twitter
    For Quick Alerts
    ALLOW NOTIFICATIONS  
    For Daily Alerts

    Kranti Cutout: 'ಕ್ರಾಂತಿ' ಕಟೌಟ್ ದಾಖಲೆ.. ಅಭಿಮಾನಿಗಳಿಂದ್ಲೇ ಕಟೌಟ್‌ಗಳ ನಿರ್ಮಾಣ.. ಕೆಜಿ ರಸ್ತೆಗೆ ಎಷ್ಟು ಅಡಿ ಕಟೌಟ್ ಗೊತ್ತಾ?

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಇನ್ನು 3 ದಿನಗಳು ಮಾತ್ರ ಬಾಕಿಯಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ. ಮತ್ತೊಂದು ಕಡೆ 'ಕ್ರಾಂತಿ' ಚಿತ್ರದ ಕಟೌಟ್‌ಗಳ ನಿರ್ಮಾಣ ಕೆಲಸ ನಡೀತಿದೆ. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಕಟೌಟ್ ನಿರ್ಮಾಣ ಆಗುತ್ತಿರುವುದು ವಿಶೇಷ.

    ವರ್ಷದ ಬಹುನಿರೀಕ್ಷಿತ 'ಕ್ರಾಂತಿ' ಚಿತ್ರಕ್ಕೆ ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಗಣರಾಜ್ಯೋತ್ಸವದ ದಿನ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಡಿ ಬಾಸ್ ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋ ನೋಡೊಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಲವು ತಿಂಗಳುಗಳಿಂದ ಅಭಿಮಾನಿಗಳು 'ಕ್ರಾಂತಿ' ಪ್ರಚಾರ ಮಾಡುತ್ತಿದ್ದಾರೆ. ರಿಲೀಸ್ ಡೇಟ್ ಹತ್ತಿರವಾದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ದರ್ಶನ್ ಸಿನಿಮಾ ಅಂದಮೇಲೆ ಥಿಯೇಟರ್‌ಗಳ ಮುಂದೆ ಕಟೌಟ್‌ಗಳ ಭರಾಟೆ ಕೂಡ ಜೋರಾಗಿಯೇ ಇರುತ್ತದೆ. 'ಕ್ರಾಂತಿ' ಚಿತ್ರಕ್ಕಾಗಿ ಅಭಿಮಾನಿಗಳು ಕೂಡ ಕಟೌಟ್ ಮಾಡಿಸುತ್ತಿದ್ದಾರೆ.

    ದರ್ಶನ್‌ಗೆ ಈ ನಟಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ: ಅದಕ್ಕೆ ಕಾರಣ ಇದೇನೆ!ದರ್ಶನ್‌ಗೆ ಈ ನಟಿ ಹೀರೊಯಿನ್ ಆಗೋಕೆ ಸಾಧ್ಯನೇ ಇಲ್ಲ: ಅದಕ್ಕೆ ಕಾರಣ ಇದೇನೆ!

    ಸಾಮಾನ್ಯವಾಗಿ ದರ್ಶನ್ ನಟನೆಯ ಸಿನಿಮಾಗಳಿಗೆ 55ರಿಂದ 60 ಕಟೌಟ್‌ಗಳು ನಿರ್ಮಾಣ ಆಗುತ್ತಿತ್ತು. ಆದರೆ 'ಕ್ರಾಂತಿ' ವಿಚಾರದಲ್ಲಿ ಆ ಸಂಖ್ಯೆ ಡಬಲ್ ಆಗುವ ಸುಳಿವು ಸಿಗುತ್ತಿದೆ. ಇನ್ನು ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದ ಎದುರು ದೊಡ್ಡ ಕಟೌಟ್ ಎದ್ದು ನಿಲ್ಲಲಿದೆ.

    'ಕ್ರಾಂತಿ' ಚಿತ್ರಕ್ಕಾಗಿ 100 ಕಟೌಟ್‌

    'ಕ್ರಾಂತಿ' ಚಿತ್ರಕ್ಕಾಗಿ 100 ಕಟೌಟ್‌

    ಮಲ್ಲೇಶ್ವರಂ ಕಟೌಟ್‌ ಅಂಗಡಿಯಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳಿಗೆ ಕಟೌಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಕಟೌಟ್‌ ತಯಾರಕರಾದ ಆನಂದ್‌ ಹಾಗೂ ತಂಡದವರು ಹಗಲಿರುಳು 'ಕ್ರಾಂತಿ' ಕಟೌಟ್‌ಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಕಟೌಟ್‌ ನಿರ್ಮಾಣದ ಆರ್ಡರ್ ಹೆಚ್ಚಾಗುತ್ತಲೇ ಇದೆ ಎಂದು ಆನಂದ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ದರ್ಶನ್ ಸಿನಿಮಾಗಳಿಗೆ 55ರಿಂದ 60 ಕಟೌಟ್‌ ನಿರ್ಮಾಣ ಆಗುತ್ತಿತ್ತು. ಆದರೆ ಈ ಬಾರಿ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದಿದ್ದಾರೆ.

    ಅಭಿಮಾನಿಗಳಿಂದ 30 ಕಟೌಟ್

    ಅಭಿಮಾನಿಗಳಿಂದ 30 ಕಟೌಟ್

    ಸಾಮಾನ್ಯವಾಗಿ ಚಿತ್ರದ ನಿರ್ಮಾಪಕರು ಕಟೌಟ್‌ಗಳನ್ನು ಮಾಡಿಸುತ್ತಾರೆ. ಈ ಬಾರಿ ಅಭಿಮಾನಿಗಳು ಕೂಡ ಕೈ ಜೋಡಿಸಿತ್ತು. ಕೆಲ ಊರುಗಳಿಗೆ ತಮ್ಮದೇ ಹಣದಿಂದ ಕಟೌಟ್ ಮಾಡಿಸಿಕೊಂಡು ಹೋಗಿ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಚಿತ್ರತಂಡ 50ರಿಂದ 60 ಕಟೌಟ್‌ಗೆ ಆರ್ಡರ್ ಕೊಟ್ಟಿದ್ದು, ಅಭಿಮಾನಿಗಳು 30 ಕಟೌಟ್‌ ಮಾಡಿಸುತ್ತಿರುವ ಅಂದಾಜಿದೆ. ಆನಂದ್ ಹೇಳುವ ಪ್ರಚಾರ ಅಭಿಮಾನಿ ಇನ್ನು ಆರ್ಡರ್ ಕೊಡುತ್ತಲೇ ಇದ್ದಾರೆ, ಈ ಸಂಖ್ಯೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಗೊತ್ತಿಲ್ಲ ಎಂದಿದ್ದಾರೆ. ಈಗಾಗಲೇ ದೂರದ ಊರುಗಳಿಗೆ 'ಕ್ರಾಂತಿ' ದರ್ಶನ್ ಕಟೌಟ್‌ಗಳು ರವಾನೆ ಆಗುತ್ತಿದೆ.

    ಕೆಜಿ ರಸ್ತೆಯಲ್ಲಿ 72 ಅಡಿ ಕಟೌಟ್

    ಕೆಜಿ ರಸ್ತೆಯಲ್ಲಿ 72 ಅಡಿ ಕಟೌಟ್

    ಇನ್ನು ಕೆಜಿ ರಸ್ತೆಯ ಅನುಪಮಾ ಥಿಯೇಟರ್‌ನಲ್ಲಿ 'ಕ್ರಾಂತಿ' ಸಿನಿಮಾ ರಿಲೀಸ್ ಆಗಲಿದೆ. ಮೇನ್ ಥಿಯೇಟರ್ ಎದುರು 72 ಅಡಿ ಕಟೌಟ್ ಎದ್ದು ನಿಲ್ಲಲಿದೆ ಎಂದು ಆನಂದ್ ಹೇಳಿದ್ದಾರೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳಿಗೆ ಮಾತ್ರ ಇಷ್ಟು ದೊಡ್ಡ ಕಟೌಟ್ ಹಾಕಲಾಗುತ್ತದೆ. ಈ ಹಿಂದೆ KGF ಚಾಪ್ಟರ್ 1 ಚಿತ್ರಕ್ಕೂ ಕೂಡ ನರ್ತಕಿ ಥಿಯೇಟರ್ ಮುಂದೆ 72 ಅಡಿ ಕಟೌಟ್ ಎದ್ದು ನಿಂತಿತ್ತು. ಒಟ್ನಲ್ಲಿ 'ಕ್ರಾಂತಿ' ಕಟೌಟ್ ಭರಾಟೆ ಜೋರಾಗಿರುತ್ತೆ ಎನ್ನುವುದರ ಮಾಹಿತಿ ಸಿಗುತ್ತಿದೆ.

    'ಕ್ರಾಂತಿ' ಟಿಕೆಟ್ಸ್ ಸೋಲ್ಡೌಟ್

    'ಕ್ರಾಂತಿ' ಟಿಕೆಟ್ಸ್ ಸೋಲ್ಡೌಟ್

    ಕೆಲವೇ ಗಂಟೆಗಳ ಹಿಂದೆ 'ಕ್ರಾಂತಿ' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಕೆಲವೇ ನಿಮಿಷಗಳಲ್ಲಿ ಪ್ರಸನ್ನ ಹಾಗೂ ವಿರೇಶ್ ಚಿತ್ರಮಂದಿರದ ಅರ್ಲಿ ಮಾರ್ನಿಂಗ್ ಶೋಗಳ ಟಿಕೆಟ್ಸ್ ಸೋಲ್ಡೌಟ್ ಆಗಿದೆ. ಹಲವು ಶೋಗಳು ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ನಿರ್ಮಾಣದ 'ಕ್ರಾಂತಿ' ಚಿತ್ರದಲ್ಲಿ ಅಕ್ಷರ ಕ್ರಾಂತಿಯ ಕಥೆ ಹೇಳಲಾಗುತ್ತಿದೆ. ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಆರ್ಮುಗ ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

    English summary
    Challenging star Drashan Starrer Kranti Movie cutouts creates record. pan-India film Kranti to release in theatres on January 26, 2023. know more.
    Sunday, January 22, 2023, 10:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X