ಕರುನಾಡಿನೆಲ್ಲೆಡೆ ಡೆವಿಲ್ ಮೆರವಣಿಗೆ ; ದರ್ಶನ್ ಅಬ್ಬರ- ಚಿತ್ರದ ಅವಧಿ ಎಷ್ಟು ? ಸೆನ್ಸಾರ್‌ ರಿಪೋರ್ಟ್‌ನಲ್ಲೇನಿದೆ..?

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಇನ್ನೂ ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಚಿತ್ರಮಂದಿರದ ಮುಂದೆ....

ಸ್ಟಾರ್ ಕಟ್ಟುವುದು.. ದೊಡ್ಡ ಗಾತ್ರದ ಹಾರ ಹಾಕುವುದು.. ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು.. ಕಟೌಟು ನಿರ್ಮಿಸುವುದು.. ಥಿಯೇಟರಿನ ಒಳಗೆ ನಾಣ್ಯಗಳನ್ನು.. ಹೂವನ್ನು ಎರಚುವುದು.. ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು.. ಜೊತೆಗೆ ಜೈಕಾರ ಮೊಳಗಿಸುವುದು ಅಷ್ಟೇ ಅಲ್ಲ.

CHALLENGING STAR IS BACK Darshan s The Devil Certified U A with a MASSIVE 2 Hour 49 Min Runtime

ತಮ್ಮ ಅಭಿಮಾನದ ನಟನ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಲೇ ಜೊತೆ ಜೊತೆಗೆ ಸಮಾಜಸ್ನೇಹಿ, ಪರಿಸರವ್ಯಾಮೋಹಿ ಕೆಲಸಗಳನ್ನು ಮಾಡುವುದು ಕೂಡ ಅಭಿಮಾನವೇ.

ಆದರೆ.. ದೌರ್ಭಾಗ್ಯ. ಇಂತಹ ಅಭಿಮಾನವನ್ನು ಪಡೆದ ಕನ್ನಡದ ಕೆಲವೇ ಕೆಲ ಸ್ಟಾರ್‌ಗಳಲ್ಲಿ ಒಬ್ಬರಾದ ದರ್ಶನ್ ಈ ಬಾರಿ ಅಭಿಮಾನದ ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಳು ಸಾಧ್ಯವಾಗುತ್ತಿಲ್ಲ. ಬದಲಿಗೆ ಜೈಲಿನಲ್ಲಿ ಇದ್ದಾರೆ.

ಹಾಗಂಥ, ದರ್ಶನ್ ಅಭಿಮಾನಿಗಳ ಉತ್ಸಾಹ ಕಡಿಮೆಯಾಗಿಲ್ಲ. ''ಡೆವಿಲ್'' ಜಾತ್ರೆ ಕಳೆಗುಂದಿಲ್ಲ. ಬದಲಿಗೆ ದರ್ಶನ್ ಅವರ ಹಿಂಧಿನ ಯಾವ ಚಿತ್ರಕ್ಕೂ ಅಭಿಮಾನಿಗಳಲ್ಲಿ ಕಾಣಿಸದ ಕಾತುರತೆ-ಆತುರತೆ ಈ ಚಿತ್ರದ ವಿಚಾರದಲ್ಲಿ ಕಂಡು ಬರುತ್ತಿದೆ. ಅಭಿಮಾನಿಗಳು ಟಿಕೆಟ್‌ಗಳನ್ನು ಮುಗಿ ಬಿದ್ದು ಖರೀದಿ ಮಾಡುತ್ತಿದ್ದಾರೆ. ಚಿತ್ರದ ಕುರಿತು ವಿಪರೀತ ನಿರೀಕ್ಷೆಯನ್ನಿಟ್ಟುಕೊಂಡು ಕುಂತಿದ್ದಾರೆ.

ಹೀಗೆ ದರ್ಶನ್ ದರ್ಶನವನ್ನು ಬೆಳ್ಳಿತೆರೆಯಲ್ಲಿ ಮಾಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ನಾವು ಈ ಚಿತ್ರದ ಸೆನ್ಸಾರ್ ರಿಪೋರ್ಟ್‌ ಕುರಿತು ಮಾಹಿತಿಯನ್ನು ಹೆಕ್ಕಿ ತಂದಿದ್ದೇವೆ. ಹಾಗಿದ್ದರೆ ''ಡೆವಿಲ್'' ಚಿತ್ರದ ಅವಧಿ ಎಷ್ಟು. ಸೆನ್ಸಾರ್ ಅಗ್ನಿ ಪರೀಕ್ಷೆಯಲ್ಲಿ ''ಡೆವಿಲ್'' ಚಿತ್ರ ಯಾವ ಸರ್ಟಿಫಿಕೆಟ್ ಜೊತೆ ಪಾಸಾಗಿದೆ ಎಂದು ತಿಳಿಯಲು ಮುಂದೆ ಓದಿ.

CHALLENGING STAR IS BACK Darshan s The Devil Certified U A with a MASSIVE 2 Hour 49 Min Runtime

ದಿ ಡೆವಿಲ್ ರನ್‌ ಟೈಮ್ ಎಷ್ಟು?

ಮಿಲನಾ ಪ್ರಕಾಶ್ ನಿರ್ದೇಶನದ ''ಡೆವಿಲ್'' ಎರಡಲ್ಲ.. ಎರಡೂವರೆ ಗಂಟೆಯಲ್ಲ. ಬದಲಿಗೆ ಚಿತ್ರದ ಒಟ್ಟು ಅವಧಿ 2 ಗಂಟೆ 49 ನಿಮಿಷ ಇದೆ. ( 169 ನಿಮಿಷ ) ಅಂದರೆ ಹತ್ ಹತ್ರ ಮೂರು ಗಂಟೆಯ ಸಿನಿಮಾ ಇದು. ಇತ್ತೀಚೆನ ವರ್ಷಗಳಲ್ಲಿ ಇಷ್ಟೊಂದು ಅವಧಿಯ ಕನ್ನಡದಲ್ಲಿ ಬಂದಿದ್ದು ವಿರಳ. ದರ್ಶನ್ ಅಭಿನಯದ ಕುರುಕ್ಷೇತ್ರ 2 ಗಂಟೆ 50 ನಿಮಿಷ ಇತ್ತು. ಇನ್ನು ಕೆ.ಜಿ.ಎಫ್ 2 ಗಂಟೆ 56 ನಿಮಿಷ ಇತ್ತು. ಇವೆರಡು ಚಿತ್ರಗಳನ್ನು ಹೊರತು ಪಡಿಸಿದರೆ ಅವನೇ ಶ್ರೀಮನ್ನಾರಾಯಣ 3 ಗಂಟೆ 4 ನಿಮಿಷ ಇತ್ತು. ಈ ಸಾಲಿಗೆ ಈಗ ಡೆವಿಲ್ ಕೂಡ ಸೇರಿಕೊಂಡಿದೆ. 2 ಗಂಟೆ 49 ನಿಮಿಷದ ಮನರಂಜನೆಯ ರಸದೌತಣ ಪ್ರೇಕ್ಷಕರಿಗೆ ಮತ್ತು ಅಭಿಮಾನಿಗಳಿಗೆ ಸಿಗಲಿದೆ.

ಸೆನ್ಸಾರ್‌ನಲ್ಲಿ ಸಿಕ್ಕ ಪ್ರಮಾಣ ಪತ್ರ ಯಾವುದು ?

ಇನ್ನೂ ಸೆನ್ಸಾರ್ ಅಗ್ನಿ ಪರೀಕ್ಷೆಯಲ್ಲಿ ಕೂಡ ಚಿತ್ರ ಪಾಸಾಗಿದ್ದು ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಲಾಗಿದೆ. ಅಂದರೆ 16 ವರ್ಷದ ಮೇಲಿರುವವರು ಈ ಚಿತ್ರವನ್ನು ನೋಡಬಹುದು. ಈ ಹಿಂದೆ ತೆರೆಗೆ ಬಂದ ದರ್ಶನ್ ಅಭಿನಯದ ''ಕಾಟೇರಾ''.. ''ಕ್ರಾಂತಿ''.. ''ರಾಬರ್ಟ್‌''.. ''ಕುರುಕ್ಷೇತ್ರ''.. ''ಯಜಮಾನ'' ಚಿತ್ರಗಳಿಗೂ ಕೂಡ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರವನ್ನು ನೀಡಿತ್ತು ಎನ್ನುವುದು ನಿಮ್ಮ ಗಮನಕ್ಕಿರಲಿ.

ಇನ್ನುಳಿದಂತೆ ಈ ಮೊದಲು ಡಿಸೆಂಬರ್ 12ರಂದು ''ಡೆವಿಲ್'' ಬೆಳ್ಳಿತೆರೆಯ ಮೇಲೆ ಧಗಧಗಿಸಬೇಕಿತ್ತು. ಆದರೆ ಆಗಲೇ ಹೇಳಿದಂತೆ ಅಭಿಮಾನದ ಒಕ್ಕೂರಿಲಿನ ಅಭಿಪ್ರಾಯದಿಂದ ಈ ಚಿತ್ರವನ್ನು ಒಂದು ದಿನ ಮೊದಲು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಇನ್ನು ಜೈಲಿಂದಲೇ ದರ್ಶನ್ ತಮ್ಮ ಅಭಿಮಾನಿಗಳಿಗೆ ತಮ್ಮ ಮನದ ಮಾತುಗಳನ್ನು ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ತಲುಪಿಸಿದ್ದು ''ಡೆವಿಲ್‌'' ಅಬ್ಬರಕ್ಕೆ ಬಾಕ್ಸಾಫೀಸ್‌ನಲ್ಲಿ ಯಾವೆಲ್ಲಾ ದಾಖಲೆ ಪುಡಿಪುಡಿಯಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Official: Darshan Thoogudeepa starrer 'The Devil' receives its U/A censor certificate. Find out the final 169-minute run time and release details here.
Read more about: devil darshan filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X