಗಳಲ್ಲಿ ಇದೇ ಪ್ರಶ್ನೆ ಎದುರಾದಾಗಲೂ ದರ್ಶನ್ ಮಾತನಾಡಿದ್ದರು.
ಇತ್ತೀಚೆಗೆ ಹುಟ್ಟುಹಬ್ಬದ ಸಮಯದಲ್ಲೂ ಇದೇ ಪ್ರಶ್ನೆಗೆ 'ಮೊದಲು ಮಣ್ಣು ಹೊರುವುದು ಕಲಿಯಲಿ. ಆಮೇಲೆ ನೋಡೋಣ' ಎಂದು ಹೇಳಿದ್ದರು. ಅಂದರೆ ನೇರವಾಗಿ ಬಂದು ಕ್ಯಾಮರಾ ಮುಂದೆ ನಿಲ್ಲುವುದಲ್ಲ. ಅದಕ್ಕೂ ಮುನ್ನ ಚಿತ್ರಗಳಲ್ಲಿ ಬೇರೆ ವಿಚಾರಗಳನ್ನು ಕಲಿಯಬೇಕು. ಕ್ಯಾಮರಾ ಹಿಂದೆ ಎಷ್ಟೆಲ್ಲಾ ಶ್ರಮ ಇರುತ್ತದೆ ಎನ್ನುವುದು ಗೊತ್ತಾಗಬೇಕು. ಎಲ್ಲವನ್ನು ಕಲಿತುಕೊಂಡು ಚಿತ್ರರಂಗಕ್ಕೆ ಬರಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದರು.
'ಮಿ. ಐರಾವತ' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಮೊದಲಿಗೆ ವಿನೀಶ್ ಕ್ಯಾಮರಾ ಎದುರಿಸಿದ್ದು. ಬಳಿಕ 'ಯಜಮಾನ' ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದ. ಅಭಿಮಾನಿಗಳು ಆಗಲೇ ಥಿಯೇಟರ್ ಮುಂದೆ ವಿನೀಶ್ ಕಟೌಟ್ ನಿಲ್ಲಿಸಿ ಸಂಭ್ರಮಿಸಿದ್ದರು. ಇನ್ನು ಇತ್ತೀಚೆಗೆ ಬಂದ 'ಕಾಟೇರ' ಚಿತ್ರದಲ್ಲಿ ದರ್ಶನ್ ಅವರ ಅಕ್ಕನ ಮಗ ಚಂದು ಕೂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಕಾಟೇರ'ನ ಬಾಲ್ಯದ ಎಪಿಸೋಡ್‌ನಲ್ಲಿ ಮಿಂಚಿದ್ದರು.
ವಿನೀಶ್ ಹಾಗೂ ಚಂದು ಇಬ್ಬರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಟಿಸುವ ಸಾಧ್ಯತೆಯಿದೆ. ಸದ್ಯ ದರ್ಶನ್ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೀತಿದೆ. ಅಕ್ಟೋಬರ್ ವೇಳೆಗೆ 'ಡೆವಿಲ್' ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಪ್ರಕಾಶ್ ವೀರ್ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ.


Click it and Unblock the Notifications











